ಮದುವೆಯನ್ನೇ ದಂಧೆಯಾಗಿಸಿಕೊಂಡು ವಂಚಿಸುತ್ತಿದ್ದ ಮುಸ್ಲಿಂ ಮೌಲ್ವಿಗಳ ಬಂಧನ

Posted By:
Subscribe to Oneindia Kannada

ಹೈದರಾಬಾದ್, ಸೆಪ್ಟೆಂಬರ್ 20 : ಮದುವೆಯನ್ನೇ ಒಂದು ದಂಧೆ ಮಾಡಿಕೊಂಡು ವಂಚಿಸುತ್ತಿದ್ದ 8 ಶೇಖ್ ಗಳನ್ನು ಹಾಗೂ ನಾಲ್ವರು ಮುಸ್ಲಿಂ ಮೌಲ್ವಿಗಳನ್ನು ಹೈದರಾಬಾದ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬಂಧಿತ ಶೇಖ್ ಗಳು ಸೌದಿ ಅರೇಬಿಯಾ, ಒಮನ್ ಹಾಗೂ ಖತಾರ್ ಮೂಲದವರಾಗಿದ್ದು, ಮದುವೆ ಹೆಸರಿನಲ್ಲಿ ಅಮಾಯಕ ಯುವತಿಯರನ್ನು ವಂಚಿಸುತ್ತಿದ್ದರು ಎನ್ನುವ ಆರೋಪದ ಮೇಲೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Marriage racket busted in Hyderabad, 8 sheikhs arrested

ಸೌದಿ ಅರೇಬಿಯಾದ ಶೇಖ್ ಗಳು ಗುತ್ತಿಗೆ ಆಧಾರದ ಮೇಲೆ ಇಬ್ಬರು ಅಪ್ರಾಪ್ತ ಬಾಲಕಿಯರಾದ ಫಲಖ್ನುಮ್ ಮತ್ತು ಚಂದ್ರಯಾನ್ ಗುಟ್ಚಾರನ್ನು ಮದುವೆಯಾಗಿದ್ದಾರೆ ಪೊಲೀಸ್ ವರದಿಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಲಾಡ್ಜ್ ಮಾಲೀಕರನ್ನು ಹಾಗೂ ಐವರು ಮದುವೆ ಬ್ರೋಕರ್ ಗಳನ್ನು ಸಹ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Hyderabad police on Wednesday arrested eight sheikhs and four Muslim clerics for allegedly being part of a marriage racket. The arrested sheikhs hail from Saudi Arabia, Oman and Qatar.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ