ತೆಲಂಗಾಣದಲ್ಲಿ ಕಮಲ 'ಕೈ' ಹಿಡಿದ ಹಿರಿಯ ಕಾಂಗ್ರೆಸ್ಸಿಗನ ಪತ್ನಿ

ಹೈದರಾಬಾದ್, ಅಕ್ಟೋಬರ್ 11: ಹಿರಿಯ ಕಾಂಗ್ರೆಸ್ ನಾಯಕ ಸಿ ದಾವೋದರ್ ರಾಜನರಸಿಂಹ ಅವರ ಪತ್ನಿ, ಸಾಮಾಜಿಕ ಕಾರ್ಯಕರ್ತೆ ಪದ್ಮಿನಿ ರೆಡ್ಡಿ ಅವರು ಇಂದು ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿದ್ದಾರೆ.

ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಕಿರಣ್ ಕುಮಾರ್ ರೆಡ್ಡಿ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿ ರಾಜನರಸಿಂಹ ಅವರು ಕಾರ್ಯ ನಿರ್ವಹಿಸಿದ್ದರು.

ಮೇಡಕ್ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಮನೆ ಮಾತಾಗಿರುವ ಶ್ರೀಮತಿ ಪದ್ಮಿನಿ ರೆಡ್ಡಿ ಅವರು ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಬಿಜೆಪಿ ಸೇರಿರುವುದು ಸಂತಸ ತಂದಿದೆ ಎಂದು ತೆಲಂಗಾಣ ಬಿಜೆಪಿಯ ಅಧ್ಯಕ್ಷ ಕೆ ಲಕ್ಷ್ಮಣ್ ಪ್ರತಿಕ್ರಿಯಿಸಿದ್ದಾರೆ.

Wife of senior Congress leader joins BJP in Telangana

ಚಂದ್ರಶೇಖರ್ ರಾವ್ ಅವರ ಟಿಆರ್ ಎಸ್ ಸರ್ಕಾರವು 2,800 ಕೋಟಿ ಸಾಲ ಪಡೆದರೂ ಸ್ವಸಹಾಯ ಸಂಘದ ಒಬ್ಬ ಮಹಿಳೆಯೂ ಇದರ ಪ್ರಯೋಜನ ಸಿಕ್ಕಿಲ್ಲ. ಮುಂದಿನ ಚುನಾವಣೆಯಲ್ಲಿ ಆಯ್ಕೆಯಾದರೆ ಸಾಲಮನ್ನಾ ನನ್ನ ಮೊದಲ ಆದ್ಯತೆ, ಮೋದಿ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ ಮುಂತಾದವು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿವೆ ಎಂದು ಪದ್ಮಿನಿ ರೆಡ್ಡಿ ಹೇಳಿದರು.

Wife of senior Congress leader joins BJP in Telangana

ಡಿಸೆಂಬರ್ 07ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ತಯಾರಿ ಜೋರಾಗಿ ನಡೆದಿದೆ. ರಾಜ್ಯ ಕಾಂಗ್ರೆಸ್ಸಿನ ಪ್ರಣಾಳಿಕಾ ಸಮಿತಿಯ ಮುಖ್ಯಸ್ಥರಾಗಿರುವ ದಾವೋದರ್ ರಾಜನರಸಿಂಹ ಅವರ ಪತ್ನಿ ಈಗ ಬಿಜೆಪಿ ಸೇರಿರುವುದು, ರಾಜಕೀಯ ವಲಯದಲ್ಲಿ ಹಲವರ ಹುಬ್ಬೇರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+