ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗಳದ ಸಿಟ್ಟಲ್ಲಿ ತಿಂಗಳ ಮಗುವನ್ನು ನೆಲಕ್ಕೆ ಅಪ್ಪಳಿಸಿದ 'ಮಹಾತಾಯಿ'

|
Google Oneindia Kannada News

ಹೈದರಾಬಾದ್, ಆಗಸ್ಟ್ 28: ಇಲ್ಲಿನ ಮೆಹ್ದಿಪಟ್ಣಂ ಜಂಕ್ಷನ್ ನಲ್ಲಿ ಸೋಮವಾರ ರಾತ್ರಿ ಕುಡಿದು ಜಗಳವಾಡುತ್ತಿದ್ದ ಗಂಡ- ಹೆಂಡತಿಯನ್ನು ನೋಡುತ್ತಿದ್ದ ಜನರು ಅಮಾನುಷ ಕೃತ್ಯವೊಂದಕ್ಕೆ ಸಾಕ್ಷಿಯಾಗಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಇಬ್ಬರೂ ಕುಡಿದಿದ್ದರು. ಜಗಳ ಆರಂಭಿಸಿದ ನಂತರ ಹೆಂಡತಿಯು ಒಂದು ತಿಂಗಳ ಮಗುವನ್ನು ನೆಲಕ್ಕೆ ಅಪ್ಪಳಿಸಿದ್ದಾಳೆ.

ಇವರಿಬ್ಬರ ಜಗಳವನ್ನು ನೋಡುತ್ತಾ ಕೆಲ ಕಾಲ ಸಂಚಾರ ದಟ್ಟಣೆ ಆಗಿತ್ತು. ಈ ಜಗಳದ ವಿಡಿಯೋ ಕೂಡ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. "ಈ ಮಗು ನನ್ನದಲ್ಲ. ವಿವಾಹೇತರ ಸಂಬಂಧದಿಂದ ಹುಟ್ಟಿದ್ದು" ಎಂದು ಆರೋಪಿಸಿದ ಪತಿಯನ್ನು ಸಮಾಧಾನ ಪಡಿಸಿ, ಆ ಮಗುವನ್ನು ಆತನ ಕೈಗೆ ನೀಡಲು ಯತ್ನಿಸಿದ್ದಾಳೆ.

ತಾಯಿಯ ರುಂಡ ಹೊತ್ತೊಯ್ತಿದ್ದ ಮಗನನ್ನು ಪೊಲೀಸರಿಗೆ ಒಪ್ಪಿಸಿದ ಹಳ್ಳಿಗರುತಾಯಿಯ ರುಂಡ ಹೊತ್ತೊಯ್ತಿದ್ದ ಮಗನನ್ನು ಪೊಲೀಸರಿಗೆ ಒಪ್ಪಿಸಿದ ಹಳ್ಳಿಗರು

ಆದರೆ, ಮಗುವನ್ನು ಎತ್ತಿಕೊಳ್ಳಲು ಪತಿ ಒಪ್ಪದಿದ್ದಾಗ ಮಹಿಳೆಯು ಒಂದು ತಿಂಗಳ ಮಗುವನ್ನು ನೆಲಕ್ಕೆ ಅಪ್ಪಳಿಸಿದ್ದಾಳೆ. ಆ ವೇಳೆ ಅಲ್ಲೇ ಇದ್ದ ಮಹಿಳೆಯ ತಾಯಿ ಹಾಗೂ ಪತಿ ಆಕೆಗೆ ಹೊಡೆದಿದ್ದಾರೆ.

Mother throws 1 month baby on ground during quarrel with husband

"ಗಂಡ-ಹೆಂಡತಿ ಇಬ್ಬರೂ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರು. ಆ ಮಗು ತನ್ನದಲ್ಲ ಎಂದು ಪತಿ ಆಕ್ರೋಶದಿಂದ ಕೂಗಾಡುತ್ತಿದ್ದ. ಅವರಿಬ್ಬರು ಮದ್ಯ ಸೇವಿಸಿದ್ದರು" ಎಂದು ಸಂಚಾರ ಇಲಾಖೆ ಸಬ್ ಇನ್ ಸ್ಪೆಕ್ಟರ್ ಆರ್.ಶೇಖರ್ ಹೇಳಿದ್ದಾರೆ.

ಆತ ಕಾರ್ಮಿಕ, ಆಕೆ ಗೃಹಿಣಿ. ಇಬ್ಬರಿಗೂ ಕೌನ್ಸೆಲಿಂಗ್ ಪಡೆಯಲು ತಿಳಿಸಲಾಗಿದೆ. ಆ ಮಗು ಕ್ಷೇಮವಾಗಿದೆ. ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಹುಮಾಯೂನ್ ನಗರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

English summary
Mother throws 1 month baby on ground during quarrel with husband in Mehdipatnam junction on Monday night. fortunately baby is safe. No case registered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X