ತೆಲಂಗಾಣದಲ್ಲಿ ವರ್ಕೌಟ್ ಆಗದ ತಂತ್ರಗಾರಿಕೆ: ಡಿಕೆಶಿಗೆ ಭಾರೀ ಮುಖಭಂಗ
Recommended Video

ಹೈದರಾಬಾದ್, ಡಿ 11: ಅಭೂತಪೂರ್ವ ಜಯ ದಾಖಲಿಸಿದ ಕೆ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ ಎಸ್ ಪಕ್ಷದ ಹೊಸ ಸರಕಾರ ನಾಳೆಯೇ (ಡಿ 12) ಅಧಿಕಾರಕ್ಕೆ ಬರಲಿದೆ. ಬುಧವಾರ, ತೆಲಂಗಾಣದ ನಿಯೋಜಿತ ಸಿಎಂ ಕೆಸಿಆರ್ ಬಹುತೇಕ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕಾಂಗ್ರೆಸ್ - ಟಿಡಿಪಿ ಮೈತ್ರಿಕೂಟ, ಟಿಆರ್ ಎಸ್ ಪಕ್ಷಕ್ಕೆ ತೀವ್ರ ಪೈಪೋಟಿ ನೀಡಬಹುದು ಎನ್ನುವ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು, ಒಂದು ಕಡೆ ರಾಹುಲ್ ಗಾಂಧಿ, ಇನ್ನೊಂದು ಕಡೆ ಚಂದ್ರಬಾಬು ನಾಯ್ಡು ಜೊತೆಗೆ, ಕರ್ನಾಟಕದ ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಕೂಡಾ ಮುಖಭಂಗ ಅನುಭವಿಸಿದ್ದಾರೆ.
ಕಳೆದ ಕರ್ನಾಟಕ ಚುನಾವಣೆಯ ನಂತರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಬರುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಸಚಿವ ಡಿ ಕೆ ಶಿವಕುಮಾರ್ ಅವರನ್ನು ತೆಲಂಗಾಣ ಚುನಾವಣೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಹೈಕಮಾಂಡ್ ಆದೇಶವನ್ನು ಡಿಕೆಶಿ ಶಿರಸಾ ಪಾಲಿಸಿದ್ದರು.
ಆದರೆ, ಕರ್ನಾಟಕದಲ್ಲಿ ನಡೆಸುವ ರಾಜಕೀಯವೇ ಬೇರೆ, ಪಕ್ಕದ ತೆಲಂಗಾಣದಲ್ಲಿ ನಡೆಸುವ ರಾಜಕೀಯವೇ ಬೇರೆ ಎನ್ನುವುದನ್ನು ಅಲ್ಲಿನ ಮತದಾರ ಸ್ಪಷ್ಟವಾಗಿ ಸಾರಿದ್ದಾನೆ. ತೆಲಂಗಾಣದ ಹೀನಾಯ ಸೋಲಿನಿಂದ, ಹೈಕಮಾಂಡ್ ಮಟ್ಟದಲ್ಲಿ ಡಿಕೆಶಿ ಪ್ರಭಾವ ಕಮ್ಮಿಯಾಗಬಹುದೇ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗದು.
ಅಭ್ಯರ್ಥಿಗಳ ಘೋಷಣೆಯ ನಂತರ, ಎಲ್ಲೂ ಅಸಮಾಧಾನದ ಹೊಗೆ ಏಳಬಾರದೆಂದು, ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೂ, ಬಂಡಾಯವೆದ್ದಾಗ, ಶಮನಗೊಳಿಸಲು ಪಕ್ಷದ ವರಿಷ್ಠರು ಡಿಕೆಶಿಗೆ ಇದರ ಜವಾಬ್ದಾರಿಯನ್ನು ನೀಡಿದ್ದರು.

ತೆಲಂಗಾಣ ಚುನಾವಣೆ
ಅಹಮದ್ ಪಟೇಲ್ ಅವರನ್ನು ರಾಜ್ಯಸಭೆಗೆ ಕಳುಹಿಸಿದ್ದು, ಎಲ್ಲೂ ಆಪರೇಶನ್ ಕಮಲ ನಡೆಯದಂತೆ ನೋಡಿಕೊಂಡಿದ್ದು, ಇದಾದ ನಂತರ, ಮೊನ್ನೆಮೊನ್ನೆ ನಡೆದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ, ಸೈ ಎನಿಸಿಕೊಂಡಿದ್ದ, ಡಿಕೆ ಶಿವಕುಮಾರ್ ಅವರನ್ನು ತೆಲಂಗಾಣ ಚುನಾವಣೆಯಲ್ಲಿ ಪಕ್ಷದ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಜೊತೆಗೆ, ಸಿದ್ದರಾಮಯ್ಯನವರಿಗೂ ಪಕ್ಷದ ಪರವಾಗಿ ಪ್ರಚಾರ ನಡೆಸಲು ಸೂಚಿಸಲಾಗಿತ್ತು.

ತೆಲಂಗಾಣ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ಸಂಘಟನಾ ಚುತುರ ಎನ್ನುವುದನ್ನು ಬಹಳಷ್ಟು ಬಾರಿ ಸಾಬೀತು ಮಾಡಿದ್ದ ಡಿ ಕೆ ಶಿವಕುಮಾರ್ ಅವರನ್ನು, ತೆಲಂಗಾಣ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ನಂತರ ಉಂಟಾದ ಬಂಡಾಯ ಶಮನ ಮಾಡಲು ತುರ್ತಾಗಿ ಆಖಾಡಕ್ಕಿಳಿಯುವಂತೆ ಸೂಚಿಸಲಾಗಿತ್ತು. ಹೈಕಮಾಂಡ್ ಸೂಚನೆಯನ್ನು ಡಿಕೆಶಿ ಪಾಲಿಸಿದ್ದರೂ, ಪಕ್ಷ ಚುನಾವಣೆಯಲ್ಲಿ ಊಹಿಸಲೂ ಅಸಾಧ್ಯವಾದ ಸೋಲು ಅನುಭವಿಸಿದೆ. ಟಿಕೆಟ್ ಅಸಮಾಧಾನವೇ ಪಕ್ಷದ ಸೋಲಿಗೆ ಒಂದು ಕಾರಣ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಬಂಡಾಯಗಾರರ ಮನವೊಲಿಕೆ
ಸಾಮಾನ್ಯವಾಗಿ ಕೋರ್ ಕಮಿಟಿ, ಪ್ರಚಾರ ಸಮಿತಿ.. ಹೀಗೆ ಸಮಿತಿ ರಚಿಸುವ ಕಾಂಗ್ರೆಸ್, ಬಂಡಾಯಗಾರರ ಮನವೊಲಿಸಲು ಒಂದು ಸಮಿತಿಯನ್ನೇ ರಚಿಸಿತ್ತು. ಅದರಲ್ಲಿ ಡಿಕೆಶಿ ಕೂಡಾ ಒಬ್ಬರಾಗಿದ್ದರು. ಬಂಡಾಯ ನಾಯಕರ ಮನವೊಲಿಸುವಲ್ಲಿ ಆ ಕ್ಷಣದಲ್ಲಿ ಡಿಕೆಶಿ ಯಶಸ್ವಿಯಾಗಿದ್ದರೂ ಕೂಡಾ. ಎರಡು ದಿನಗಳಿಂದ ತೆಲಂಗಾಣದಲ್ಲಿ ಬಿಡುವಿಲ್ಲದ ಓಡಾಟ ನಡೆಸಿದ್ದ ಡಿಕೆಶಿ, ಅಲ್ಲಿನ ಬಂಡಾಯ ನಾಯಕರು ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡಿಸುವಲ್ಲಿ ಯಶಸ್ವಿಯಾಗಿದ್ದರು.

ಡಿಕೆ ಶಿವಕುಮಾರ್ ಭಾಗವಹಿಸಿದ್ದರು
ಎಐಸಿಸಿ ವರಿಷ್ಠರ ಚುನಾವಣಾ ಪ್ರಚಾರ ಸಭೆಯಲ್ಲೂ ಡಿಕೆ ಶಿವಕುಮಾರ್ ಭಾಗವಹಿಸಿದ್ದರು. ಪ್ರಮುಖವಾಗಿ, ತೆಲಂಗಾಣ-ಕರ್ನಾಟಕದ ಗಡಿ ಭಾಗದಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಲಾಗಿತ್ತು. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಟ್ಟಿಗೆ ಬಹಿರಂಗ ಪ್ರಚಾರವನ್ನೂ ಡಿಕೆಶಿ ಮಾಡಿದ್ದರು. ಆದರೆ, ಇದ್ಯಾವುದೂ ವರ್ಕೌಟ್ ಆಗಲಿಲ್ಲ. ಖುದ್ದು, ತೆಲಂಗಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷ ರೇವಂತ್ ರೆಡ್ಡಿ ಸೋಲು ಅನುಭವಿಸಿದ್ದಾರೆ. ಚುನಾವಣೆಯಲ್ಲಿ ದಯನೀಯವಾಗಿ ಸೋತಿರುವ ಕಾಂಗ್ರೆಸ್, ಈಗ ಅಧಿಕೃತವಾಗಿ ಇವಿಎಂ ಮೇಲೆ ಗೂಬೆ ಕೂರಿಸಿದೆ.

ಕಳೆದ ಚುನಾವಣೆಯಲ್ಲಿ ಪಡೆದಷ್ಟು ಸ್ಥಾನವೂ ಕಾಂಗ್ರೆಸ್ಸಿಗೆ ದಕ್ಕಲಿಲ್ಲ
119 ಸ್ಥಾನಗಳ ತೆಲಂಗಾಣ ಅಸೆಂಬ್ಲಿಯಲ್ಲಿ ಟಿಆರ್ ಎಸ್ 87, ಕಾಂಗ್ರೆಸ್ ಮೈತ್ರಿಕೂಟ 27, ಬಿಜೆಪಿ 2, ಎಂಐಎಂ ಮತ್ತು ಇತರರು 10ಕ್ಷೇತ್ರದಲ್ಲಿ ಗೆಲುವು/ಮುನ್ನಡೆ ಸಾಧಿಸಿದ್ದಾರೆ. ಆ ಮೂಲಕ, ಕಳೆದ ಚುನಾವಣೆಯಲ್ಲಿ ಪಡೆದಷ್ಟು ಸ್ಥಾನವೂ ಕಾಂಗ್ರೆಸ್ಸಿಗೆ ದಕ್ಕಲಿಲ್ಲ. ಒಟ್ಟಿನಲ್ಲಿ, ಡಿಕೆ ಶಿವಕುಮಾರ್ ಹೇಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರೋ, ಅದೇ ರೀತಿಯ ರಾಜಕೀಯ ದಾಳ ತೆಲಂಗಾಣದಲ್ಲಿ ಉರುಳಿಸಲು ವಿಫಲರಾಗಿದ್ದಾರೆ.
-
ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ











Click it and Unblock the Notifications