ತೆಲಂಗಾಣಕ್ಕೆ ರಾಹುಲ್ ಭೇಟಿ: ಡ್ರಗ್ ಪರೀಕ್ಷೆಗೆ ಸವಾಲು ಹಾಕುವ ಬ್ಯಾನರ್‌ನಿಂದ ಸ್ವಾಗತ
ತೆಲಂಗಾಣ ಮೇ 6: ಕಠ್ಮಂಡು ನೈಟ್‌ಕ್ಲಬ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಣಿಸಿಕೊಂಡ ಪ್ರಕರಣ ಸದ್ಯ ತೆಲಂಗಾಣದಲ್ಲಿ ಸವಾಲು ಸೃಷ್ಟಿ ಮಾಡಿದೆ. ತೆಲಂಗಾಣಕ್ಕೆ ಇಂದು ಭೇಟಿ ನೀಡಲಿರುವ ರಾಹುಲ್ ಗಾಂಧಿಗೆ ಸವಾಲು ಹಾಕಲಾಗಿದೆ. ರಾಹುಲ್ ಗಾಂಧಿಗೆ ಡ್ರಗ್ಸ್ ಪರೀಕ್ಷೆಯ ಸವಾಲು ಹಾಕಿದ ಬ್ಯಾನರ್‌ಗಳು ಹೈದರಾಬಾದ್‌ನೆಲ್ಲೆಡೆ ಸ್ವಾಗತಿಸುತ್ತಿವೆ.
ರಾಹುಲ್ ಗಾಂಧಿಯವರ ತೆಲಂಗಾಣ ಭೇಟಿಗೂ ಮುನ್ನ, ಹೈದರಾಬಾದ್‌ನಲ್ಲಿ ಡ್ರಗ್ ಪರೀಕ್ಷೆಗೆ ಸವಾಲು ಹಾಕುವ ಬ್ಯಾನರ್‌ಗಳು ಕಾಣಿಸಿಕೊಂಡಿವೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರ 'ಶ್ವೇತ ಸವಾಲು' ಸ್ವೀಕರಿಸಲು ಸಿದ್ಧರಿದ್ದೀರಾ ಎಂಬ ಬ್ಯಾನರ್‌ಗಳು ಹೈದರಾಬಾದ್‌ನ ಸುತ್ತಲೂ ಕಂಡುಬಂದಿವೆ. ಕಠ್ಮಂಡುವಿನ ನೈಟ್‌ಕ್ಲಬ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಡಿಯೋ ವೈರಲ್ ಆದ ಬಳಿಕ ಈ ಸವಾಲು ಹುಟ್ಟಿಕೊಂಡಿದೆ.
ಮೇ 6 ಮತ್ತು 7 ರಂದು ಕಾಂಗ್ರೆಸ್ ನಾಯಕ ರಾಹುಲ್ ರಾಹುಲ್ ಗಾಂಧಿ ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ. ಕಾಂಗ್ರೆಸ್ ಸಂಸದ ಮತ್ತು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ರೇವಂತ್ ರೆಡ್ಡಿ ಅವರು ಸೆಪ್ಟೆಂಬರ್ 2021 ರಲ್ಲಿ ರಾಜ್ಯದಲ್ಲಿ ಡ್ರಗ್ಸ್ ಹಾವಳಿಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳಿಗೆ ವೈಟ್ ಚಾಲೆಂಜ್ ಅನ್ನು ಪ್ರಾರಂಭಿಸಿದರು. ಕೆಟಿ ರಾಮರಾವ್ ಅವರು ರಾಜಕಾರಣಿಗಳಿಗೆ ಮುಂದಿಟ್ಟಿರುವ ಡ್ರಗ್ ಟೆಸ್ಟ್ ಸ್ವೀಕರಿಸುವಂತೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ರಾಜಕೀಯ ನಾಯಕರನ್ನು ಕೇಳುತ್ತಿದ್ದಾರೆ. ಸದ್ಯ ತೆಲಂಗಾಣಕ್ಕೆ ಭೇಟಿ ನೀಡುತ್ತಿರುವ ರಾಹುಲ್ ಗಾಂಧಿಯವರಿಗೆ ಈ ಸವಾಲನ್ನು ಸ್ವೀಕರಿಸುವಂತೆ ಕೇಳಲಾಗಿದೆ.

ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಡಳಿತ ಭವನದ ಹೊರಗೆ ಪ್ರತಿಭಟನೆ ನಡೆಸಿ ಬಂಧಿತರಾಗಿರುವ ಚಂಚಲಗುಡ ಜೈಲಿನಲ್ಲಿರುವ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘದ (ಎನ್‌ಎಸ್‌ಯುಐ) ಸದಸ್ಯರನ್ನು ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆ ಎಂದು ರೇವಂತ್ ರೆಡ್ಡಿ ಸೋಮವಾರ ತಿಳಿಸಿದ್ದಾರೆ. ಮೇ 7 ರಂದು ಕ್ಯಾಂಪಸ್‌ಗೆ ರಾಹುಲ್ ಗಾಂಧಿ ಅವರ ಭೇಟಿಗೆ ಅನುಮತಿ ಕೋರಿ ಎನ್‌ಎಸ್‌ಯುಐ ಸದಸ್ಯರು ವಿಶ್ವವಿದ್ಯಾಲಯದ ಹೊರಗೆ ಪ್ರತಿಭಟನೆ ನಡೆಸಿದರು. ನಂತರ ಪೊಲೀಸರು ಅವರನ್ನು ಬಂಧಿಸಿ 'ಸಾರ್ವಜನಿಕ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ' ಪ್ರಕರಣವನ್ನು ದಾಖಲಿಸಿದ್ದಾರೆ. ಭಾನುವಾರ ಪ್ರತಿಭಟನೆ ನಡೆಸುತ್ತಿದ್ದ 18 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ರಮೇಶ್ ನಾಯ್ಕ್ ತಿಳಿಸಿದ್ದಾರೆ.

"ಆಡಳಿತದ ಭವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ 18 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ನಾವು ಪ್ರತಿಭಟನಾಕಾರರನ್ನು ತಡೆಯಲು ಪ್ರಯತ್ನಿಸಿದಾಗ, ಅವರು ಮಹಿಳಾ ಕಾನ್‌ಸ್ಟೆಬಲ್‌ಗಳು ಸೇರಿದಂತೆ ನಮ್ಮ ಸಿಬ್ಬಂದಿಯನ್ನು ತಳ್ಳಿದರು. ಪ್ರತಿಭಟನಾಕಾರರು ಕಿಟಕಿಯ ಮೇಲಿನ ಗಾಜುಗಳನ್ನು ಒಡೆದು ಕಟ್ಟಡದ ಒಳಗೆ ಹೋದರು. ಪ್ರಕರಣ ಸಾರ್ವಜನಿಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ'' ಎಂದು ಸರ್ಕಲ್ ಇನ್ಸ್‌ಪೆಕ್ಟರ್ ರಮೇಶ್ ನಾಯ್ಕ್ ತಿಳಿಸಿದ್ದಾರೆ.












Click it and Unblock the Notifications