ಬಾಬಾ ವಾಂಗಾ ಭವಿಷ್ಯ ವೈರಲ್! ಜುಲೈ-ಡಿಸೆಂಬರ್‌ನಲ್ಲಿ ಈ 5 ರಾಶಿಯವರಿಗೆ ಕೋಟಿ ಸಂಪತ್ತಿನ ಯೋಗವಂತೆ!

ಜಗತ್ತಿನಾದ್ಯಂತ ಪ್ರಸಿದ್ಧಿಯಾಗಿರುವ ಬಾಬಾ ವಂಗಾ ಇದುವರೆಗೆ ಹೇಳಿದ ಭವಿಷ್ಯವಾಣಿಗಳು ನಿಖರವಾಗಿವೆ ಎಂದು ಪ್ರತೀತಿ. ಕಣ್ಣು ಕಾಣದ ಬಾಬಾ ವಂಗಾ ಬಲ್ಗೇರಿಯಾದವಳು. ಅವರು ಹೇಳಿದ ಅನೇಕ ಭವಿಷ್ಯಗಳು ನಿಜವಾಗಿವೆ ಎಂಬ ನಂಬಿಕೆಯಿಂದ ಅವರ ಹೆಸರು ಆಗಾಗ ಸುದ್ದಿಯಾಗುತ್ತದೆ. ಪ್ರತಿ ವರ್ಷವೂ ಅವರ ಹೆಸರಿನಲ್ಲಿ ಹಲವು ಭವಿಷ್ಯವಾಣಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ.

ಈಗ 2026ರ ಜುಲೈನಿಂದ ಡಿಸೆಂಬರ್‌ವರೆಗೆ, ಅಂದರೆ ವರ್ಷದ ಕೊನೆಯ ಆರು ತಿಂಗಳು, ಐದು ರಾಶಿಯವರಿಗೆ ಅತ್ಯಂತ ಅದೃಷ್ಟದ ಸಮಯವಾಗಲಿದೆ ಎಂಬ ಹೇಳಿಕೆ ಮತ್ತೆ ವೈರಲ್ ಆಗಿದೆ. ಈ ಅವಧಿಯಲ್ಲಿ ವೃತ್ತಿಜೀವನದಲ್ಲಿ ಪ್ರಗತಿ, ಆರ್ಥಿಕ ಲಾಭ ಮತ್ತು ಸಂಪತ್ತಿನ ಹೆಚ್ಚಳವಾಗಲಿದೆ ಎನ್ನಲಾಗುತ್ತಿದೆ. 2026ರ ಕೊನೆಯ ಆರು ತಿಂಗಳಲ್ಲಿ ಅದೃಷ್ಟ ಪಡೆಯಲಿರುವ ರಾಶಿಗಳು ಯಾವುವು ಹಾಗಾದರೆ?

Baba Vanga 2026 Prediction

ವೃಷಭ ರಾಶಿ

ಬಾಬಾ ವಾಂಗಾ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಭವಿಷ್ಯವಾಣಿಯ ಪ್ರಕಾರ, ವೃಷಭ ರಾಶಿಯವರಿಗೆ ಜುಲೈನಿಂದ ಡಿಸೆಂಬರ್‌ವರೆಗೆ ಅತ್ಯಂತ ಶುಭಕರ ಸಮಯವಾಗಿರಲಿದೆ. ಇವರ ಆದಾಯದಲ್ಲಿ ಗಣನೀಯ ಏರಿಕೆಯಾಗಬಹುದು. ಹಠಾತ್ ಹಣಕಾಸಿನ ಲಾಭ ಸಿಗುವ ಸಾಧ್ಯತೆ ಇದೆ. ನೀವು ಮಾಡಿದ ಹೊಸ ಹೂಡಿಕೆಗಳು ಉತ್ತಮ ಫಲ ನೀಡಬಹುದು. ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಾಗುವ ಯೋಗವಿದೆ. ಹಲವು ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಬಹುದು. ಕಚೇರಿಯಲ್ಲೂ ಮನೆಯಲ್ಲೂ ದೈವದ ಯೋಗವಿದೆ.

ಮಳೆಗಾಲದಲ್ಲಿ ನಿಮ್ಮ ರಾಶಿಗೆ ಯಾವ ಆರೋಗ್ಯ ಸಮಸ್ಯೆ? ಜ್ಯೋತಿಷ್ಯ ಹೇಳುವ ಎಚ್ಚರಿಕೆಗಳು ಇಲ್ಲಿವೆ!
ಮಳೆಗಾಲದಲ್ಲಿ ನಿಮ್ಮ ರಾಶಿಗೆ ಯಾವ ಆರೋಗ್ಯ ಸಮಸ್ಯೆ? ಜ್ಯೋತಿಷ್ಯ ಹೇಳುವ ಎಚ್ಚರಿಕೆಗಳು ಇಲ್ಲಿವೆ!

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ಅವಧಿ ಸಹನೆಗೆ ಪ್ರತಿಫಲ ಸಿಗುವ ಸಮಯವಾಗಲಿದೆ ಎಂದು ಹೇಳಲಾಗಿದೆ. ಇವರ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ದೊರೆಯಬಹುದು. ರಾಜಕೀಯ ಮತ್ತು ಆಡಳಿತ ಕ್ಷೇತ್ರದಲ್ಲಿರುವವರಿಗೆ ಗೌರವ ಹಾಗೂ ಪ್ರಭಾವ ಹೆಚ್ಚಾಗಬಹುದು. ಹಳೆಯ ಸಮಸ್ಯೆಗಳಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಅದರಲ್ಲೂ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗಬಹುದು. ಉದಾಹರಣೆಗೆ ನೀವು ಮನೆ ಕಟ್ಟಲು ನಿಶ್ಚಯಿಸಿದ್ದು, ಹಣದ ಪೂರೈಕೆ ಇಲ್ಲದೆ ನಿಲ್ಲಿಸಿದ್ದರೆ, ಮನೆ ದೇವರ ಆಶೀರ್ವಾದದ ಮೂಲಕದ ಅದನ್ನು ಮುಂದುವರಿಸುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ವೃತ್ತಿ ಮತ್ತು ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಹೊಸ ಉದ್ಯೋಗದ ಅವಕಾಶಗಳು ಸಿಗಬಹುದು. ವ್ಯಾಪಾರದಲ್ಲಿ ಲಾಭ ಹೆಚ್ಚಾಗಬಹುದು. ವ್ಯವಹಾರ ವಿಸ್ತರಣೆಯ ಯೋಜನೆಗಳು ಯಶಸ್ವಿಯಾಗಬಹುದು. ಆದಾಯದ ಜೊತೆಗೆ ಉಳಿತಾಯವೂ ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ಯೋಜನೆಗಳು ಉತ್ತಮ ಫಲ ನೀಡಬಹುದು. ಹಣಕಾಸಿನ ವಹಿವಾಟು ಕೈಹಿಡಿಯುತ್ತದೆ. ಹೊಸ ವಸ್ತುಗಳ ವ್ಯಾಪಾರದ ವ್ಯವಹಾರ ಇದ್ದರೆ ಲಾಭದಾಯಕ ಆಗಬಹುದು. ಮನೆದೇವರ ಅನುಗ್ರಹ ಇದೆ.

ನಿಮ್ಮ ಕಾರು ಅಥವಾ ಬೈಕ್ ನಿಮ್ಮ ಅದೃಷ್ಟವನ್ನು ಹೆಚ್ಚಿಸಬಹುದೇ? ನಿಮ್ಮ ಜನ್ಮರಾಶಿ ಪ್ರಕಾರ ತಿಳಿಯಿರಿ
ನಿಮ್ಮ ಕಾರು ಅಥವಾ ಬೈಕ್ ನಿಮ್ಮ ಅದೃಷ್ಟವನ್ನು ಹೆಚ್ಚಿಸಬಹುದೇ? ನಿಮ್ಮ ಜನ್ಮರಾಶಿ ಪ್ರಕಾರ ತಿಳಿಯಿರಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ಅವಧಿ ಹಣಕಾಸಿನ ದೃಷ್ಟಿಯಿಂದ ಅನುಕೂಲಕರವಾಗಿರಲಿದೆ ಎನ್ನಲಾಗಿದೆ. ಆದಾಯದಲ್ಲಿ ಏರಿಕೆಯಾಗಬಹುದು. ಬಹುಕಾಲದಿಂದ ಕಾಯುತ್ತಿದ್ದ ಪದೋನ್ನತಿ ದೊರೆಯಬಹುದು. ಅನಿರೀಕ್ಷಿತ ಹಣದ ಲಾಭವಾಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಉತ್ತಮ ಲಾಭದ ಸಮಯವಾಗಿರಬಹುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳಬಹುದು. ಕಚೇರಿ ಕೆಲಸ ಅಲ್ಲದೆ ಇತರ ಹಳೆಯ ಮಿತ್ರರನ್ನೂ ಭೇಟಿಯಾಗಿ ನಿಮ್ಮ ಇತರ ಆದಾಯ ಮೂಲಗಳನ್ನು ಖಚಿತಪಡಿಸಿಕೊಳ್ಳಿ.

ಮಕರ ರಾಶಿ

ಮಕರ ರಾಶಿಯವರಿಗೆ ಈ ಅವಧಿ ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ತಲುಪುವ ಸಮಯವಾಗಲಿದೆ ಎಂದು ಹೇಳಲಾಗಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬಹುದು. ಆರ್ಥಿಕ ಸಮೃದ್ಧಿ ಹೆಚ್ಚಾಗಬಹುದು. ಸಮಾಜದಲ್ಲಿ ಗೌರವ ಮತ್ತು ಮಾನ್ಯತೆ ಹೆಚ್ಚಾಗಬಹುದು. ಉದ್ಯೋಗದಲ್ಲಿ ಉನ್ನತ ಸ್ಥಾನ ಅಥವಾ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ದೀರ್ಘಕಾಲದ ಗುರಿಗಳನ್ನು ಸಾಧಿಸುವ ಅವಕಾಶ ದೊರೆಯಬಹುದು. ಹೊಸದೊಂದು ಬ್ಯುಸಿನೆಸ್‌ ಅಥವಾ ಯುಟ್ಯೂಬ್‌ ಚಾನೆಲ್‌ ಶುರುಮಾಡುವ ಯೋಚನೆ ಇದ್ದರೆ, ಕಾರ್ಯರಂಗಕ್ಕೆ ಇಳಿಯಲು ಇದು ಸಕಾಲ.

2026ರ ಬಗ್ಗೆ ವೈರಲ್ ಆಗಿರುವ ಇತರ ಭವಿಷ್ಯವಾಣಿಗಳು

ಬಾಬಾ ವಾಂಗಾ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ವೈರಲ್ ಭವಿಷ್ಯವಾಣಿಗಳ ಪ್ರಕಾರ, 2026ರಲ್ಲಿ ಜಾಗತಿಕ ಆರ್ಥಿಕ ಸಂಕಷ್ಟ, ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳಂತಹ ಪ್ರಕೃತಿ ವಿಕೋಪಗಳು, ಯುದ್ಧದ ಆತಂಕ, ಕೃತಕ ಬುದ್ಧಿಮತ್ತೆ (AI)ಯ ಪ್ರಭಾವ ಹೆಚ್ಚಾಗುವುದು ಮುಂತಾದ ಘಟನೆಗಳ ಉಲ್ಲೇಖವೂ ಕಂಡುಬರುತ್ತದೆ. ಈ ವರ್ಷ ಬರಗಾಲ ಬಾಧಿಸಲಿದೆ ಎಂದು ಆಕೆ ಹೇಳಿದ್ದಳಂತೆ. ಅದಕ್ಕೆ ತಕ್ಕಂತೆ ಮಳೆ ತೀರಾ ಕಡಿಮೆಯಾಗಿದ್ದು, ಬರಗಾಲದ ಛಾಯೆ ವ್ಯಾಪಿಸಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+