ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದಲ್ಲಿ ಪ್ರಯಾಣಿಕನ ಜೀವ ಉಳಿಸಿದ ತೆಲಂಗಾಣ ರಾಜ್ಯಪಾಲೆ

|
Google Oneindia Kannada News

ಹೈದರಾಬಾದ್ ಜುಲೈ, 24: ಶನಿವಾರ ದೆಹಲಿಯಿಂದ ಹೈದರಾಬಾದ್‌ಗೆ ಹೊರಟಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ವ್ಯಕ್ತಿಯೊಬ್ಬನ ಆರೋಗ್ಯದಲ್ಲಿ ಏರುಪೇರಾಗಿತ್ತು. ನಂತರ ಆ ವ್ಯಕ್ತಿಗೆ ಸಹಾಯಕ್ಕೆ ತೆಲಂಗಾಣ ರಾಜ್ಯಪಾಲೆ ಡಾ. ತಮಿಳಿಸೈ ಸೌಂದರರಾಜನ್ ಧಾವಿಸಿದ್ದು, ಸ್ವತಃ ಅವರೇ ವೈದ್ಯರಾಗಿ ಕರ್ತವ್ಯ ನಿರ್ವಹಿಸಿದರು.

ತೆಲಂಗಾಣ ರಾಜ್ಯಪಾಲೆ ಡಾ.ತಮಿಳಿಸೈ ಸುಂದರರಾಜನ್‌ ವಾರಣಾಸಿಯಿಂದ ಹೈದರಾಬಾದ್‌ಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಎದೆ ನೋವಿನಿಂದ ಬಳಲುತ್ತಿದ್ದಾಗ ಸ್ವತಃ ತಮಿಳಿಸೈ ಅವರೇ ಪ್ರಥಮ ಚಿಕಿತ್ಸೆ ನೀಡಿದರು. ಫ್ಲೈಟ್‌ನ ಮಾರ್ಗಸೂಚಿ ಭಾಗವಾಗಿ ವಿಮಾನದಲ್ಲಿ ಯಾರಾದರೂ ವೈದ್ಯರಿದ್ದರೆ ಸಹಾಯಕ್ಕೆ ಬನ್ನಿ ಎಂದಾಗ ರಾಜ್ಯಪಾರಾದ ತಮಿಳಿಸೈ ಸ್ಪಂದಿಸಿ ಚಿಕಿತ್ಸೆ ನೀಡಿದ್ದಾರೆ.

ಆಂಧ್ರ ಪ್ರದೇಶದ ಕೇಡರ್‌ನ ಐಪಿಎಸ್ ಅಧಿಕಾರಿ ಕೃಪಾನಂದ್ ತ್ರಿಪಾಠಿ ಉಜೇಲಾ ಸೇರಿದಂತೆ ಇತರ ಸಿಬ್ಬಂದಿಗಳು ಅವರಿಗೆ ಧನ್ಯವಾದ ಅರ್ಪಿಸಿದರು. ಪ್ರಯಾಣಿಕನಿಗೆ ಪ್ರಥಮ ಚಿಕಿತ್ಸೆ ಮಾಡಿ ಜೀವ ಉಳಿಸಿದ್ದಕ್ಕಾಗಿ ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ವಿಮಾನದಲ್ಲಿನ ಪ್ರಯಾಣಿಕರು ಡಾ.ತಮಿಳಿಸೈ ಅವರಿಗೆ ಧನ್ಯವಾದ ಅರ್ಪಿಸಿದರು.

ಹೃದಯಾಘಾತದಿಂದ ಬಳಲುತ್ತಿದ್ದ ವ್ಯಕ್ತಿಯ ನಾಡಿಮಿಡಿತನ್ನು ಡಾ. ತಮಿಳಿಸೈ ಸೌಂದರರಾಜನ್ ಪರಿಶೀಲಿಸಿದಾಗ ಆತನ ಹೃದಯ ಬಡಿತ ಕೇವಲ 39ಕ್ಕೆ ಇಳಿದಿತ್ತು. ಅಲ್ಲಿನ ಸಿಬ್ಬಂದಿಯೊಬ್ಬರು ಕೆಲವು ಸೂಚನೆಯನ್ನು ನೀಡಿ ವ್ಯಕ್ತಿಯ ಉಸಿರಾಟದ ತೊಂದರೆಯನ್ನು ನೀಗಿಸಿದರು. ಹೈದರಾಬಾದ್‌ಗೆ ಬಂದಿಳಿದ ನಂತರ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾದ ನಂತರ ಡೆಂಗ್ಯೂ ಇರುವುದು ಪತ್ತೆಯಾಗಿದೆ.

Telangana governor who saved the life of the passenger

ನಂತರ ಈ ಬಗ್ಗೆ ಮಾತನಾಡಿದ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಅವರು ವಿಮಾನಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಇರಬೇಕು. ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡಲು ವಿಮಾನ ಸಿಬ್ಬಂದಿಗೆ ತರಬೇತಿ ನೀಡಬೇಕು. ಮತ್ತು ಕಾರ್ಡಿಯೋಪಲ್ಮನರಿ (ಸಿಪಿಆರ್) ಬಗ್ಗೆ ಕನಿಷ್ಠ ತಿಳುವಳಿಕೆಯನ್ನು ಹೊಂದಿರಬೇಕು ಎಂದು ಹೇಳಿದರು. ಇನ್ನೂ ರಾಜ್ಯಪಾಲರು ವಿಮಾನದಲ್ಲಿ ಚಿಕಿತ್ಸೆ ನೀಡುತ್ತಿದ್ದ ಪೋಟೋಗಳನ್ನು ಪ್ರಯಾಣಿಕರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿವೆ.

English summary
On Saturday the health of a person on the Indigo Airlines flight from Delhi to Hyderabad was fluctuating. Then Telangana Governor Dr. Tamilisai Soundararajan rushed to help that person and he himself performed the duty as a doctor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X