• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

3,000 ಕೋಟಿ ರು ವಂಚನೆ ಪ್ರಕರಣ, ನೌಹೀರಾ ಶೇಖ್ ವಿರುದ್ಧ ಎಫ್ಐಆರ್

|

ಹೈದರಾಬಾದ್, ಮೇ 16: ಆರ್ಥಿಕ ಅವ್ಯವಹಾರದ ಆರೋಪದ ಮೇಲೆ ಎಂಇಪಿ ಅಧ್ಯಕ್ಷೆ ಹಾಗೂ ಹೀರಾ ಗೋಲ್ಡ್ ಕಂಪನಿ ನಿರ್ದೇಶಕಿ ನೌಹೀರ್ ಶೇಖ್ ಹಾಗೂ ಇನ್ನಿಬ್ಬರನ್ನು ತೆಲಂಗಾಣ ಪೊಲೀಸರು, ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

24 ಬೇನಾಮಿ ಸಂಸ್ಥೆಗಳ ಮೂಲಕ 182 ಬ್ಯಾಂಕ್ ಖಾತೆಗಳ ಮೂಲಕ 1,72,114 ಹೂಡಿಕೆದಾರರಿಂದ ಸುಮಾರು 3,000 ಕೋಟಿ ರುಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದು ಪತ್ತೆಯಾಗಿದೆ.

ಮನಿಲಾಂಡ್ರಿಂಗ್ ನಿಯಂತ್ರಣ ಕಾಯ್ದೆ(ಪಿಎಂಎಲ್ ಎ)2002ರ ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ನೌಹೀರಾ ಶೇಖ್, ಮೊಲ್ಲಿ ಥಾಮಸ್, ಬಿಜು ಥಾಮಸ್ ಎಂಬುವವರನ್ನು ಬಂಧಿಸಲಾಗಿದೆ. ಹೀರಾ ಸಮೂಹ ಸಂಸ್ಥೆ ಮೂಲಕ ಅಕ್ರಮವಾಗಿ ಹಣ ರವಾನೆ ಮಾಡಿ ಆರೋಪವನ್ನು ಹೊರೆಸಲಾಗಿದೆ.

ಎಂಇಪಿ ಪಕ್ಷದ ಮುಖ್ಯಸ್ಥೆ ನೌಹೀರಾ ಶೇಖ್‌ಗೆ ಜಾಮೀನು

ಮೆಟ್ರೋಪಾಲಿಟನ್ ಸೆಷನ್ ಜಡ್ಜ್ ಮುಂದೆ ಬಂಧಿತರನ್ನು ಹಾಜರುಪಡಿಸಲಾಗಿದ್ದು, 7ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ. ಮೂವರ ವಿರುದ್ಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ದಾಖಲಿಸಲಾಗಿದೆ.

ಹೂಡಿಕೆ ಡಬ್ಬಲ್ ಮಾಡಿಕೊಡುವ ಆಮಿಷ

ಹೂಡಿಕೆ ಡಬ್ಬಲ್ ಮಾಡಿಕೊಡುವ ಆಮಿಷ

ಹೈದರಾಬಾದ್ ಮೂಲದ ಹೀರಾ ಸಮೂಹ ಸಂಸ್ಥೆ ಸೇರಿ 24ಕ್ಕೂ ಅಧಿಕ ಕಂಪನಿಗಳನ್ನು ಹೊಂದಿದ್ದು, ಯುಎಇ ಹಾಗೂ ದುಬೈನಲ್ಲೂ ಕಚೇರಿಗಳನ್ನು ಹೊಂದಿದೆ. ಹೂಡಿಕೆ ಡಬ್ಬಲ್ ಮಾಡುವ ನೆಪದಲ್ಲಿ ಸಾರ್ವಜನಿಕರಿಂದ ಹಣ ಪಡೆಯಲಾಗಿದೆ. ಠೇವಣಿ ಹಾಗೂ ಹೂಡಿಕೆ ರೂಪದಲ್ಲಿ ಹಣ ಸಂಗ್ರಹಿಸಲಾಗಿದೆ. ಇದಕ್ಕೆ ಪ್ರತಿಯಾಗಿ ವಾರ್ಷಿಕವಾಗಿ ಶೇ.36 ಮೊತ್ತವನ್ನು ಹಿಂತಿರುಗಿಸುವುದಾಗಿ ಶೇಖ್ ಭರವಸೆ ನೀಡಿದ್ದರು. ಆದರೆ, ಹೂಡಿಕೆದಾರರಿಗೆ ಯಾವುದೆ ಹಣ ನೀಡದ ಹಿನ್ನೆಲೆಯಲ್ಲಿ ಸಾಕಷ್ಟು ದೂರುಗಳು ದಾಖಲಾಗಿತ್ತು.

3,000 ಕೋಟಿ ರು ಅವ್ಯವಹಾರ

3,000 ಕೋಟಿ ರು ಅವ್ಯವಹಾರ

ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕದಲ್ಲಿ ಸಂತ್ರಸ್ತರಿದ್ದಾರೆ. ಆಕೆ ಹೆಸರಿನಲ್ಲಿ 180 ಬ್ಯಾಂಕ್ ಖಾತೆಗಳಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ 24 ಬೇನಾಮಿ ಸಂಸ್ಥೆಗಳ ಮೂಲಕ 182 ಬ್ಯಾಂಕ್ ಖಾತೆಗಳ ಮೂಲಕ 1,72,114 ಹೂಡಿಕೆದಾರರಿಂದ ಸುಮಾರು 3,000 ಕೋಟಿ ರುಗಳನ್ನು ಅಕ್ರಮವಾಗಿ ಸಂಗ್ರಹಿಸಿರುವುದು ಕಂಡು ಬಂದಿದೆ, ಯುಎಇಯಲ್ಲಿ 10 ಅಕೌಂಟ್ಸ್ ಇದೆ ಎಂದು ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಹೇಳಿದರು.

ಸುವನ್ ಟೆಕ್ನಾಲಜೀಸ್ ನ ಬಿಜು ಥಾಮಸ್

ಸುವನ್ ಟೆಕ್ನಾಲಜೀಸ್ ನ ಬಿಜು ಥಾಮಸ್

ಬಂಧಿತರ ಪೈಕಿ ಬಿಜು ಥಾಮಸ್ ಅವರು ಕೇರಳ ಮೂಲದ ಸುವನ್ ಟೆಕ್ನಾಲಜೀಸ್ ಸಲ್ಯೂಷನ್ ಇಂಡಿಯಾ ಸಂಸ್ಥೆಯ ಎಂಡಿಯಾಗಿದ್ದಾರೆ. ಹೀರಾ ಗ್ರೂಪ್ ಆಫ್ ಕಂಪನಿಯ ಅಕೌಂಟ್ಸ್, ಸಾಫ್ಟ್ ವೇರ್ ಗಳನ್ನು ಈ ಸಂಸ್ಥೆ ನಿಯಂತ್ರಿಸುತ್ತಿತ್ತು. ಇನ್ನು ಮೊಲ್ಲಿ ಥಾಮಸ್ ಅವರು ನೌಹೀರಾ ಶೇಖ್ ಅವರಿಗೆ ಅಪ್ತ ಸಹಾಯಕಿಯಗಿ ಕಾರ್ಯ ನಿರ್ವಹಿಸುತ್ತಿದಾರೆ. ಹೀರಾ ಗ್ರೂಪ್ ತಿರುಪತಿ, ಹೈದರಾಬಾದಿನಲ್ಲಿ 500 ಕೋಟಿ ರೂ ಮೌಲ್ಯದ ಬಹು ಅಂತಸ್ತಿನ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ದುಬೈನಲ್ಲಿ ಮೌಲ್ಯದ 400 ಕೋಟಿ ರೂ. ಹೋಟೆಲ್ ಗಳು ಮತ್ತು ಕ್ಲಬ್ ಹೌಸ್ ಗಳನ್ನು ಹೊಂದಿರುವ ಮಾಹಿತಿಯಿದೆ.ಸುಮಾರು 43 ದೇಶಗಳು ಆಸ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ ಎಂದು ಆಯುಕ್ತ ಅಂಜನಿ ಕುಮಾರ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಚುನಾವಣೆ ಸ್ಪರ್ಧಿಸಿದ್ದ ಎಐಎಂಇಪಿ

ಕರ್ನಾಟಕದಲ್ಲಿ ಚುನಾವಣೆ ಸ್ಪರ್ಧಿಸಿದ್ದ ಎಐಎಂಇಪಿ

ಪಕ್ಷವು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಜಾತ್ಯಾತೀತ ಪಕ್ಷವಾಗಿದ್ದು, ಬರುವ ಚುನಾವಣೆಯಲ್ಲಿ ರಾಜ್ಯದ ಅರ್ಧದಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ನಮ್ಮ ಪಕ್ಷದ ಚಿನ್ಹೆ ವಜ್ರ ಆಗಿದೆ. ಮಾನವೀಯತೆಗಾಗಿ ನ್ಯಾಯ ಎಂಬ ಧ್ಯೇಯ ಹೊಂದಲಾಗಿದೆ ಎಂದು ಚುನಾವಣೆ ಕಣದಲ್ಲಿ ಎಂಇಪಿ ಸ್ಪರ್ಧಿಸಿತ್ತು. ಮಾನವ ಹಕ್ಕುಗಳ ಹೋರಾಟಗಾರ್ತಿ, ಉದ್ಯಮಿ ಹಾಗೂ ಹೀರಾ ಸಮೂಹದ ಸಂಸ್ಥಾಪಕಿ ಮತ್ತು ಸಿಇಒ ಡಾ.ನೌಹೆರಾ ಶೇಖ್‌ ಮಹಿಳೆಯರನ್ನು ಜಾತಿ, ವರ್ಗ, ಧಾರ್ಮಿಕತೆ ಮತ್ತು ಪ್ರದೇಶದ ಭಿನ್ನತೆ ಮೀರಿ ಸಬಲೀಕರಣಗೊಳಿಸುವ ಅಖಿಲ ಭಾರತೀಯ ಮಹಿಳಾ ಸಬಲೀಕರಣ ಪಕ್ಷ (ಎಐಎಂಇಪಿ) ಎಂಬ ರಾಷ್ಟ್ರೀಯ ಪಕ್ಷ ಪ್ರಾರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The Enforcement Directorate (ED) grilled Nowhera Shaikh, Molly Thomas and Biju Thomas in connection with the 24 entities and 182 bank accounts through which the Rs 3,000 crores that they had collected from 1,72,114 investors was diverted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more