ತೆಲಂಗಾಣದಲ್ಲಿ ಜಗತ್ತಿನ ಅತಿ ದೊಡ್ಡ ಪಂಪ್ ಹೌಸ್ ಉದ್ಘಾಟನೆ
ಹೈದರಾಬಾದ್, ಜೂನ್ 21: ಜಗತ್ತಿನ ಅತಿ ದೊಡ್ಡ ಬಹು ಹಂತ, ಬಹು ಉದ್ದೇಶದ ನೀರಾವರಿ ಯೋಜನೆಯಾದ 'ಕಾಳೇಶ್ವರಂ ನೀರಾವರಿ ಯೋಜನೆ'ಯನ್ನು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಶುಕ್ರವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಉಪಸ್ಥಿತರಿದ್ದರು.
ಈ ಯೋಜನೆಯು ಸುಮಾರು 45ಲಕ್ಷ ಎಕರೆ ಭೂಮಿಗೆ ನೀರು ಒದಗಿಸುವ ನಿರೀಕ್ಷೆಯಿದೆ. ಇದರಿಂದ ಈ ಭಾಗಗಳಲ್ಲಿ ವರ್ಷಕ್ಕೆ ಎರಡು ಬೆಳೆ ಬೆಳೆಯಲು ಸಾಧ್ಯವಾಗಲಿದೆ. ಅಲ್ಲದೆ, ಇದು ರಾಜ್ಯದ ಶೇ 70ರಷ್ಟು ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲಿದೆ. ಅಂದಾಜು 16 ಸಾವಿರ ಟಿಎಂಸಿ ನೀರು ಕೈಗಾರಿಕೆಗಳಿಗೆ ದೊರಕಲಿದೆ ಎಂದು ಕೆಸಿಆರ್ ವಿವರಿಸಿದರು.

ಇದೇ ಸಂದರ್ಭದಲ್ಲಿ ಅವರು ಜಗತ್ತಿನ ಅತಿ ದೊಡ್ಡ ಪಂಪ್‌ಹೌಸ್‌ಅನ್ನು ಮೇಡಿಗಡ್ಡದಲ್ಲಿ ಉದ್ಘಾಟಿಸಿದರು. 40 ಮೆಗಾ ವ್ಯಾಟ್ ಸಾಮರ್ಥ್ಯದ ಪಂಪ್ ಹೌಸ್‌ನ ಪ್ರತಿ ಘಟಕಗಳೂ 60 ಕ್ಯೂಸೆಕ್ಸ್ ನೀರನ್ನು ಮೇಲೆತ್ತಬಲ್ಲದು. ಇದನ್ನು ಗೋದಾವರಿ ನದಿಯ 91 ಮೀಟರ್ ಮೆಲ್ಭಾಗದಲ್ಲಿ ನಿರ್ಮಿಸಲಾಗಿದೆ. ಒಟ್ಟು 660 ಕ್ಯೂಸೆಕ್ಸ್‌ನಷ್ಟು ನೀರೆತ್ತುವ ಸಾಮರ್ಥ್ಯ ಹೊಂದಿದೆ.
ಮೊದಲ ಹಂತದ ಭಾಗವಾಗಿ ಒಟ್ಟು 440 ಮೆಗಾವ್ಯಾಟ್ ಸಾಮರ್ಥ್ಯದ 11 ಘಟಕಗಳು ಕಾರ್ಯಾರಂಭ ಮಾಡುತ್ತಿವೆ. ಈ ಪಂಪ್ ಹೌಸ್‌ಅನ್ನು ಕೇವಲ ಒಂದೂವರೆ ವರ್ಷದಲ್ಲಿ ನಿರ್ಮಿಸಲಾಗಿದೆ.












Click it and Unblock the Notifications