• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಯೋಗಿ ಆದಿತ್ಯನಾಥ್ ರೋಡ್ ಶೋ

|

ಹೈದರಾಬಾದ್, ನವೆಂಬರ್ 28: ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಸನ್ನಿಹಿತವಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ರೋಡ್‌ ಶೋ ನಡೆಸಿದ್ದಾರೆ.

ಮಲ್‌ಕಾಜ್‌ಗಿರಿಯಲ್ಲಿ ಮೆರವಣಿಗೆ ನಡೆಸಿದ್ದಾರೆ. ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಖುದ್ದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅಲ್ಲದೆ ಅನೇಕ ಹಿರಿಯ ಮುಖಂಡರು ಇದೇ ಮೊದಲ ಬಾರಿಗೆ ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದಾರೆ.

ಈ ವಾರದಲ್ಲಿ ಪ್ರಚಾರ ಕೈಗೊಳ್ಳಲಿರುವ ಹಿರಿಯ ನಾಯಕರ ಪಟ್ಟಿಯನ್ನು ತೆಲಂಗಾಣ ಬಿಜೆಪಿ ನಾಯಕರು ಪ್ರಕಟಿಸಿದ್ದಾರೆ.

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಜೆಪಿನಡ್ಡಾ, ಆದಿತ್ಯನಾಥ್, ಅಮಿತ್ ಶಾ ಹೀಗೆ ಅನೇಕ ನಾಯಕರು ಪ್ರಚಾರ ನಡೆಸುತ್ತಿದ್ದಾರೆ.

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಮೋದಿ, ಶಾರಿಂದ ಪ್ರಚಾರ

ಸ್ಥಳೀಯ ಮುಖಂಡರೂ ಆದ ಕೇಂದ್ರ ಗೃಹ ಖಾತೆ ಸಚಿವ ಕಿಷನ್ ರೆಡ್ಡಿ, ಪ್ರಕಾಶ ಜಾವ್ಡೇಕರ್, ಸ್ಮೃತಿ ಇರಾನಿ, ಸಂಸದ ತೇಜಸ್ವಿ ಸೂರ್ಯ ಈಗಾಗಲೇ ನಗರಾದ್ಯಂತ ಪ್ರಚಾರ ನಡೆಸಿದ್ದಾರೆ.

ಪ್ರತಿಭಟನೆಯ ಹಿನ್ನೆಲೆಯಿಂದಲೇ ಚಂದ್ರಶೇಖರ್ ರಾವ್ ನೇತೃತ್ವದ ಡಿಆರ್ ಎಸ್ 2014ರಲ್ಲಿ ಅಧಿಕಾರಕ್ಕೆ ಬಂದಿತ್ತು. 2019ರಲ್ಲಿ ಕೆಸಿಆರ್ ಪುತ್ರಿ ಕಲ್ಯಕುಂತಲ ಕವಿತಾ ಅವರು ನಿಜಾಮಾಬಾದ್ ಕ್ಷೇತ್ರದಲ್ಲಿ ಸೋತಿದ್ದರು. ಜತೆಗೆ ಇತರೆ ಮೂರು ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಿತ್ತು.

English summary
Uttar Pradesh chief minister and senior BJP leader Yogi Adityanath on Saturday held a mega roadshow in Malkajgiri area of Hyderabad
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X