ಮಾಜಿ ಪತ್ನಿಯ ಜುಟ್ಟು ಹಿಡಿದು ಹಲ್ಲೆ ಮಾಡಿದ ತೆಲಂಗಾಣ ರಾಜಕಾರಣಿ!

Posted By:
Subscribe to Oneindia Kannada
   ಮಾಜಿ ಪತ್ನಿಯ ಜುಟ್ಟು ಹಿಡಿದು ಹಲ್ಲೆ ಮಾಡಿದ ತೆಲಂಗಾಣ ರಾಜಕಾರಣಿ | Oneindia Kannada

   ಹೈದರಾಬಾದ್, ನವೆಂಬರ್ 21: ತನ್ನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಪತ್ನಿಯನ್ನು ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಮುಖಂಡನೊಬ್ಬ ಸಾರ್ವಜನಿಕವಾಗಿ ಥಳಿಸಿ, ಕಿರುಕುಳ ನೀಡಿದ ವಿಡಿಯೋವೊಂದು ಇದೀಗ ಸಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿದೆ.

   ನಟಿ ಪಂಚಮಿ 2ನೇ ಪತ್ನಿ, ಕೌಟುಂಬಿಕ ಆಸ್ತಿ ವಿವಾದದಲ್ಲಿ ಶಾಸಕ ಅನ್ಸಾರಿ

   ಟಿಆರ್ ಎಸ್ ಮುಖಂಡ ಶ್ರೀನಿವಾಸ್ ರೆಡ್ಡಿ ಎಂಬುವವರ ಮೊದಲ ಪತ್ನಿ, ರೆಡ್ಡಿಯ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದ ಕೋಪಗೊಂಡ ಶ್ರೀನಿವಾಸ್ ರೆಡ್ಡಿ ಆಕೆಗೆ ಏಕಾಏಕಿ ಥಳಿಸುವುದಕ್ಕೆ ಆರಂಭಿಸಿದ್ದು, ಇದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಮೊದಲ ಪತ್ನಿ ಮತ್ತು ಎರಡನೇ ಪತ್ನಿಯರ ನಡುವೆ ನಡೆದ ವಾಗ್ವಾದವೇ ಈ ಘಟನೆಗೆ ಕಾರಣ.

   ಮಾಜಿ ಪತ್ನಿಯ ಜುಟ್ಟು ಹಿಡಿದು, ಥಳಿಸಿ, ತಳ್ಳಿ, ನಿರ್ದಯವಾಗಿ ವರ್ತಿಸಿದ ರೆಡ್ಡಿ ವಿರುದ್ಧ ಆಕೆಯ ಕುಟುಂಬಸ್ಥರು 'ಕೊಲೆಯತ್ನ'ದ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು, ಶ್ರೀನಿವಾಸ್ ರೆಡ್ಡಿಯನ್ನು ವಶಕ್ಕೆ ಪಡೆದಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Telangana Rashtra Samithi (TRS) leader, angered by his first wife staging protests outside his home, harassed her and mercilessly trashed her in public. The video becomes viral now.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ