ನಿತ್ಯ ಲೈಂಗಿಕ ಸಂಪರ್ಕ ಇಲ್ಲದೇ ಹೇಗಿರುತ್ತೀರಿ ಎಂದ ಸೀನಿಯರ್ ಕ್ಯಾಪ್ಟನ್ ವಿರುದ್ಧ ಮಹಿಳಾ ಪೈಲಟ್ ದೂರು
ಹೈದರಾಬಾದ್, ಮೇ 15: ಮಹಿಳಾ ಪೈಲಟ್ ವೊಬ್ಬರು ನೀಡಿದ ಲೈಂಗಿಕ ಕಿರುಕುಳದ ದೂರಿನ ಆಧಾರದಲ್ಲಿ ಏರ್ ಇಂಡಿಯಾವು ಹಿರಿಯ ಕ್ಯಾಪ್ಟನ್ ವಿರುದ್ಧ ವಿಚಾರಣೆಗೆ ಮುಂದಾಗಿದೆ. ಆರೋಪಿಯು ಹಲವು ಅಸಂಬದ್ಧ ಪ್ರಶ್ಸ್ನೆಗಳನ್ನು ಮಹಿಳಾ ಪೈಲಟ್ ಗೆ ಕೇಳಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಏರ್ ಇಂಡಿಯಾದ ವಕ್ತಾರರು ಮಾಹಿತಿ ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮಹಿಳೆ ಪೈಲಟ್ ನಲ್ಲಿ ದೂರಿನಲ್ಲಿ ಹೀಗೆ ಆರೋಪ ಮಾಡಿದ್ದಾರೆ: "ತರಬೇತುದಾರರು ತರಬೇತಿಯ ನಂತರ ಹೈದರಾಬಾದ್ ನಗರದಲ್ಲಿ ಇರುವ ರೆಸ್ಟೋರೆಂಟ್ ಗೆ ಹೋಗೋಣ ಎಂದು ತರಬೇತಿಯ ನಂತರ ಕರೆದರು. ಅದಕ್ಕೆ ನಾನು ಒಪ್ಪಿಕೊಂಡೆ. ಅವರು ಸಭ್ಯರಂತೆ ಕೂಡ ಆ ವರೆಗೆ ಕಂಡುಬಂದಿದ್ದರು. ರಾತ್ರಿ ಎಂಟು ಗಂಟೆ ಸುಮಾರಿಗೆ ರೆಸ್ಟೋರೆಂಟ್ ಗೆ ಹೋದೆವು. ಅಲ್ಲಿ ನನಗೆ ಸಮಸ್ಯೆ ಶುರುವಾಯಿತು".

"ಆತನ ವೈವಾಹಿಕ ಜೀವನದಲ್ಲಿ ಅದೆಷ್ಟು ಅಸಂತುಷ್ಟರು, ಖಿನ್ನತೆಗೆ ಒಳಗಾಗಿದ್ದೇನೆ ಎಂದು ಹೇಳಿಕೊಳ್ಳಲು ಆರಂಭಿಸಿದರು. ಅದರ ಜತೆಗೆ ನನ್ನ ಪತಿಯಿಂದ ದೂರ ಇರುವುದಕ್ಕೆ ನನಗೆ ಹೇಗೆ ಸಾಧ್ಯ ಮತ್ತು ಪ್ರತಿ ದಿನ ಲೈಂಗಿಕ ಸಂಪರ್ಕದ ಅಗತ್ಯ ಇಲ್ಲವೆ ಎಂದು ಕೇಳಿದರು. ಒಂದು ಹಂತದಲ್ಲಿ ನಾನು ಅವರಿಗೆ ಹೇಳಿಬಿಟ್ಟೆ: ಇಂಥ ವಿಚಾರಗಳನ್ನು ಮಾತನಾಡುವುದು ಇಷ್ಟವಿಲ್ಲ. ಜತೆಗೆ ಕ್ಯಾಬ್ ಗೆ ಕೂಡ ಕರೆ ಮಾಡಿದೆ" ಎಂದು ದೂರಿನಲ್ಲಿ ಆ ಪೈಲಟ್ ತಿಳಿಸಿದ್ದಾರೆ.












Click it and Unblock the Notifications