ವಿದ್ಯಾರ್ಥಿ ಆತ್ಮಹತ್ಯೆ: ಒಸ್ಮಾನಿಯಾ ವಿವಿಯಲ್ಲಿ ಶವದ ಮುಂದೆ ಪ್ರತಿಭಟನೆ
ಹೈದರಾಬಾದ್, ಡಿಸೆಂಬರ್ 04: ಹೈದರಾಬಾದಿನ ಒಸ್ಮಾನಿಯಾ ವಿಶ್ವವಿದ್ಯಾಲಯದ ಹಾಸ್ಟೇಲ್ ನಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ತೀವ್ರ ಪ್ರತಿಭಟನೆ ಆರಂಭವಾಗಿದೆ.
ಒಸ್ಮಾನಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ಆರಂಭಿಸಿರುವ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಯುವಕನ ಶವವನ್ನು ಸ್ಥಳಾಂತರಿಸಲು ಒಪ್ಪುತ್ತಿಲ್ಲ.

ಎಂಎಸ್ಸಿ ಅಭ್ಯಸಿಸುತ್ತಿದ್ದ ಮುರಳೀ(21) ಎಂಬ ವಿದ್ಯಾರ್ಥಿ ಡಿ.3 ಭಾನುವಾರ ಸಂಜೆ ಹಾಸ್ಟೇಲ್ ನ ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಬರೆದಿರುವ ಸೂಸೈಡ್ ನೋಟ್ ನಲ್ಲಿ, 'ಪರೀಕ್ಷೆಗೆ ಚೆನ್ನಾಗಿ ಸಿದ್ಧವಾಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು' ಬರೆದಿದ್ದಾರೆ.
ಆದರೆ, 'ಮುರಳೀ ಮನೆಯಲ್ಲಿ ತೀರಾ ಬಡತನವಿತ್ತು. ಆತನಿಗೆ ಯಅವ ಉದ್ಯೋಗವೂ ಸಿಗುತ್ತಿಲ್ಲ ಎಂಬ ಭಯವಿತ್ತು. ಆದ್ದರಿಂದ ಆತನ ಸಾವಿಗೆ ತೆಲಂಗಾಣ ರಾಜ್ಯ ಸರ್ಕಾರವೇ ಕಾರಣ. ಕೂಡಲೇ ಆತನ ಕುಟುಂಬಕ್ಕೆ ರಾಜ್ಯಸರ್ಕಾರ 50 ಲಕ್ಷ ರೂ.ಪರಿಹಾರ ನೀಡದಿದ್ದರೆ ಆತನ ಶವವನ್ನು ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ' ಎಂದು ಆತನ ಸ್ನೇಹಿತರು, ಸಹಪಾಠಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.












Click it and Unblock the Notifications