ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋರಕ್ಷಣೆಗೆ ಪಕ್ಷ ಬೆಂಬಲಿಸುತ್ತಿಲ್ಲ ಎಂದು ಬಿಜೆಪಿ ತೊರೆದ ಶಾಸಕ

|
Google Oneindia Kannada News

ಹೈದರಾಬಾದ್, ಆಗಸ್ಟ್ 13: "ಬಿಜೆಪಿ ಗೋ ರಕ್ಷಣೆಗೆ ಯಾವುದೇ ಬೆಂಬಲ ನೀಡುತ್ತಿಲ್ಲ" ಎಂದು ಆರೋಪಿಸಿ, ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಲೋಧ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

"ನನಗೆ ಹಿಂದು ಧರ್ಮ ಮತ್ತು ಗೋ ರಕ್ಷಣೆ ಮೊದಲ ಆದ್ಯತೆ. ರಾಜಕೀಯ ನಂತರ. ಗೋ ರಕ್ಷಣೆಗಾಗಿ ನಾನು ಬಿಜೆಪಿಯನ್ನು ತೊರೆದಿದ್ದೇನೆ. ನಾನು ವಿಧಾನಸಭೆಯಲ್ಲೂ ಈ ಬಗ್ಗೆ ಹಲವು ಬಾರಿ ಧ್ವನಿ ಎತ್ತಿದ್ದೇನೆ. ಆದರೆ ನಮ್ಮ ಪಕ್ಷ ನನಗೆ ಈ ಕುರಿತು ಯಾವುದೇ ಬೆಂಬಲ ನೀಡಿಲ್ಲ. ಆದ್ದರಿಂದ ರಾಜೀನಾಮೆ ನೀಡುತ್ತಿದ್ದೇನೆ" ಎಂದು ಗೋಶಮಹಲ್ ಕ್ಷೇತ್ರದ ಶಾಸಕ ರಾಜಾ ಸಿಂಗ್ ಲೋಧ್ ಹೇಳಿದ್ದಾರೆ.

Telangana MLA quits BJP, accuses party not supporting cow protection

ಭಯೋತ್ಪಾದನೆಗಿಂತ ಗೋಹತ್ಯೆ ಮಹಾಪರಾಧ: ಬಿಜೆಪಿ ಶಾಸಕಭಯೋತ್ಪಾದನೆಗಿಂತ ಗೋಹತ್ಯೆ ಮಹಾಪರಾಧ: ಬಿಜೆಪಿ ಶಾಸಕ

'ಗೋಹತ್ಯೆ ನಿಲ್ಲಿಸಲು ನಾವು ಕೊಲ್ಲಲೂ ಸಿದ್ಧ, ಸಾಯಲೂ ಸಿದ್ಧ' ಎಂದು ರಾಜಾ ಅವರು ಮಾತನಾಡಿದ ವಿಡಿಯೋವೊಂದು ವಿವಾದ ಸೃಷ್ಟಿಸಿತ್ತು. ಇತ್ತೀಚೆಗೆ ಅವರು ನೀಡಿದ ಹಲವು ವಿವಾದಾತ್ಮಕ ಹೇಳಿಕೆಯಿಂದಾಗಿ ಪಕ್ಷದ ವರಿಷ್ಠರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಪಕ್ಷದ ಘನತೆಗೆ ಕುತ್ತು ಬರುತ್ತಿದೆ ಎಂದಿದ್ದರು. ಇದರಿಂದ ಕೋಪಗೊಂಡ ರಾಜಾ ಸಿಂಗ್, ನಾನು ಪಕ್ಷದಲ್ಲಿದ್ದುಕೊಂಡು ಗೋ ರಕ್ಷಣೆಯ ಕೈಂಕರ್ಯ ಮಾಡುವುದರಿಂದ ಪಕ್ಷದ ಘನತೆಗೆ ಕುತ್ತುಂಟಾಗುತ್ತದೆಂದಾದರೆ ಪಕ್ಷವನ್ನೇ ತೊರೆಯುತ್ತೇನೆ" ಎಂದು ರಾಜೀನಾಮೆ ನೀಡಿದ್ದಾರೆ

English summary
Telangana BJP MLA T Raja Singh Lodh tendered his resignation on Sunday night so that he can "act" against cow slaughter during Eid al-Adha without embarrassing the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X