• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇಂದ್ರ ಸಚಿವ ಸಂಪುಟಕ್ಕಿಂತ ದೊಡ್ಡದು ತಿರುಪತಿ ಟ್ರಸ್ಟ್‌ ಸಮಿತಿ!

|
Google Oneindia Kannada News

ತಿರುಪತಿ, ಸೆಪ್ಟೆಂಬರ್‌ 17: ಆಂಧ್ರ ಪ್ರದೇಶ ಸರ್ಕಾರ ಗುರುವಾರ ತಿರುಪತಿ ತಿರುಮಲ ದೇವಾಲಯವನ್ನು ನಡೆಸುವ ತಿರುಮಲ ತಿರುಪತಿ ದೇವಸ್ಥಾನಂನ ನೂತನ ಟ್ರಸ್ಟ್‌ ಬೋರ್ಡ್ ಅನ್ನು ನೇಮಕ ಮಾಡಿದೆ. ಈ ನೂತನ ಟ್ರಸ್ಟ್‌ನ ಸಮಿತಿಯಲ್ಲಿ 29 ಸದಸ್ಯರು ಹಾಗೂ 52 ಆಹ್ವಾನಿತ ಸದಸ್ಯರು ಇದ್ದಾರೆ. ವಿಶ್ವದ ಅತೀ ಶ್ರೀಮಂತ ದೇವಾಲಯವಾದ ತಿರುಮಲ ತಿರುಪತಿ ತಿಮ್ಮಪ್ಪ ದೇವಸ್ಥಾನಂ ನ ಅತೀ ದೊಡ್ಡ ಟ್ರಸ್ಟ್‌ ಇದಾಗಿದೆ.

ಈ ಹಿಂದಿನ ತಿರುಮಲ ತಿರುಪತಿ ದೇವಸ್ಥಾನಂನ ಟ್ರಸ್ಟ್‌ನ ಸಮಿತಿಯಲ್ಲಿ ಸುಮಾರು 40 ಕ್ಕೂ ಕಡಿಮೆ ಜನ ಸಂಖ್ಯೆಯನ್ನು ಹೊಂದಿದ್ದರು. ಆದರೆ ಈಗಿನ ಹೊಸ ಸಮಿತಿಯಲ್ಲಿ 81 ಮಂದಿ ಇದ್ದಾರೆ. ಅದರಲ್ಲಿ ಈ ಹಿಂದಿನ ಸಮಿತಿಯ ಸದಸ್ಯರು ಕೂಡಾ ಇದ್ದಾರೆ. ಹಾಗೆಯೇ ವಿಶೇಷ ಆಹ್ವಾನಿತರು ಕೂಡಾ ಇದ್ದಾರೆ. ಟಿಟಿಡಿ ಟ್ರಸ್ಟ್‌ ಬೋರ್ಡ್‌ನ ಒಟ್ಟು ಸದಸ್ಯತ್ವವು ಕೇಂದ್ರ ಸಚಿವ ಸಂಪುಟಕ್ಕಿಂತ ದೊಡ್ಡದಾಗಿದೆ.

 ಟಿಟಿಡಿ ಹೊಸ ಸಮಿತಿಗೆ ಕರ್ನಾಟಕದಿಂದ ಶಾಸಕ ವಿಶ್ವನಾಥ್ ಸೇರ್ಪಡೆ ಟಿಟಿಡಿ ಹೊಸ ಸಮಿತಿಗೆ ಕರ್ನಾಟಕದಿಂದ ಶಾಸಕ ವಿಶ್ವನಾಥ್ ಸೇರ್ಪಡೆ

ಕೇಂದ್ರ ಸಚಿವ ಸಂಪುಟದಲ್ಲಿ ಒಟ್ಟು 78 ಮಂದಿ ಸದಸ್ಯರು ಇರುತ್ತಾರೆ. ಆದರೆ ಈ ಟಿಟಿಡಿ ಟ್ರಸ್ಟ್‌ ಬೋರ್ಡ್‌ನಲ್ಲಿ ಇದಕ್ಕಿಂತ ಮೂರು ಮಂದಿ ಅಧಿಕವಾಗಿದ್ದಾರೆ. ಅಂದರೆ ಟಿಟಿಡಿ ಟ್ರಸ್ಟ್‌ ಬೋರ್ಡ್‌ನ ಒಟ್ಟು ಸದಸ್ಯರ ಸಂಖ್ಯೆ 81 ಆಗಿದೆ.

ಈ ಟಿಟಿಡಿ ಟ್ರಸ್ಟ್‌ ಬೋರ್ಡ್‌ನಲ್ಲಿ ಇಂಡಿಯಾ ಸಿಮೆಂಟ್ಸ್‌ ಚೇರ್‌ಮನ್‌ ಎನ್‌ ಶ್ರೀನಿವಾಸನ್‌, ಮೈ ಹೋಮ್‌ ಗ್ರೂಪ್‌ನ ಚೇರ್‌ಮನ್‌ ಜೆ ರಾಮೇಶ್ವರ ರಾವ್‌, ಹೆಟೆರೋ ಗ್ರೂಪ್‌ ಚೇರ್‌ಮನ್‌ ಬಿ ಪಾರ್ಥಸಾರಥಿ ರೆಡ್ಡಿ ಈ ಸಮಿತಿಗೆ ಮರು ಆಯ್ಕೆ ಆಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮೂಲಗಳು, "ರಾಜ್ಯ ಸರ್ಕಾರವು ಹಲವಾರು ವಿಐಪಿಗಳನ್ನು ಈ ಸಮಿತಿಗೆ ಹಾಕಿದೆ. ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ವಿಐಪಿಗಳ ಹೆಸರನ್ನು ಹಾಕಿದೆ. ಇನ್ನು ಈ ತಿರುಮಲ ತಿರುಪತಿ ದೇವಸ್ಥಾನಂನ ನೂತನ ಟ್ರಸ್ಟ್‌ ಬೋರ್ಡ್ ಸಮಿತಿಗೆ ಆಯ್ಕೆಯಾಗಲು ಹೆಚ್ಚಿನ ಬೇಡಿಕೆ ಇತ್ತು ಎಂದು ಹೇಳಲಾಗಿದೆ.

ಟ್ರಸ್ಟ್‌ ಬೋರ್ಡ್‌ನ ಸದಸ್ಯತ್ವ ಪಡೆಯಲು ಲಾಬಿಗಳನ್ನು ನಡೆಸುವ ಪ್ರಯತ್ನಗಳು ಕೂಡಾ ನಡೆದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಏಳು ಮಂದಿಯನ್ನು ಅಧಿಕ ವಿಶೇಷ ಆಹ್ವಾನಿತರನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಟಿಟಿಡಿ ಟ್ರಸ್ಟ್‌ ಸಮಿತಿಗೆ ಸಂಬಂಧಿಸಿ ರಾಜ್ಯ ಸರ್ಕಾರವು ಒಟ್ಟು ಮೂರು ಸುತ್ತೋಲೆಗಳನ್ನು ಹೊರಡಿಸಿದೆ. ಮೊದಲು ರಾಜ್ಯ ಸರ್ಕಾರವು ಮುಖ್ಯಮಂತ್ರಿ ವೈ ಎಸ್‌ ಜಗನ್‌ ಮೋಹನ್ ರೆಡ್ಡಿಯ ಸಂಬಂಧಿಯನ್ನು ಆಗಸ್ಟ್‌ 8 ರಂದು ಟ್ರಸ್ಟ್‌ನ ಮುಖ್ಯಸ್ಥರಾಗಿ ನೇಮಕ ಮಾಡಲಾಗಿತ್ತು. ರಾಜ್ಯ ಸರ್ಕಾರದ ಮೊದಲ ಸುತ್ತೋಲೆಯಲ್ಲಿ ಸುಮಾರು 29 ಜನರ ಸಮಿತಿಯನ್ನು ರಚನೆ ಮಾಡಲಾಗಿತ್ತು.

ಬಳಿಕ ಮತ್ತೊಂದು ಆದೇಶದಲ್ಲಿ ತಿರುಪತಿ ಶಾಸಕ ಭೂಮಣ ರೆಡ್ಡಿ ಹಾಗೂ ಬ್ರಾಹ್ಮಣ ಕಾಪೋರೇಷನ್‌ ಮುಖ್ಯಸ್ಥ ಸುಧಾಕರ್‌ ಅನ್ನು ವಿಶೇಷ ಆಹ್ವಾನಿತರಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದೆ. ಬಳಿಕ ಮೂರನೇ ಆದೇಶದಲ್ಲಿ ಟ್ರಸ್ಟ್‌ ಸಮಿತಿಗೆ ಸುಮಾರು 50 ವಿಶೇಷ ಆಹ್ವಾನಿತರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಇವರ್‍ಯಾರಿಗೂ ಬೋರ್ಡ್‌ಗೆ ಸಂಬಂಧಿಸಿದ ವಿಚಾರದಲ್ಲಿ ಮತ ಮಾಡುವ ಹಕ್ಕು ಇಲ್ಲ.

ಮೂವರು ಅಧಿಕಾರಿಗಳನ್ನು ಹೊರತುಪಡಿಸಿದರೆ, ಟಿಟಿಡಿ ಟ್ರಸ್ಟ್‌ನಲ್ಲಿ ಆಂಧ್ರ ಪ್ರದೇಶದ 10, ತೆಲಂಗಾಣದ 7, ತಮಿಳುನಾಡಿನ 2, ಕರ್ನಾಟಕದ 2, ಮಹಾರಾಷ್ಟ್ರದ 2, ಗುಜರಾತ್‌ನ 1, ಪಶ್ಚಿಮ ಬಂಗಾಳದ 1 ಹಾಗೂ ಪಾಂಡಿಚೇರಿಯ 1 ಸದಸ್ಯರು ಇದ್ದಾರೆ. ರಾಜ್ಯ ಸರ್ಕಾರವು ಹೀಗೆ ದೊಡ್ಡ ಸಂಖ್ಯೆಯ ಸಮಿತಿಯನ್ನು ರಚನೆ ಮಾಡಿರುವುದು ಮಾತ್ರ ಮುಂದಿನ ದಿನಗಳಲ್ಲಿ ದೊಡ್ಡ ಪ್ರಭಾವವನ್ನು ಬೀರಲಿದೆ ಎಂದು ಹೇಳಲಾಗಿದೆ. ಟ್ರಸ್ಟ್‌ ಸಭೆಗಳು ಇದ್ದ ಸಂದರ್ಭದಲ್ಲಿ ಈ 81 ಮಂದಿಗೂ ಸಂಚಾರ ವ್ಯವಸ್ಥೆ, ವಸತಿ ವ್ಯವಸ್ಥೆಯನ್ನು ಮಾಡಿಕೊಡುವ ಜವಾಬ್ದಾರಿ ಟ್ರಸ್ಟ್‌ನದ್ದು ಆಗಿರುತ್ತದೆ.

(ಒನ್‌ ಇಂಡಿಯಾ ಸುದ್ದಿ)

English summary
Andhra Pradesh government appointed a jumbo trust board of Tirupati temple with 81 members, it is bigger than Union Cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X