ಸ್ಮೃತಿ ಸಮರ್ಥನೆ ನಂತರವೂ 10 ಪ್ರೊಫೆಸರ್ ಗಳು ರಿಸೈನ್

Posted By:
Subscribe to Oneindia Kannada

ಹೈದರಾಬಾದ್, ಜ. 21: ವಿದ್ಯಾರ್ಥಿ ರೋಹಿತ್ ವೆಮುಲ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಸಮರ್ಥನೆ ನೀಡಿದ್ದನ್ನು ದಲಿತ ವಿದ್ಯಾರ್ಥಿ ಸಂಘಟನೆ ತಿರಸ್ಕರಿಸಿದೆ. ಸುಮಾರು 10 ಜನ ಎಸ್ ಸಿ ಎಸ್ಟಿ ಪ್ರೊಫೆಸರ್ ಗಳು ರಾಜೀನಾಮೆ ನೀಡಿದ್ದಾರೆ.

ಹೈದರಾಬಾದಿನ ಕೇಂದ್ರ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ 10 ಪ್ರೊಫೆಸರ್​ಗಳು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯತ್ಯಕ್ಕೆ ರಾಜೀನಾಮೆ ನೀಡಿದ್ದಾರೆ.

10 Dalit teachers resign from administrative posts over Smriti remark

ರೋಹಿತ್​ನನ್ನು ಅಮಾನತು ಮಾಡಿದ ಸಮಿತಿಯಲ್ಲಿ ದಲಿತ ಪ್ರೊಫೆಸರ್ ಸಹ ಇದ್ದರು ಎಂಬ ಸಚಿವರ ಹೇಳಿಕೆಯನ್ನು ವಿಶ್ವವಿದ್ಯಾಲಯದ ಎಸ್​ಸಿ/ಎಸ್​ಸಿ ಟೀಚರ್ಸ್ ಮತ್ತು ಆಫೀಸರ್ಸ್ ಫೋರಮ್ ನಿರಾಕರಿಸಿದೆ. ಮೇಲ್ವರ್ಗದ ಪ್ರೊಫೆಸರ್ ಒಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯಲ್ಲಿ ದಲಿತರು ಯಾರೂ ಇರಲಿಲ್ಲ ಎಂದು ತಿಳಿಸಿದೆ.

ಸಚಿವೆ ಸ್ಮೃತಿ ಅವರು ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕಾರ್ಯಕಾರಿ ಕೌನ್ಸಿಲ್ ನ ಉಪ ಸಮಿತಿಯ ನೇತೃತ್ವವನ್ನು ಮೇಲ್ವರ್ಗಕ್ಕೆ ಸೇರಿರುವ ಪ್ರೊಫೆಸರ್ ವಿಪಿನ್ ಶ್ರೀವಾಸ್ತವ್ ಅವರು ಹೊಂದಿದ್ದಾರೆ, ದಲಿತರಿಗೆ ಉಪಸಮಿತಿಯಲ್ಲಿ ಸ್ಥಾನ ಸಿಕ್ಕಿಲ್ಲ ಎಂದು ಎಸ್​ಸಿ/ಎಸ್​ಸಿ ಟೀಚರ್ಸ್ ಮತ್ತು ಆಫೀಸರ್ಸ್ ಫೋರಮ್ ಪ್ರಕಟಿಸಿದೆ. ರೋಹಿತ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿಭಟನೆಗಳು ಹೆಚ್ಚುತ್ತಿದ್ದು, ಪ್ರೊಫೆಸರ್​ಗಳು ಸಹ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Following Smriti Irani's statement yesterday, 10 SC/ST teachers in HCU are said to have resigned from administrative posts. Protesting against the Union HRD minister Smriti Irani's statement that Dalit teachers were also part of the probe that expelled the five research scholars, the teachers were planning to quit their jobs initially
Please Wait while comments are loading...