ಹೈದರಾಬಾದ್ : ನೀಲಿ ಚಿತ್ರ ಹಂಚುತ್ತಿದ್ದ ಅಮೆರಿಕ ನಾಗರಿಕರನ ಬಂಧನ

Posted By:
Subscribe to Oneindia Kannada

ಹೈದರಾಬಾದ್, ಜನವರಿ 18: ಮಕ್ಕಳ ನೀಲಿಚಿತ್ರಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿದ್ದ ಆರೋಪದ ಮೇಲೆ ಅಮೆರಿಕದ ನಾಗರಿಕನೊಬ್ಬನನ್ನು ಹೈದರಾಬಾದಿನಲ್ಲಿ ಬಂಧಿಸಲಾಗಿದೆ. ತೆಲಂಗಾಣದ ಸೈಬರ್ ಕ್ರೈಂ ವಿಭಾಗದ ಸಿಐಡಿ ತಂಡ 42 ವರ್ಷದ ಜೇಮ್ಸ್ ಜೋನ್ಸ್ ಎಂಬ ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಹೈದರಾಬಾದಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾನೂನು ಸಲಹೆಗಾರರಾಗಿ ಜೇಮ್ಸ್ ಕಾರ್ಯನಿರ್ವಹಿಸುತ್ತಿದ್ದರು. ಚೈಲ್ಡ್ ಪಾರ್ನ್ ವಿಡಿಯೋ ಹಾಗೂ ಚಿತ್ರ ಡೌನ್‌ಲೋಡ್ ಮಾಡುತ್ತಿದ್ದ ಜೇಮ್ಸ್ ಮೇಲೆ ಕೆಲದಿನಗಳಿಂದ ಸೈಬರ್‌ ಕ್ರೈಂ ಅಧಿಕಾರಿಗಳು ನಿಗಾ ವಹಿಸಿದ್ದರು. ಜೇಮ್ಸ್ ಬಳಸುತ್ತಿದ್ದ ಲ್ಯಾಪ್ ಟಾಪ್, ಇಂಟರ್ನೆಟ್ ಟ್ರೇಸ್ ಮಾಡಿ ಐಪಿ ಅಡ್ರೆಸ್‌ ಮೂಲಕ ಈತನನ್ನು ಪತ್ತೆಹಚ್ಚಲಾಗಿದೆ.

US citizen held for circulating child pornography in Hyderabad

ಹೈಟೆಕ್‌ ಸಿಟಿ ಮಾದಾಪುರದಲ್ಲಿ ಜೇಮ್ಸ್ ವಾಸವಾಗಿದ್ದು, ವಿವಿಧ ವೆಬ್ ಸೈಟ್ ಗಳಿಂದ ಚೈಲ್ಡ್ ಪಾರ್ನ್ ವಿಡಿಯೋ ಡೌನ್‌ಲೋಡ್ ಮಾಡಿ, ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡುತ್ತಿದ್ದ. ಈತನ ಲ್ಯಾಪ್‌ಟಾಪ್‌ನಲ್ಲಿ ಸುಮಾರು 29 ಸಾವಿರಕ್ಕೂ ಹೆಚ್ಚು ಚೈಲ್ಡ್ ಪಾರ್ನ್ ವಿಡಿಯೋಗಳು ಸಿಕ್ಕಿವೆ. ಐಫೋನ್‌ ಹಾಗೂ ಹಾರ್ಡ್‌ ಡಿಸ್ಕ್‌ನಲ್ಲಿ ವಯಸ್ಕರ ನೀಲಿಚಿತ್ರಗಳಿವೆ ಎಂದು ಪೊಲೀಸರು ಹೇಳಿದ್ದಾರೆ.


ಐಟಿ ಕಾಯ್ದೆ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರ್ಉವ ಹೈಟೆಕ್ ಸಿಟಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A US citizen working with a multi-national law firm in Hyderabad has been arrested by the Cyber Crime Wing of Telangana Police, for allegedly downloading and circulating child pornography in the form of videos and images.
Please Wait while comments are loading...