ಹೈದರಾಬಾದ್ ನಲ್ಲಿನ್ನು ಪಬ್ ಪ್ರವೇಶಕ್ಕೆ ಆಧಾರ್ ಕಡ್ಡಾಯ!

ಹೈದರಾಬಾದ್, ಸೆಪ್ಟೆಂಬರ್ 21: ಸರ್ಕಾರದ ಬಹುತೇಕ ಯೋಜನೆಗಳಿಗೆ ಈಗ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದಾಯ್ತು! ಇದೀಗ ಹೈದರಾಬಾದ್ ನಲ್ಲಿ ಪಬ್ ಗೆ ಹೋಗುವವರಿಗೂ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಆದೇಶ ಹೊರಡಿಸಿರುವ ತೆಲಂಗಾಣ ರಾಜ್ಯ ಸರ್ಕಾರದ ಅಬಕಾರಿ ಇಲಾಖೆ, ಪಬ್ ಗಳಿಗೆ ಭೇಟಿ ನೀಡುವ ಗ್ರಾಹಕರನ್ನು ಒಳಗೆ ಬಿಡುವ ಮುನ್ನ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಪರಿಶೀಲಿಸಿದ ನಂತರವೇ ಒಳಬಿಡುವಂತೆ ಹೈದರಾಬಾದ್ ನ ಎಲ್ಲಾ ಪಬ್ ಮಾಲೀಕರಿಗೆ ಸೂಚನೆ ನೀಡಿದೆ.

Now, Aadhaar mandatory for getting liquor at Hyderabad pubs

ಪಬ್ ಗೆ ಬರುವ ಗ್ರಾಹಕರು 21 ವರ್ಷಕ್ಕಿಂತ ಮೇಲ್ಪಟ್ಟವರೆಂಬುದನ್ನು ಕಂಡುಕೊಳ್ಳಲು ಈ ಮಾರ್ಗ ಅನುಸರಿಸುವಂತೆ ಅದು ಹೇಳಿದೆ. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದಿದ್ದರೆ ಬೇರೊಂದು ಗುರುತಿನ ಪತ್ರವನ್ನು ನೋಡಿ ಅವರು ವಯಸ್ಕರು ಎಂಬುದನ್ನು ಖಾತ್ರಿ ಮಾಡಿಕೊಂಡ ನಂತರವಷ್ಟೇ ಅವರನ್ನು ಒಳಬಿಡುವಂತೆ ತಾಕೀತು ಮಾಡಲಾಗಿದೆ.

ಹಾಗಾಗಿ, ಇನ್ನು ಹೈದರಾಬಾದ್ ನ ಪಬ್ ಗಳಿಗೆ ಹೋಗುವ ಯುವಕ, ಯುವತಿಯರು ತಮ್ಮ ಕೈಯ್ಯಲ್ಲಿ ಆಧಾರ್ ಕಾರ್ಡ್ ಹಿಡಿದು ಹೋಗುವುದು ಕಡ್ಡಾಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+