ಮಗನ ನಶೆ ಹೋಗಲಾಡಿಸಲು ಮೆಣಸಿನ ಪುಡಿ ಎರಚಿದ ತಾಯಿ
ಹೈದರಾಬಾದ್ ಏಪ್ರಿಲ್ 6: ವೇಗವಾಗಿ ಹೆಚ್ಚುತ್ತಿರುವ ಮಾದಕ ವ್ಯಸನವು ದೇಶದ ಯುವ ಜನಸಂಖ್ಯೆಯನ್ನು ಅಷ್ಟೇ ವೇಗವಾಗಿ ಹಿಡಿದಿಟ್ಟುಕೊಳ್ಳುತ್ತಿದೆ. ಈಗ ಹದಿಹರೆಯದವರನ್ನೂ ಮಾದಕ ವ್ಯಸನ ಕಾಡುತ್ತಿದೆ. ಮಾದಕ ವ್ಯಸನಿಗಳು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಮಾದಕ ವ್ಯಸನಿಗಳ ಸಂಬಂಧಿಕರು ತಮ್ಮವರ ವ್ಯಸನದಿಂದ ಮುಕ್ತಿ ಹೊಂದಲು ವೈದ್ಯರಿಂದ ಎಲ್ಲ ರೀತಿಯ ಸಹಾಯವನ್ನು ಪಡೆಯುತ್ತಿದ್ದಾರೆ. ಪುನರ್ವಸತಿ ಕೇಂದ್ರಗಳಿಗೆ ವ್ಯಸನಿಗಳನ್ನು ಕಳೆಸುತ್ತಿದ್ದಾರೆ. ಆದರೆ ತೆಲಂಗಾಣದ ತಾಯಿಯೊಬ್ಬರು ತನ್ನ ಮಗನಿಂದ ಮಾದಕ ವ್ಯಸನವನ್ನು ಹೋಗಲಾಡಿಸಲು ಭಯಾನಕ ಕ್ರಮಕ್ಕೆ ಮುಂದಾಗಿರುವುದು ನೋಡುಗರನ್ನು ಬೆಚ್ಚಿ ಬೀಳಿಸಿದೆ. ಮಗನ ನಶೆಯನ್ನು ಹೋಗಲಾಡಿಸಲು ತಾಯೊಯೊಬ್ಬಳು ಮೆಣಸಿನ ಪುಡಿ ಎರಚಿದ ಭಯಾನಕ ಘಟನೆ ನಡೆದಿದೆ.
ಮಹಿಳೆ ಮೊದಲು ತನ್ನ 15 ವರ್ಷದ ಮಗನನ್ನು ವ್ಯಸನದಿಂದ ಮುಕ್ತಗೊಳಿಸಲು ಕಟ್ಟಿಹಾಕಿದ್ದಳು. ಆದರೆ ಮಗ ಮಾತು ಕೇಳಲಿಲ್ಲ. ತಪ್ಪಿಸಿಕೊಂಡು ಹೋಗಿ ಮದ್ಯ ಸೇವನೆ ಮಾಡುತ್ತಿದ್ದ. ಇದರಿಂದ ಬೇಸತ್ತ ತಾಯಿ ಅವನ ಮುಖಕ್ಕೆ ಕೆಂಪು ಮೆಣಸಿನ ಪುಡಿಯನ್ನು ಉಜ್ಜಿದ್ದಾಳೆ. ಈ ಘಟನೆಯ ವೀಡಿಯೋ ಕೂಡ ಹೊರಬಿದ್ದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವರದಿ ಪ್ರಕಾರ, ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ನಿವಾಸಿ ರಮಣ್ಣಮ್ಮ ಅವರು ದಿನಗೂಲಿ ಕೆಲಸ ಮಾಡುತ್ತಾರೆ. ಆಕೆಯ ಪತಿ ರಿಕ್ಷಾ ಓಡಿಸುತ್ತಾನೆ. ಇವರಿಬ್ಬರಿಗೂ 15 ವರ್ಷದ ಮಗನಿದ್ದಾನೆ. ವಿದ್ಯಾಭ್ಯಾಸ ಮಾಡುತ್ತಿರುವ ಈತ ದೇಶದ ಎಲ್ಲಾ ಮಕ್ಕಳಂತೆ ಕೊರೋನಾ ಅವಧಿಯಲ್ಲಿ ತನ್ನ ಅಧ್ಯಯನವನ್ನು ತಪ್ಪಿಸಿದ್ದನು.

ತನ್ನ ಓದು ಬಿಟ್ಟ ನಂತರ ಈ ಹುಡುಗ ಅಲ್ಲಿ ಇಲ್ಲಿ ತಿರುಗಾಡಲು ಪ್ರಾರಂಭಿಸಿದನು ಮತ್ತು ಈ ಸಮಯದಲ್ಲಿ ಅವನು ಮಾದಕ ವ್ಯಸನಿಯಾಗಿದ್ದಾನೆ. ತಾಯಿ ಹಲವು ಬಾರಿ ಎಚ್ಚರಿಸಿದರೂ ಚಟ ಬಿಡಲಿಲ್ಲ. ಆಗಾಗ ಕುಡಿದು ಮನೆಯಿಂದ ನಾಪತ್ತೆಯಾಗುತ್ತಿದ್ದ. ಈ ನಡುವೆ ಮನೆಗೆ ಸರಿಯಾಗಿ ಬರುತ್ತಿರಲಿಲ್ಲ.
ಈ ಬಾರಿ ಮಿತಿ ಮೀರಿದ್ದು ಮಗನನ್ನು ದಾರಿಗೆ ತರಲು ತಾಯಿ ಯೋಚಿಸಿದ್ದಳು. ಈ ವಿಚಾರ ಗೊತ್ತಾಗಿ ಮಗ 10 ದಿನ ಮನೆಯಿಂದ ನಾಪತ್ತೆಯಾಗಿದ್ದನು. ವಾಪಸಾದಾಗ ಕುಡಿದ ಅಮಲಿನಲ್ಲಿದ್ದನು. ಮಗ ನಶೆಯಲ್ಲಿದ್ದುದನ್ನು ನೋಡಿ ತಾಯಿಯ ಕೋಪ ನೆತ್ತಿಗೇರಿದೆ. ಹೀಗಾಗಿ ಆತನನ್ನು ಕಂಬಕ್ಕೆ ಕಟ್ಟಿ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

15 ವರ್ಷದ ಮಗ ಗಾಂಜಾ ಚಟಕ್ಕೆ ಬಲಿಯಾಗುತ್ತಿರುವುದನ್ನು ಗಮನಿಸಿದ ತಾಯಿ ಅದಕ್ಕೊಂದು ವಿನೂತನ ಪರಿಹಾರ ಕಂಡುಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ ಎಂದು ಬರೆದುಕೊಂಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಾಯಿ ಮಗ ಗಾಂಜಾ ಬಿಡುವುದಾಗಿ ಭರವಸೆ ನೀಡುವವರೆಗೂ ಆಕೆ ಮೆಣಸಿನಕಾಯಿಯನ್ನು ಮುಖಕ್ಕೆ ಉಜ್ಜಿದ್ದಾಳೆ.

ಘಟನೆಯ ವಿಡಿಯೋ ವೈರಲ್ ಆದ ಬಳಿಕ ತಾಯಿ ವಿರುದ್ಧ ಪ್ರಕರಣ ದಾಖಲಾಗಿದೆ. ವರದಿಯ ಪ್ರಕಾರ, ನೆರೆಹೊರೆಯವರು ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಮತ್ತು ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ಹೊರಬಿದ್ದ ಬಳಿಕ ಪೊಲೀಸರು ತಾಯಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಕ್ಷಿಗಳ ಹೇಳಿಕೆ ಪ್ರಕಾರ, ಪದೇ ಪದೇ ನಿರಾಕರಿಸಿದರೂ ಅವನು (ಮಗ) ಡ್ರಗ್ಸ್ ತ್ಯಜಿಸದ ಕಾರಣ ತಾನು ಇಂತಹ ಕಠಿಣ ಕ್ರಮಕ್ಕೆ ಮುಂದಾಗಬೇಕಾಯಿತು ಎಂದು ರಮಣ್ಣಮ್ಮ ಹೇಳಿದ್ದಾರೆ.












Click it and Unblock the Notifications