ಕುದುರೆ ವ್ಯಾಪಾರ ಭೀತಿ : ತೆಲಂಗಾಣ ಕಾಂಗ್ರೆಸ್‌ ಶಾಸಕರು ಬೆಂಗಳೂರಿಗೆ?

Recommended Video

      5 States Election Results 2018 : ಬೆಂಗಳೂರಿನ ರೆಸಾರ್ಟ್ ಗೆ ಬರಲಿದ್ದಾರೆ ತೆಲಂಗಾಣ ಕಾಂಗ್ರೆಸ್ ಶಾಸಕರು

      ಬೆಂಗಳೂರು, ಡಿಸೆಂಬರ್ 11 : ತೆಲಂಗಾಣದ ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್‌ಗೆ ಬರುವ ಸಾಧ್ಯತೆ ಇದೆ. ತೆಲಂಗಾಣ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಕುದುರೆ ವ್ಯಾಪಾರ ನಡೆಯಲಿದೆಯೇ? ಎಂಬ ಪ್ರಶ್ನೆ ಎದ್ದಿದೆ.

      ಮಂಗಳವಾರ ಬೆಳಗ್ಗೆ 8 ಗಂಟೆಗೆ 119 ಸ್ಥಾನಗಳನ್ನು ಹೊಂದಿರುವ ತೆಲಂಗಾಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಆರಂಭವಾಗಿದೆ. ಕಾಂಗ್ರೆಸ್ ಕುದುರೆ ವ್ಯಾಪಾರ ನಡೆಯಲಿದೆ ಎಂದು ಅಂದಾಜಿಸಿದ್ದು, ಶಾಸಕರನ್ನು ಬೆಂಗಳೂರಿಗೆ ಕಳಿಸಲು ಮುಂದಾಗಿದೆ.

      Telangana Congress MLAs may come to Bengaluru resort

      ಇಬ್ಬರು ಶಾಸಕರ ಜೊತೆ ಈಗಾಗಲೇ ಮಾತುಕತೆ ನಡೆದಿದೆ ಎಂದು ಶಂಕಿಸಲಾಗಿದೆ. ಆದ್ದರಿಂದ, ಶಾಸಕರನ್ನು ಉಳಿಸಿಕೊಳ್ಳಲು ಪಕ್ಷ ಜೆಡಿಎಸ್-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವಿರುವ ಕರ್ನಾಟಕಕ್ಕೆ ಶಾಸಕರನ್ನು ಕಳಿಸಲು ಮುಂದಾಗಿದೆ.

      ಶಾಸಕರನ್ನು ಕಾಪಾಡಲು ಬೆಂಗಳೂರು ಹತ್ತಿರ ಮತ್ತು ಸುರಕ್ಷಿತ ಸ್ಥಳವಾಗಿದೆ. ಆದ್ದರಿಂದ, ಬೆಂಗಳೂರಿನ ರೆಸಾರ್ಟ್‌ಗೆ ಕರೆತರುವ ಸಾಧ್ಯತೆ ಇದೆ. ಬೆಂಗಳೂರಿನ ಕಾಂಗ್ರೆಸ್ ನಾಯಕರು ಈಗಾಗಲೇ ಶಾಸಕರು ಬಂದರೆ ಅಗತ್ಯ ವ್ಯವಸ್ಥೆ ಮಾಡಲು ಸಿದ್ಧರಾಗಿದ್ದಾರೆ.

      ರಾಜ್ಯಸಭೆ ಚುನಾವಣೆಯ ಸಮಯದಲ್ಲಿ ಗುಜರಾತ್‌ನ ಕಾಂಗ್ರೆಸ್‌ ಶಾಸಕರು ಬೆಂಗಳೂರಿಗೆ ಬಂದಿದ್ದರು. ಮಹಾರಾಷ್ಟ್ರದ ಶಾಸಕರನ್ನು ಒಮ್ಮೆ ಕರೆತರಲಾಗಿತ್ತು. ರೆಸಾರ್ಟ್ ರಾಜಕೀಯದಲ್ಲಿ ಕರ್ನಾಟಕ ಮೊದಲಿನಿಂದಲೂ ದೊಡ್ಡ ಸುದ್ದಿ ಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+