ಬೇಲೂರಿನ ಮಹಿಳಾ ಟೆಕ್ಕಿ ಹೈದರಾಬಾದಿನಲ್ಲಿ ನಾಪತ್ತೆ
ಹೈದರಾಬಾದ್, ಫೆ. 09: ದೇಶದ ಪ್ರತಿಷ್ಠಿತ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕ ಮೂಲದ ಅನುಶ್ರೀ ಅವರು ನಾಪತ್ತೆಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಅನುಶ್ರೀ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರ ತಂದೆ ಪ್ರಭಾಕರ್ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಅನುಶ್ರೀ ಹೈದರಾಬಾದಿಗೆ ತೆರಳುವ ಮುನ್ನ ನನಗೆ ಕರೆ ಮಾಡಿದ್ದೇ ಕೊನೆ, ನಂತರ ಯಾವುದೇ ಫೋನ್ ಕರೆ ಬಂದಿಲ್ಲ. ಅವಳು ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ವಿಚಾರಿಸಿದೆ. ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಅನುಶ್ರೀ ಗೆಳತಿಯರಿಗೂ ಈ ಬಗ್ಗೆ ತಿಳಿದಿಲ್ಲ ಎಂದು ಅನುಶ್ರೀ ತಂದೆ ಪ್ರಭಾಕರ್ ಪ್ರತಿಕ್ರಿಯಿಸಿದ್ದಾರೆ.[ಟಿಸಿಎಸ್, ಇನ್ಫೋಸಿಸ್, ವಿಪ್ರೋಗೆ ಕಾದಿದೆ ಅಪಾಯ!]

ಕರ್ನಾಟಕದ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೇಬೀಡಿನ ಬ್ರಾಹ್ಮಣದ ಬೀದಿ ನಿವಾಸಿ ಪ್ರಭಾಕರ್ ಅವರ ಮಗಳು ಅನುಶ್ರೀ ಅವರು ಹೈದರಾಬಾದಿನ ಟಿಸಿಎಸ್ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ.ಗಚ್ಚಿ ಬೌಲಿ ಪ್ರದೇಶದ ಪಿಜಿವೊಂದರಲ್ಲಿ ಅನುಶ್ರೀ ವಾಸವಾಗಿದ್ದರು. ಅನುಶ್ರೀ ನಾಪತ್ತೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಗಚ್ಚಿಬೌಲಿ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಅನುಶ್ರೀ ಅವರು ತಮ್ಮ ತಂದೆಗೆ ಕರೆ ಮಾಡಿ ಅನಾರೋಗ್ಯದ ಬಗ್ಗೆ ನೋವು ತೋಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಆಕೆಯ ಪಿಜಿ ಸ್ನೇಹಿತೆಯರು, ಸಹದ್ಯೋಗಿಗಳನ್ನು ವಿಚಾರಿಸಲಾಗುತ್ತಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications