ತಹಶೀಲ್ದಾರ್ ಗಾಗಿ ಪ್ರಾಣ ಒತ್ತೆ ಇಟ್ಟ ಡ್ರೈವರ್ ಪತ್ನಿ 8 ತಿಂಗಳ ಗರ್ಭಿಣಿ

ಹೈದರಾಬಾದ್, ನವೆಂಬರ್ 06: ತೆಲಂಗಾಣದಲ್ಲಿ ಅಬ್ದುಲ್ಲಾಪುರಮೇಟ್ ಹಾಡುಹಗಲಲ್ಲೇ ನಡೆದ ತಹಶಿಲ್ದಾರ್ ಸಜೀವ ದಹನ ಪ್ರಕರಣದಲ್ಲಿ ಅವರನ್ನು ರಕ್ಷಿಸಲು ಮುಂದಾದ ಡ್ರೈವರ್ ಗುರುನಾಥಮ್ ಅವರೂ ಚಿಕಿತ್ಸೆ ಫಲಕಾರಿಯಾಗದೆ ಮೃತರಾದರು.

ತಮ್ಮ ಜೀವವನ್ನೂ ಒತ್ತೆಯಿಟ್ಟು ಒಡತಿಯನ್ನು ಕಾಪಾಡಲು ಮುಂದಾದ ಈ ಡ್ರೈವರ್ ಪತ್ನಿ 8 ತಿಂಗಳ ಗರ್ಭಿಣಿ! ಮುಂದಿನ ತಿಂಗಳು ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳುವ ಉತ್ಸುಕತೆಯಲ್ಲಿದ್ದ ಕುಟುಂಬಲ್ಲೀಗ ಸೂತಕದ ಛಾಯೆ.

ಮನೆಗೆ ದಿಕ್ಕಾಗಿದ್ದ ಗುರುನಾಥಮ್ ಅವರ ಸಾವಿ ಇಡಿ ಕುಟುಂಬದಲ್ಲಿ ಸ್ಮಶಾನ ಮೌನವನ್ನು ಉಂಟು ಮಾಡಿದೆ.

3 ವರ್ಷದ ಮಗು, ಪತ್ನಿ 8 ತಿಂಗಳ ಗರ್ಭಿಣಿ

3 ವರ್ಷದ ಮಗು, ಪತ್ನಿ 8 ತಿಂಗಳ ಗರ್ಭಿಣಿ

ಗುರುನಾಥಮ್ ಅವರಿಗೆ 3 ವರ್ಷ ವಯಸ್ಸಿನ ಮಗನಿದ್ದರೆ, ಪತ್ನಿ 8 ಸೌಂದರ್ಯ ತಿಂಗಳ ಗರ್ಭಿಣಿ. ನವೆಂಬರ್ 04 ರಂದು ನಡೆದ ದುರ್ಘಟನೆಯಲ್ಲಿ ಶೇ.80 ರಷ್ಟು ಸುಟ್ಟ ಗಾಯದಿಂದ ಬಳಲುತ್ತಿದ್ದ ಗುರುನಾಥಮ್ ಅವರಿಗೆ ಹೈದರಾಬಾದ್ ಕಂಚನ್ ಬಾಘ್ ನ ಅಪೊಲೋ ಡಿಆರ್ ಡಿಒ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಅಸುನೀಗಿದ್ದರು.

ಮಗುವಿನ ಫೋಟೋ ಕೇಳಿದ್ದ ಗುರುನಾಥಮ್

ಮಗುವಿನ ಫೋಟೋ ಕೇಳಿದ್ದ ಗುರುನಾಥಮ್

ಸೋಮವಾರ ಬೆಳಿಗ್ಗೆ 9:30 ಕ್ಕೆ ಮನೆ ಬಿಟ್ಟ ಗುರುನಾಥಮ್, 11 ಗಂಟೆಯ ಸಮಯಕ್ಕೆ ನನಗೆ ಫೋನ್ ಮಾಡಿ ನಮ್ಮ ಮೂರು ವರ್ಶಶದ ಮಗು ಸಿದ್ಧಾರ್ಥನ ಫೋಟೋ ಕಳಿಸುವಂತೆ ಕೇಳಿದ್ದರು. ನಾನು ವಾಟ್ಸಾಪ್ ನಲ್ಲಿ ಕಳಿಸಿದ್ದೆ. ಮಗುವನ್ನು ನೋಡಬೇಕು ಅನ್ನಿಸುತ್ತಿದೆ ಎಂದಿದ್ದರು. ಆದರೆ ಮತ್ತೆಂದು ಅವರು ಸಿದ್ಧಾರ್ಥನನ್ನು ನೋಡುವುದಕ್ಕೆ ಬರುವುದೇ ಇಲ್ಲ" ಎದು ಬಿಕ್ಕುತ್ತಾರೆ ಸೌಂದರ್ಯ.

ಕಚೇರಿಯಲ್ಲೇ ಸಜೀವ ದಹನ

ಕಚೇರಿಯಲ್ಲೇ ಸಜೀವ ದಹನ

ತೆಲಂಗಾಣದ ರಂಗಾರೆಡ್ಡಿಜಿಲ್ಲೆ ಅಬ್ದುಲ್ಲಾಪುರಮೇಟ್ ಎಂಬಲ್ಲಿ ತಮ್ಮಚೇಂಬರ್ ನಲ್ಲಿದ್ದ ವಿಜಯಾ ರೆಡ್ಡಿ ಅವರನ್ನು ರೈತನೊಬ್ಬ ಭೇಟಿಯಾಗಲು ಬಂದಿದ್ದ. ತನ್ನ ಜಮೀನಿಗೆ ಸಂಬಂಧಿಸಿದ ಪ್ರಕರಣವನ್ನು ಕೋರ್ಟಿನಲ್ಲಿದ್ದು, ಆ ಕಾರಣ ಜಮೀನು ನೋಂದಾವಣೆಗೆ ವಿಳಂಬವಾಗುತ್ತಿದೆ ಎಂದು ತಹಶೀಲ್ದಾರ್ ಬಳಿ ವಾದ ಮಾಡುತ್ತಿದ್ದ. ಈ ವಾದವೇ ವಿಪರೀತಕ್ಕೆ ತಿರುಗಿ, ನಂತರ ಅವರ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಅವರನ್ನು ಸಜೀವವಾಗಿ ಬೆಂಕಿಹಚ್ಚಿ ಕೊಂದಿದ್ದ. ಈ ಸಂದರ್ಭದಲ್ಲಿ ಅವರನ್ನು ರಕ್ಷಿಸಲು ಡ್ರೈವರ್ ಗುರುನಾಥಮ್ ಮತ್ತು ಇನ್ನೊಬ್ಬರು ಆಪ್ತ ಕಾರ್ಯದರ್ಶಿ ಧಾವಿಸಿದ್ದರು. ಅವರೂ ಗಂಭೀರವಾಗಿ ಗಾಯಗೊಂಡಿದ್ದರು.

ಕೊಲೆ ಮಾಡಿ ಪೊಲೀಸ್ ಠಾಣೆಗೆ ತೆರಳಿದ್ದ ರೈತ

ಕೊಲೆ ಮಾಡಿ ಪೊಲೀಸ್ ಠಾಣೆಗೆ ತೆರಳಿದ್ದ ರೈತ

ಹಯತ್ನಗರ್ ದ ಗೌರೆಲ್ಲಿ ಎಂಬಲ್ಲಿಯ ರೈತ ಸುರೇಶ್ ಎಂಬಾತನೇ ಈ ಕೃತ್ಯ ಎಸಗಿದ್ದು ದೃಢವಾಗಿದ್ದು, ಕೊಲೆ ಮಾಡಿದ ನಂತರ ಆತ ಪೊಲೀಸ್ ಸ್ಟೇಷನ್ನಿಗೆ ತೆರಳಿದ್ದ ಎನ್ನಲಾಗಿದೆ. ಆತನ ದೇಹದಲ್ಲೂ ಸುಟ್ಟ ಗಾಯಗಳಾಗಿದ್ದು, ಅವನನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+