ಮೋದಿ, ರಾಹುಲ್, ಅಮಿತ್ ಷಾರನ್ನು ಇಸ್ಲಾಂಗೆ ಆಹ್ವಾನಿಸಿದ ಅಸಾದುದೀನ್ ಓವೈಸಿ

Posted By:
Subscribe to Oneindia Kannada

ಹೈದರಾಬಾದ್, ಡಿಸೆಂಬರ್ 02 : ವಾರದಿಂದ ಎಳೆದಾಡಿ ತೆಳುವಾಗಿದ್ದ ರಾಹುಲ್ ಗಾಂಧಿ ಧರ್ಮದ ವಿಷಯವನ್ನು ಎಐಎಂಐಎಂ ಪಕ್ಷದ ಸಂಸದ ಅಸಾದುದೀನ್ ಓವೈಸಿ ಈಗ ಮತ್ತೆ ಕೆಣಕಿದ್ದಾರೆ. ಆದರೆ ಅವರು ಯಾರ ಪರವೂ ವಹಿಸದೆ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷವನ್ನು ಕುಟುಕಿದ್ದಾರೆ.

ಸೋಮನಾಥ ದೇವಾಲಯಕ್ಕೆ ಹೋದಾಗ ರಾಹುಲ್ ಗಾಂಧಿ ತಮ್ಮ ಹೆಸರನ್ನು ಹಿಂದೂಯೇತರ ಎಂದು ನಮೂದಿಸಿದ್ದಾರೆ ಹಾಗಾಗಿ ಅವರು ಹಿಂದೂ ಅಲ್ಲ ಎಂದು ಬಿಜೆಪಿ ಬೊಬ್ಬೆಹೊಡೆದಿತ್ತು. ಅದಕ್ಕೆ ವಿರುದ್ಧವಾಗಿ ಕಾಂಗ್ರೆಸ್, ರಾಹುಲ್ ಗಾಂಧಿ ಅವರು ಹಿಂದೂ ಸಂಪ್ರದಾಯಗಳನ್ನು ಪಾಲಿಸುತ್ತಿರುವ ಚಿತ್ರ ಬಿಡುಗಡೆ ಮಾಡಿ ರಾಹುಲ್ ಅಪ್ಪಟ ಹಿಂದೂ ಎಂದಿತ್ತು. ಅಷ್ಟೆ ಅಲ್ಲದೆ ಮೋದಿ ಹಿಂದೂವೇ ಅಲ್ಲ ಎಂದೂ ಕೆಲವು ಕಾಂಗ್ರೆಸ್ ನಾಯಕರು ಹೇಳಿದ್ದರು.

ಈ ಧರ್ಮ ರಾಜಕಾರಣವನ್ನು ಕಟುವಾಗಿ ಟೀಕಿಸಿರುವ ಅಸಾದುದೀನ್ ಓವೈಸಿ, ನೀವೇನು ಹಿಂದೂ ಧರ್ಮ ಮುನ್ನೆಡೆಸುತ್ತಿದ್ದಿರೋ ಅಥವಾ ದೇಶವನ್ನು ಮುನ್ನಡೆಸುವ ಕಾರ್ಯ ಮಾಡುತ್ತಿದ್ದೀರೊ ಎಂದು ಪ್ರಶ್ನಿಸಿದ್ದಾರೆ.

MP Asaduddin owaisi welcomes Modi, Rahul Gandhi, Amith shah to Islam

'ನಾನು ಹಿಂದೂ, ನಾನು ಹಿಂದೂ ಒಬಿಸಿ, ನಾನು ಜೈನ, ಹೀಗೆಲ್ಲಾ ಕ್ಲಬ್ ಗಳನ್ನು ಮಾಡಿಕೊಂಡು ಬಿಟ್ಟಿದ್ದೀರಿ, ನಮ್ಮ ಕ್ಲಬ್ ಬೇರೆ ಕ್ಲಬ್ ಗಿಂತ ಶ್ರೇಷ್ಠ ಎಂದು ಬಡಿದಾಡುತ್ತಿದ್ದೀರಿ, ಆದರೆ ನಾನು ನನ್ನನ್ನು ನಾನು ಮುಸ್ಲಿಂ ಎಂದು ಕರೆದುಕೊಂಡರೆ ನಿಮಗೆ ಧರ್ಮಾಂಧನಂತೆ ನಾನು ಕಾಣುತ್ತೇನೆ' ಎಂದು ತಮ್ಮ ವಾದ ಮುಂದಿಟ್ಟಿದ್ದಾರೆ.

ನನ್ನ ಧರ್ಮ ದೊಡ್ಡದು, ನನ್ನ ಜಾತಿ ದೊಡ್ಡದು ಎಂದು ಬಡಿದಾಡಬೇಡಿ, ನನ್ನ ಕ್ಲಬ್ ಗೆ ಬಂದು ಬಿಡಿ ಇಲ್ಲಿ ಎಲ್ಲರೂ ಸಮಾನರು, ಸದಸ್ಯತ್ವ ಕೂಡ ಉಚಿತ ಎಂದು ಅವರು ಮೋದಿ, ರಾಹುಲ್ ಗಾಂಧಿ, ಅಮಿತ್ ಷಾ ಅವರುಗಳನ್ನು ಇಸ್ಲಾಂ ಧರ್ಮಕ್ಕೆ ಸ್ವಾಗತಿಸಿದ್ದಾರೆ.

ಅಮಿತ್ ಷಾ ಜೈನ ಧರ್ಮದವರು ಆದರೆ ಅವರು ರಾಜಕೀಯ ಲಾಭಕ್ಕಾಗಿ ತಮ್ಮನ್ನು ಹಿಂದೂ ಎಂದೇ ಕರೆದುಕೊಳ್ಳುತ್ತಾರೆ ಎಂದು ಇದೇ ವೇಳೆ ಅಮಿತ್ ಷಾ ಅವರನ್ನು ಟೀಕಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MP Asaduddin owaisi slaps Modi, Rahul Gandhi on their religion fight and ask them to covert to Islam. and also Asaduddin owaisi said Amith Shah is not hindu he is jain but he projecting him as a Hindu just because of political gain.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ