ವಾರಂಗಲ್ ಭದ್ರಕಾಳಿಗೆ 3 ಕೋಟಿ ರು ಮೌಲ್ಯದ ಚಿನ್ನದ ಕಿರೀಟ!

Posted By: Prithviraj
Subscribe to Oneindia Kannada

ಹೈದರಾಬಾದ್, ಅಕ್ಟೋಬರ್ 08: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಚುನಾವಾಣಾ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಹೊತ್ತುಕೊಂಡಿದ್ದ ಹರಕೆಗಳನ್ನು ಒಂದೊಂದಾಗಿ ತೀರಿಸಲು ಅಣಿಯಾಗಿದ್ದಾರೆ. ವಾರಂಗಲ್ ಜಿಲ್ಲೆಯ ಪ್ರಸಿದ್ಧ ಭದ್ರಕಾಳಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಭದ್ರಕಾಳಿ ಅಮ್ಮನವರಿಗೆ ಸುಮಾರು ಮೂರು ಕಟಿ ಬೆಲೆಬಾಳುವ ಚಿನ್ನದ ಕಿರೀಟವನ್ನು ಸರ್ಕಾರದ ವತಿಯಿಂದ ಸಮರ್ಪಿಸಲು ಮುಂದಾಗಿದ್ದಾರೆ.

ಮೂರು ಕೋಟಿ 70 ಲಕ್ಷ ವೆಚ್ಚದಲ್ಲಿ ತಯಾರಿಸಲಾಗಿರುವ ಚಿನ್ನದ ಕೀರಿಟವು 11ಕೆ.ಜಿ. 700ಗ್ರಾಂ ತೂಕ ಹೊಂದಿದೆ. ಈ ಕಿರೀಟವನ್ನು ಭಾನುವಾರ (ಅಕ್ಟೋಬರ್ 9) ದಂದು ಸತಿಸಮೇತರಾಗಿ ದೇವಸ್ಥಾನಕ್ಕೆ ತೆರಳಿ ಅವರು ಸಮರ್ಪಿಸಲಿದ್ದಾರೆ.

Telangana Govt offer 11.7kg gold to goddess Bhadrakali

ಸ್ವರ್ಣ ಕಿರೀಟವನ್ನು ಜಿಆರ್ ಟಿ ಜ್ಯುವೆಲ್ಲರ್ಸ್ ಸಂಸ್ಥೆಯವರು ತಯಾರಿಸಿದ್ದಾರೆ. ಮಂತ್ರಿ ಪರಿಷತ್ ಶುಕ್ರವಾರ ನಡೆದ ಮಂತ್ರಿ ಪರಿಷತ್ ಸಭೆ ನಂತರ ಮುಖ್ಯಮಂತ್ರಿಯವರ ಕಚೇರಿಯಲ್ಲಿ ಕಿರೀಟವನ್ನು ಸಚಿವ ಸಂಪುಟ ಪರಿಶೀಲಿಸಿದೆ.

Telangana Govt offer 11.7kg gold to goddess Bhadrakali

ತೆಲಂಗಾಣ ಪ್ರತ್ಯೇಕ ರಾಜ್ಯ ಅನುಷ್ಠಾನಕ್ಕಾಗಿ ಕೆ.ಚಂದ್ರಶೇಖರ್ ರಾವ್ ಅವರು ವರಂಗಲ್ ಭದ್ರಕಾಳಿ ದೇವಸ್ಥಾನ, ವಿಜಯವಾಡ ಕನಕ ದುರ್ಗಮ್ಮ ದೇವಸ್ಥಾನ ಮತ್ತು ತಿರುಪತಿ ಕ್ಷೇತ್ರಗಳಿಗೆ ಹರಕೆ ಹೊತ್ತುಕೊಂಡಿದ್ದರು. ಹರಕೆಯ ಮೊದಲ ಭಾಗವಾಗಿ ವಾರಂಗಲ್ ಭದ್ರಕಾಳಿ ದೇವಸ್ಥಾನಕ್ಕೆ ಹರಕೆ ತೀರಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Telangana state Chief Minister K. Chandrasekhar Rao offers a crown made of 11.7 kg gold to Goddess Bhadrakali in Warangal on Sunday as part of his (government’s) offering to various temples for making formation of Telangana State possible.
Please Wait while comments are loading...