ಮದುವೆ ವಾರ್ಷಿಕೋತ್ಸವ ದಿನವೇ ಮಸಣ ಸೇರಿದ ಸಬ್ ಇನ್ ಸ್ಪೆಕ್ಟರ್

ಹೈದರಾಬಾದ್ ನ ಆ ಸಬ್ ಇನ್ ಸ್ಪೆಕ್ಟರ್ ಮದುವೆ ವಾರ್ಷಿಕೋತ್ಸವ ದಿನವೇ ಕಾರು ಅಪಘಾತ ಆಗಿದೆ. ವೇಗವಾಗಿ ಬಂದ ಕಾರು ಚಾಲಕನೊಬ್ಬ ಡಿಕ್ಕಿ ಹೊಡೆದು, ಹೊರಟುಹೋಗಿದ್ದಾನೆ. ಸಬ್ ಇನ್ ಸ್ಪೆಕ್ಟರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ

ಹೈದರಾಬಾದ್, ಮೇ 9: ಈ ವರದಿ ನಿಮ್ಮ ಗಮನಕ್ಕೆ ತರುವ ಎಂಬ ಕಾರಣಕ್ಕೆ ಟೈಪ್ ಮಾಡುತ್ತಿದ್ದರೆ ಕೈ ಬೆರಳುಗಳೆ ತಡೆದಂತಾಗುತ್ತಿದೆ. ಹಿಟ್ ಅಂಡ್ ರನ್ ಪ್ರಕರಣವೊಂದರಲ್ಲಿ ಸಬ್ ಇನ್ ಸ್ಪೆಕ್ಟರ್ ವೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ. ನಗರದ ಲ್ಯಾಂಗರ್ ಹೌಸ್ ಪ್ರದೇಶದಲ್ಲಿ ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದಾಗ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ.

ಸಬ್ ಇನ್ ಸ್ಪೆಕ್ಟರ್ ಎನ್ ಕಿಷ್ಟಯ್ಯ (57) ಅವರು ವಾಯುವಿಹಾರಕ್ಕೆ ತೆರಳಿದ್ದಾಗ ಕಾರು ಡಿಕ್ಕಿ ಹೊಡೆದಿದ್ದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆತ ಹೈದರಾಬಾದ್ ನಲ್ಲಿ ಪೊಲೀಸ್ ಇಲಾಖೆಯ ವಿಶೇಷ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಾರನ್ನು ಅಪಘಾತ ಮಾಡಿ, ಚಾಲಕ ತಪ್ಪಿಸಿಕೊಂಡಿದ್ದಾನೆ.[ಆತ ಊಟ-ನೀರಿಲ್ಲದೆ ತಂದೆ ಶವದ ಬಳಿಯೇ ಐದು ದಿನ ಇದ್ದ]

On His Wedding Anniversary, Cop Killed By Speeding Car In Hyderabad

ಆದರೆ, ಸ್ಥಳದಲ್ಲಿದ್ದ ಕೆಲವರು ಕಾರಿನ ನೋಂದಣಿ ಸಂಖ್ಯೆ ಗುರುತು ಮಾಡಿಕೊಂಡಿದ್ದಾರೆ. ಅದರ ಆಧಾರದಲ್ಲಿ ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ. ಇನ್ನೊಂದು ವಿಚಾರ ಏನೆಂದರೆ, ಅಪಘಾತದಿಂದ ಮೃತಪಟ್ಟರಲ್ಲ ಕಿಷ್ಟಯ್ಯ ಅವರ ವಿವಾಹ ವಾರ್ಷಿಕೋತ್ಸವ ದಿನ ಮಂಗಳವಾರ ಇತ್ತು. ಇಂಥ ದಿನವೇ ಅವರ ಸಾವಿನ ಸುದ್ದಿಯನ್ನು ಕುಟುಂಬದವರು ಕೇಳುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+