"ಮೋದಿಯನ್ನು ರಾಷ್ಟ್ರಪಿತ ಎಂದ ಟ್ರಂಪ್ ಡಬಲ್ ಗೇಮ್ ಆಡ್ತಿದಾರೆ!"

ಹೈದರಾಬಾದ್, ಸೆಪ್ಟೆಂಬರ್ 26: ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಷ್ಟ್ರಪಿತ ಎಂದು ಕರೆಯುವ ಮೂಲಕ ಭಾರತದ ಇತಿಹಾಸಕ್ಕೆ ಡೊನಾಲ್ಡ್ ಟ್ರಂಪ್ ಅವಮಾನ ಮಾಡಿದ್ದಾರೆ ಎಂದು ಹೈದರಾಬಾದ್ ಸಂಸದ ಅಸಾದುದ್ದಿನ್ ಓವೈಸಿ ಗುಡುಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅಧ್ಯಕ್ಷ ಟ್ರಂಪ್, 'ನರೇಂದ್ರ ಮೋದಿ ನನಗೆ ಅತ್ಯುತ್ತಮ ಸ್ನೇಹಿತರು. ಅವರು ಭಾರತದ ಪಿತಾಮಹ' ಎಂದಿದ್ದರು.

"ಡೊನಾಲ್ಡ್ ಟ್ರಂಪ್ ಡಬಲ್ ಗೇಮ್ ಆಡ್ತಿದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ತಮ್ಮ ಗೆಳೆಯ ಎನ್ನುತ್ತಾರೆ, ಅತ್ತ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನೂ ಗೆಳೆಯ ಎನ್ನುತ್ತಾರೆ. ಮೋದಿ ಅವರನ್ನು ಹೊಗಳುವ ಅವಸರದಲ್ಲಿ ಅವರನ್ನು ಭಾರತದ ಪಿತಾಮಹ ಎಂದು ಕರೆಯುವ ಮೂಲಕ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರಿಗೆ ಅವಮಾನ ಮಾಡಿದ್ದಾರೆ" ಎಂದು ಓವೈಸಿ ದೂರಿದರು.

Owaisi Blames Trump For Calling Modi As Father Of Nation

"ಟ್ರಂಪ್ ಗೆ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಯಾವ ಜ್ಞಾನವೂ ಇಲ್ಲ. ಗಾಂಧಿಜೀ ಈ ದೇಶವನ್ನು ಒಗ್ಗೂಡಿಸಿದವರು, ಭ್ರಾತೃತ್ವ ಬಿತ್ತಿದರು. ಭಾರತೀಯ ಇತಿಹಾಸದಲ್ಲಿ ಗಾಂಧೀಜಿಯವರನ್ನು ಬಿಟ್ಟರೆ ಪಂಡಿತ್ ನೆಹರು ಮತ್ತು ಸರ್ದಾರ್ ಪಟೇಲ್ ಎಲ್ಲರೂ ದಿಗ್ಗಜರು. ಆದರೆ ಅವರ್ಯಾರನ್ನೂ ನಾವು ರಾಷ್ಟ್ರಪಿತ ಎಂದು ಕರೆಯಲಿಲ್ಲ. ಅಂಥಾದ್ದರಲ್ಲಿ ಮೋದಿ ಅವರನ್ನು ರಾಷ್ಟ್ರಪಿತ ಎನ್ನುವುದು ಸರಿಯೇ? ದೇಶವನ್ನು ವಿಭಜಿಸಿದವರನ್ನು ಗಾಂಧೀಜಿಯವರಿಗೆ ಹೋಲಿಸಿದರೆ ಅದನ್ನು ನಾವು ಸುತಾರಾಂ ಒಪ್ಪುವುದಿಲ್ಲ" ಎಂದು ಕೆಂಡಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+