ತೆಲಂಗಾಣ ಪಶುವೈದ್ಯೆ ಅತ್ಯಾಚಾರ ಆರೋಪಿಗಳ ಮೇಲೆ ಕಲ್ಲು ತೂರಾಟ: ವಿಡಿಯೋ

Recommended Video

      Public talk on Dr Priyanka Reddy case | OneIndia Kannada

      ಹೈದರಾಬಾದ್, ಡಿಸೆಂಬರ್ 02: ತೆಲಂಗಾಣದ ಪಶುವೈದ್ಯೆಯನ್ನು ಅಮಾನವೀಯ ರೀತಿಯಲ್ಲಿ ಅತ್ಯಾಚಾರ ಮಾಡಿ ಕೊಂದ ಆರೋಪಿಗಳನ್ನು ಸಾಗಿಸುತ್ತಿದ್ದ ವಾಹನದ ಮೇಲೆ ಆಕ್ರೋಶಿತ ನಾಗರೀಕರು ಬಿಡದೆ ಕಲ್ಲು ತೂರಾಟ ಮಾಡಿದ್ದಾರೆ.

      ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಭಾರಿ ಬಿಗಿ ಬಂದೋಬಸ್ತ್‌ ನಲ್ಲಿ ಚಾರ್ಲಪಲ್ಲಿ ಜೈಲಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ಸಮಯದಲ್ಲಿ ಮಾರ್ಗಮಧ್ಯೆ ನೂರಾರು ಸಂಖ್ಯೆಯಲ್ಲಿದ್ದ ಜನರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

      ನಾಲ್ಕು ಭಾರಿ ವಾಹನಗಳಲ್ಲಿ ನೂರಾರು ಸಂಖ್ಯೆ ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಆರೋಪಿಗಳನ್ನು ಚಾರ್ಲಪಲ್ಲಿ ಜೈಲಿಗೆ ಸಾಗಿಸಲಾಗುತ್ತಿತ್ತು. ಇದರ ಬಗ್ಗೆ ಮೊದಲೇ ಮಾಹಿತಿ ದೊರೆತಿದ್ದ ಕಾರಣ ನೂರಾರು ಸಂಖ್ಯೆಯಲ್ಲಿ ಜನರು ಮಾರ್ಗಮಧ್ಯೆ ಕಾದು ನಿಂತು ಸತತವಾಗಿ ಕಲ್ಲುತೂರಾಟ ನಡೆಸಿದ್ದಾರೆ.

      Stone Pelted On Rape Accused Of Telangana Veterinary Doctor

      ಜನರನ್ನು ಚದುರಿಸಿ ವಾಹನವನ್ನು ಮುಂದೆ ತೆಗೆದುಕೊಂಡು ಹೋಗಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕಲ್ಲು ತೂರಾಟದ ದೆಸೆಯಿಂದ ಕೆಲವು ಪೊಲೀಸರಿಗೆ ಗಾಯಗಳಾಗಿವೆ.

      ಅತ್ಯಾಚಾರ ಆರೋಪಿಗಳಾದ ಅಲಿ ಹಾಗೂ ಟ್ರಕ್ ಕ್ಲೀನರ್ ಜೊಲ್ಲು ಶಿವ ಚೆನ್ನಕೇಶವ, ಜೊಲ್ಲು ನವೀನ್‌ ಅವರುಗಳು ನವೆಂಬರ್ 27 ರಂದು ಪಶುವೈದ್ಯೆ ಒಬ್ಬರ ಮೇಲೆ ಅತ್ಯಾಚಾರ ನಡೆಸಿ ಕೊಂದು ಸುಟ್ಟುಹಾಕಿದ್ದರು. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.

      ಪಶುವೈದ್ಯೆ ಅತ್ಯಾಚಾರದ ವಿರುದ್ಧ ದೇಶದಾದ್ಯಂತ ಆಕ್ರೋಶ ಹೆಚ್ಚಿದ್ದು, ತೆಲಂಗಾಣ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+