ಪ್ರಶ್ನೆ ಮಾಡಿದ ದಲಿತರನ್ನು ಕೊಚ್ಚೆ ನೀರಲ್ಲಿ ಮುಳುಗೇಳಿಸಿದ ಬಿ.ಜೆ.ಪಿ ಮುಖಂಡ

Posted By:
Subscribe to Oneindia Kannada

ಹೈದರಾಬಾದ್, ನವೆಂಬರ್ 13 : ತೆಲಂಗಾಣದ ಬಿಜೆಪಿ ಮುಖಂಡರೊಬ್ಬರು ದಲಿತ ವ್ಯಕ್ತಿಗಳಿಗೆ ಕೋಲಿನಿಂದ ಹೊಡೆದು ಕೊಳಚೆ ಗುಂಡಿಯಲ್ಲಿ ಮುಳುಗೇಳುವ ಶಿಕ್ಷೆ ನೀಡಿರುವ ಘಟನೆಯ ವಿಡಿಯೊ ವೈರಲ್ ಆಗಿದೆ.

ಕಳೆದ ತಿಂಗಳು ಅಭಂಗಪಟ್ನಂ ಗ್ರಾಮದ ನವೀಪೇಟ್ ನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಬಿ.ಜೆ.ಪಿ ಮುಖಂಡನ ವರ್ತನೆಗೆ ಭಾರಿ ವಿರೋಧ ವ್ಯಕ್ತವಾಗಿದೆ.

Telangana BJP leader humiliates Dalits Police booked case

ಅಭಂಗಪಟ್ನಂ ಪಟ್ಟಣದ ಬಿಜೆಪಿಯ ಜಿಲ್ಲಾ ಮಾಜಿ ಕಾರ್ಯದರ್ಶಿ ಎಂ ಭರತ್ ರೆಡ್ಡಿ ಅವರು ಎರ್ರಾಕುಂಟಾ ಎಂಬ ಕೊಳದಲ್ಲಿನ ಜಲ್ಲಿ ಕಲ್ಲುಗಳನ್ನು ಅಕ್ರಮವಾಗಿ ಸಾಗಿಸುವುದನ್ನು ಕೊಂಡ್ರಾ ಲಕ್ಷ್ಮಣ್ ಮತ್ತು ರಾಜೇಶ್ವರ್ ಪ್ರಶ್ನಿಸಿದ್ದಾರೆ. ಆದ ಕಾರಣ ಎಂ.ಭರತ್ ರೆಡ್ಡಿ, ಪ್ರಶ್ನಿಸಿದವರಿಗೆ ಕೆರೆಯಲ್ಲಿ ಮುಳುಗಿ ಏಳುವ ಶಿಕ್ಷೆ ವಿಧಿಸಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್ ವರದಿ ಮಾಡಿದೆ.

ಇಬ್ಬರು ದಲಿತರನ್ನು ಹಿಂಸಿಸಿದ ಬಿಜೆಪಿಯ ಜಿಲ್ಲಾ ಮಾಜಿ ಕಾರ್ಯದರ್ಶಿ ಎಂ ಭರತ್ ರೆಡ್ಡಿ ವಿರುದ್ಧ ಸ್ಥಳೀಯ ದಲಿತ ನಾಯಕ ಮಣಿಕೊಲ್ಲಾ ಗಂಗಾಧರ್ ಅವರು ದೂರು ದಾಖಲಿಸಿದ್ದಾರೆ.
ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭರತ್ ತಲೆಮರೆಸಿಕೊಂಡಿದ್ದು, ಶೀಘ್ರವೇ ಅವರನ್ನು ಪತ್ತೆ ಹಚ್ಚಲಾಗುವುದು ಎಂದು ನಿಜಾಮಾಬಾದಿನ ಪೊಲೀಸ್ ಆಧಿಕಾರಿ ಎನ್ ಭುಚ್ಚಯ್ಯಾ ಹೇಳಿದ್ದಾರೆ.

ಭರತ್ ಅವರ ಈ ವರ್ತನೆಯನ್ನು ಅವರ ಹಿಂಬಾಲಕ ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದನು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP leader, who allegedly caned two Dalit men and forced them to take a dip in dirty waters for questioning his illegal mining of gravel, was booked by the police in Telangana’s Nizamabad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ