ಆಂಧ್ರಕ್ಕೆ 1000 ಕೋಟಿ ಪ್ಯಾಕೇಜ್ ಘೋಷಿಸಿದ ಮೋದಿ
ಹೈದರಾಬಾದ್, ಅ.14 : ಹುಡ್‌ಹುಡ್ ಚಂಡಮಾರುತದಿಂದ ಹಾನಿಗೀಡಾದ ಆಂಧ್ರಪ್ರದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದು ಸಾವಿರ ಕೋಟಿ.ರೂ. ನೆರವು ಘೋಷಿಸಿದ್ದಾರೆ. ಚಂಡಮಾರುತದಿಂದ ಸ್ಥಗಿತಗೊಳಿಸಲಾಗಿದ್ದ ರೈಲ್ವೆ ಸಂಚಾರ ವಿಶಾಖಪಟ್ಟಣಂನಲ್ಲಿ ಮಂಗಳವಾರದಿಂದ ಪುನಃ ಆರಂಭವಾಗಿದೆ.
ಮಂಗಳವಾರ ಮಧ್ಯಾಹ್ನ ವಿಶಾಖಪಟ್ಟಣಂಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ವಿಶಾಖಪಟ್ಟಣಂ, ಶ್ರೀಕಾಕುಳಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ಚಂಡಮಾರುತದಿಂದ ಆಗಿರುವ ನಷ್ಟದ ಅಂದಾಜು ನಡೆಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮತ್ತು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಜೊತೆಗಿದ್ದರು. [ಚಂಡಮಾರುತ, ಆಂಧ್ರಕ್ಕೆ ಕರ್ನಾಟಕದ ನೆರವು]
ಸಮೀಕ್ಷೆ ನಂತರ ಮಾತನಾಡಿದ ಪ್ರಧಾನಿ ಮೋದಿ, ಆಂಧ್ರಪ್ರದೇಶಕ್ಕೆ 1000 ಕೋಟಿ ರೂ.ಗಳ ಪ್ಯಾಕೇಜ್ ಅನ್ನು ತುರ್ತಾಗಿ ಘೋಷಿಸಲಾಗಿದೆ ಎಂದು ಹೇಳಿದರು. ಹುಡ್‌ಹುಡ್ ಅಬ್ಬರದಿಂದ ಮೃತಪಟ್ಟ ಕುಟುಂಬಗಳಿಗೆ 2 ಲಕ್ಷ ಪರಿಹಾರ ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಮೋದಿ ಹೇಳಿದರು.
#HudHud : PM Narendra Modi conducts aerial survey of cyclone affected areas in Andhra Pradesh pic.twitter.com/Y499fJtazW
— ANI (@ANI_news) October 14, 2014 ಹುಡ್‌ಹುಡ್ ಚಂಡಮಾರುತದ ದಾಳಿಯಿಂದಾಗಿ ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ಕರಾವಳಿ ತೀರಗಳಲ್ಲಿ 22 ಮಂದಿ ಸಾವಿಗೀಡಾಗಿದ್ದು, ವಿಶಾಖಪಟ್ಟಣಂ ಒಂದರಲ್ಲೇ 16 ಮಂದಿ ಸಾವನ್ನಪ್ಪಿದ್ದಾರೆ. ಚಂಡಮಾರುತದ ದಾಳಿಗೆ ವಿಶಾಖಪಟ್ಟಣಂ ನಗರದಲ್ಲಿ ಭಾರೀ ಹಾನಿ ಉಂಟಾಗಿದ್ದು, ಗ್ರಾಮಾಂತರ ಪ್ರದೇಶಗಳಾದ ಶ್ರೀಕಾಕುಳಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ಕೃಷಿ ಭೂಮಿ ನಾಶವಾಗಿದೆ.
ಸಿನಿಮಾ ನಟರಿಂದ ಸಹಾಯ : ಹುಡ್‌ಹುಡ್‌ನಿಂದ ಹಾನಿಗೊಳಗಾದ ಪ್ರದೇಶಗಳ ಸಂತ್ರಸ್ತರಿಗೆ ಸಹಾಯ ಮಾಡಲು ತೆಲಗು ಚಿತ್ರರಂಗದವರು ಮುಂದೆ ಬಂದಿದ್ದಾರೆ. ಸೂಪರ್‌ಸ್ಟಾರ್ ರಾಮ್‌ಚರಣ್ ತೇಜ ಅವರು 10 ಲಕ್ಷ ರೂ., ಪವನ್ ಕಲ್ಯಾಣ್ 50 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.
You can help us and donate for relief to SBI a/c: 33913634404. IFSC Code: SBIN0002724, Branch: SBI Treasury Branch, Gowliguda, Hyderabad.
— N Chandrababu Naidu (@ncbn) October 13, 2014 












Click it and Unblock the Notifications