ಆಂಧ್ರ ವಿಭಜನೆ ಕಾವು ಟ್ವಿಟ್ಟರ್ ಗೂ ತಟ್ಟಿದೆ

ಬೆಂಗಳೂರು, ಫೆ.19: ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆ ಖಾತ್ರಿಯಾಗುತ್ತಿದ್ದಂತೆ ಆಂಧ್ರಪ್ರದೇಶದಲ್ಲಿ ಪ್ರತಿಭಟನೆಗಳ ಸರಣಿ ಆರಂಭಗೊಂಡಿದೆ. ತೆಲುಗು ಜನರ ಐಕ್ಯತೆಯನ್ನು ಮುರಿಯುವಲ್ಲಿ ಯುಪಿಎ ಸರ್ಕಾರ ಸಫಲವಾಗಿದ್ದು, ಸಂಸತ್ತಿನಲ್ಲಿ ತೆಲಂಗಾಣ ರಾಜ್ಯ ರಚನೆ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡಿದೆ. ಈ ನಡುವೆ ಆಂಧ್ರ ವಿಭಜನೆ ಕಾವು ಸಾಮಾಜಿಕ ಜಾಲ ತಾಣಗಳಲ್ಲಿ ಹೊತ್ತಿ ಉರಿಯುತ್ತಿದ್ದು, ತೆಲಂಗಾಣ ವಿರೋಧ ಮಾತನಾಡುವ ಗಣ್ಯರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆ ಮಸೂದೆಗೆ ಯುಪಿಎ ಸಚಿವ ಸಂಪುಟ ಅಸ್ತು ಎಂದಿತ್ತು. ಹೈದರಾಬಾದ್ ನಗರವನ್ನು ಎರಡು ರಾಜ್ಯಗಳಿಗೆ ಜಂಟಿ ರಾಜಧಾನಿಯಾಗಲಿದೆ. ರಾಜ್ಯ ರಚನೆ ನಂತರ ನೆಲ, ಜಲ, ಗಡಿ ಇತರೆ ಸಂಪನ್ಮೂಲಗಳ ಹಂಚಿಕೆ ಜತೆಗೆ ಸಿನಿಮಾ ರಂಗದವರಿಗೂ ಕೊಂಚ ತಲೆ ಬಿಸಿಯಾಗಿದೆ. [ಆಂಧ್ರ ಸಿಎಂ ಕಿರಣ್ ರೆಡ್ಡಿ ರಾಜೀನಾಮೆ]

ನಟ ಸಿದ್ದಾರ್ಥ್ ವಿರುದ್ಧ ತೆಲಂಗಾಣ ಅಭಿಮಾನಿಗಳು ಮುಗಿಬಿದ್ದಿದ್ದು, ತೆಲಂಗಾಣಕ್ಕಾಗಿ ಅಮಾಯಕರು ಪ್ರಾಣ ತೆತ್ತಾಗ ನೀನು ಎಲ್ಲಿದ್ದೆ ಎಂದು ನೇರವಾಗಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. ಇನ್ನೂ ನಟ, ರಾಜಕಾರಣಿ ಚಿರಂಜೀವಿ ಅವರು ಹೈದರಾಬಾದ್ ಕಡೆ ತಲೆ ಹಾಕಿ ಮಲಗುವ ಯೋಚಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. [ಆಂಧ್ರ ವಿಭಜನೆ, ಕರ್ನಾಟಕ ದೊಡ್ಡಣ್ಣ, ಲಾಭ ಏನಣ್ಣ?]

ಒಟ್ಟಾರೆ, ರಾಜ್ಯ ಹಾಗೂ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ವಿರುದ್ಧ ತೆಲುಗು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಬಂದಿರುವ ಆಕ್ರೋಶ, ಹತಾಶೆ, ಆಕ್ರಂದನದ ನುಡಿಗಳನ್ನು ಇಲ್ಲಿ ನೀಡಲಾಗಿದೆ ನೋಡಿ...

ಆಂಧ್ರ ವಿಭಜನೆ ಕಾವು ಟ್ವಿಟ್ಟರ್ ಗೂ ತಟ್ಟಿದೆ

ಆಂಧ್ರ ವಿಭಜನೆ ಕಾವು ಟ್ವಿಟ್ಟರ್ ಗೂ ತಟ್ಟಿದೆ

ತೆಲುಗುದೇಶಂ ಪಾರ್ಟಿ, ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೀದಿಳಿಗಿದು ಸಮೈಕ್ಯಾಂದ್ರಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಸೀಮಾಂಧ್ರ ಹಾಗೂ ಕರಾವಳಿ ಭಾಗಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ

ಜನರೇ ಎಚ್ಚರ ಕಿರಣ್ ಕೂಡಾ ಡ್ರಾಮಾ ಕ್ವೀನ್

ಜನರೇ ಎಚ್ಚರ ಕಿರಣ್ ಕೂಡಾ ಡ್ರಾಮಾ ಕ್ವೀನ್.. ರಾಜೀನಾಮೆ ಕೊಟ್ಟ ತಕ್ಷಣ ಅಖಂಡ ಆಂಧ್ರದ ನಾಯಕನಾಗಲು ಸಾಧ್ಯವಿಲ್ಲ

ಇಷ್ಟಕ್ಕೂ ದೇಶದ 29ನೇ ರಾಜ್ಯ ಯಾವುದು?

ತೆಲಂಗಾಣವೋ ಅಥವಾ ಸೀಮಾಂಧ್ರವೋ ಜನರಿಗೆ ಇನ್ನೂ ಗೊಂದಲ ಮುಂದುವರೆದಿದೆ.

ಹೈದರಾಬಾದ್ ಕಥೆ ಈಗಲೇ ನಿರ್ಧಾರವಾಗಲಿ

ಸೀಮಾಂಧ್ರ ಹಾಗೂ ತೆಲಂಗಾಣ ಎರಡು ಭಾಗಕ್ಕೂ ಹೈದರಾಬಾದ್ ಬೇಕು. ಕೇಂದ್ರಾಡಳಿತ ಪ್ರದೇಶ ಮಾಡಿಬಿಡಿ

ಚಿರಂಜೀವಿ ಮಾತ್ರ ಸೀಟು ಬಿಟ್ಟು ಕದಲಲ್ಲ

ಯಾರು ಬೇಕಾದರೂ ಕುರ್ಚಿ ಬಿಟ್ಟು ಬೀದಿಗಿಳಿಯಲಿ ನಾನಂತೂ ಕುರ್ಚಿ ಬಿಡಲ್ಲ ಎನ್ನುತ್ತಾರೆ ಚಿರಂಜೀವಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+