ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ ಚುನಾವಣೆಯಲ್ಲಿ ದಕ್ಷಿಣ ಆಯೋಧ್ಯೆ ಭದ್ರಾಚಲಂ ಸದ್ದು

|
Google Oneindia Kannada News

ಭದ್ರಾಚಲಂ(ತೆಲಂಗಾಣ), ಡಿಸೆಂಬರ್ 04: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಲೋಕಸಭೆ ಚುನಾವಣೆಯ ಪ್ರಮುಖ ವಿಷಯವಾಗಿದೆ. ದಕ್ಷಿಣ ಆಯೋಧ್ಯೆ ಎಂದೇ ಹೆಸರಾಗಿರುವ ಭದ್ರಾಚಲಂನಲ್ಲಿ ಅಭಿವೃದ್ಧಿ ಕುಂಠಿತವಾಗಿ ಎಂದು ಕೆಸಿಆರ್ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.

ದೇಗುಲ ನಗರಿಯಿಂದ 32 ಕಿ.ಮೀ ದೂರದಲ್ಲಿರುವ ಪರ್ಣಶಾಲೆಯಲ್ಲೇ ರಾಮ -ಸೀತೆ ಹಾಗೂ ಲಕ್ಷ್ಮಣ ನೆಲೆಸಿದ್ದರು. ನಂತರ ಸೀತೆ ಅಪಹರಣದ ನಂತರೂ ರಾಮ ಇಲ್ಲಿ ಇದ್ದರು ಎಂಬ ಪ್ರತೀತಿ ಇದೆ.

ಇಂಥ ಮಹತ್ವದ ತಾಣವನ್ನು ಕಸದ ತೊಟ್ಟಿಯಂತೆ ಮಾಡಲಾಗಿದೆ. ಗೋದಾವರಿ ನದಿ ತೀರದಲ್ಲಿ ಕಸದ ರಾಶಿ ಎದ್ದಿದೆ. ನದಿ ಕಲುಷಿತಗೊಳ್ಳುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Telangana polls Development of Dakshin Ayodhya an election issue in Bhadrachalam

ಸ್ಥಳೀಯರ ಆಕ್ರೋಶಕ್ಕೆ ಈಗ ಬಿಜೆಪಿ ದನಿಗೂಡಿಸಿದೆ. ಧಾರ್ಮಿಕ ತಾಣದ ಅಭಿವೃದ್ಧಿಗೆ ಕೆ ಚಂದ್ರಶೇಖರ್ ರಾವ್ ಸರ್ಕಾರವು ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. 100 ಕೋಟಿ ರು ಬಿಡುಗಡೆ ಎಂಬುದು ಕಾಗದಲ್ಲಿ ಮಾತ್ರ ಇದೆ.

ಟಿಆರ್ ಎಸ್ ಮುಖ್ಯಸ್ಥ, ಮುಖ್ಯಮಂತ್ರಿ ಕೆಸಿಆರ್ ಅವರು ಇಲ್ಲಿನ ವೈಷ್ಣವ ಪಂಥದ ಚಿನ್ನ ಜೀಯರ್ ಅವರ ಅನುಯಾಯಿಯಾಗಿದ್ದಾರೆ. ಸೀತಾರಾಮರ ದೇಗುಲದ ಬಗ್ಗೆ ಯಾಕೆ ತಲೆಕೆಡಿಸಿಕೊಂಡಿಲ್ಲ ಎಂದು ಭಕ್ತ ರಾಮಪ್ರಸಾದ್ ಪ್ರಶ್ನಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲೂ ಟಿಆರ್ ಎಸ್ ನಾಯಕರು ಇಲ್ಲಿಗೆ ಭೇಟಿ ನೀಡಿಲ್ಲ. ದೇಗುಲದ ಆಸ್ತಿ ಸದ್ಯ ಆಂಧ್ರಪ್ರದೇಶದ ಭಾಗದಲ್ಲಿದೆ. ಭದ್ರಾಚಲಂನ ಎಂಟು ತೆಹಸಿಲ್ ಗಳ ಪೈಕಿ ನಾಲ್ಕು ಆಂಧ್ರಕ್ಕೆಸೇರಿದೆ. ಇದನ್ನು ಹಿಂಪಡೆಯುವ ಯಾವುದೇ ಪ್ರಯತ್ನವನ್ನು ಟಿಆರ್ ಎಸ್ ಸರ್ಕಾರ ಮಾಡಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಪೊದ್ದೆಮ್ ವೀರಯ್ಯ ಹೇಳಿದ್ದಾರೆ.

ಇಲ್ಲಿನ ಪ್ರಸಿದ್ಧ ರಾಮನವಮಿ ಉತ್ಸವದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳದೇ ಎರಡು ವರ್ಷಗಳಾಗಿವೆ. ದಕ್ಷಿಣ ಆಯೋಧ್ಯೆಯನ್ನು ಕಡೆಗಣಿಸಿದ ರಾವ್ ಅವರಿಗೆ ಈ ಬಾರಿ ಸೋಲು ಖಚಿತ ಎಂದು ಸ್ಥಳೀಯರು ನೊಂದು ನುಡಿದಿದ್ದಾರೆ.

ಸಿಪಿಐಎಂನ ಮಿದಿಯಂ ಬಾಬುರಾವ್, ಬಿಜೆಪಿಯ ಕುಂಜಾ ಸತ್ಯವತಿ, ಟಿಆರ್ ಎಸ್ ನ ತೆಲ್ಲಂ ವೆಂಕಟ ರಾವ್, ಬಿಎಸ್ಪಿಯ ಗುಂಡು ಶರತ್ ಬಾಬು ಈ ಬಾರಿ ಈ ಭಾಗದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದಾರೆ.(ಪಿಟಿಐ)

English summary
With the Ram Mandir issue back on the national political landscape, this Telangana temple down has become a poll plank for the state assembly elections with the ruling TRS being accused of neglecting development of what is known as 'Ayodhya of South' among devotees of Lord Rama.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X