ಚಿತ್ರಗಳು : ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲರು
ಹೈದರಾಬಾದ್, ಜ.29 : ಕರ್ನಾಟಕದ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಗುರುವಾರ ಏಳು ಬೆಟ್ಟದ ಒಡೆಯನನ್ನು ದರ್ಶನಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರು ತಿರುಪತಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
ಗುಜರಾತ್ ಮೂಲದ ವಜುಭಾಯಿ ವಾಲಾ ಅವರು ಕರ್ನಾಟಕದ 18ನೇ ರಾಜ್ಯಪಾಲರಾಗಿ ಸೆ.1ರಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲರಾದ ಬಳಿಕ ಮೊದಲ ಬಾರಿಗೆ ಕುಟುಂಬದವರೊಡನೆ ವಜುಭಾಯಿ ವಾಲಾ ಗುರುವಾರ ತಿರುಪತಿಗೆ ಭೇಟಿ ನೀಡಿದ್ದರು.[ಚಿತ್ರಗಳಲ್ಲಿ: ತಿಮ್ಮಪ್ಪನ ಹಳೆ ಹರಕೆ ತೀರಿಸಿಕೊಂಡ ಸಿದ್ದರಾಮಯ್ಯ]
ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ಅಧಿಕಾರಿಗಳು ಮತ್ತು ಅರ್ಚಕರು ರಾಜ್ಯಪಾಲರನ್ನು ಸ್ವಾಗತಿಸಿದರು. ಪೂಜೆಯ ನಂತರ ರಂಗಾನಾಯಕುಲ ಮಂಟಪದಲ್ಲಿ ಶ್ರೀವಾರಿ ವಸ್ತ್ರವನ್ನು ನೀಡಿ ರಾಜ್ಯಪಾಲರನ್ನು ಗೌರವಿಸಲಾಯಿತು. ವೆಂಕಟೇಶ್ವರ ಸ್ವಾಮಿಯ ಫೋಟೋ, ಪ್ರಸಾದ, ಕ್ಯಾಲೆಂಡರ್‌ಅನ್ನು ರಾಜ್ಯಪಾಲರಿಗೆ ದೇವಾಲಯದ ವತಿಯಿಂದ ನೀಡಲಾಯಿತು. ತಿರುಪತಿ ಭೇಟಿಯ ಚಿತ್ರಗಳು ಇಲ್ಲಿವೆ. [ಸಂಕಷ್ಟ ನಿವಾರಣೆಗಾಗಿ ತಿಮ್ಮಪ್ಪನಿಗೆ ಡಿವಿಎಸ್ ಮೊರೆ]

ತಿರುಪತಿಗೆ ಭೇಟಿ ನೀಡಿದ ರಾಜ್ಯಪಾಲರು
ಕರ್ನಾಟಕದ ರಾಜ್ಯಪಾಲರಾದ ವಜುಭಾಯಿ ವಾಲಾ ಕುಟುಂಬದವರೊಂದಿಗೆ ಗುರುವಾರ ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಸಿಎಂ ನಂತರ ರಾಜ್ಯಪಾಲರ ಭೇಟಿ
ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಗುರುವಾರ ರಾಜ್ಯಪಾಲ ವಜುಭಾಯಿ ವಾಲಾ ಭೇಟಿ ನೀಡಿ ಏಳು ಬೆಟ್ಟದ ಒಡೆಯನ ದರ್ಶನ ಪಡೆದರು.

ಅರ್ಚಕರಿಂದ ರಾಜ್ಯಪಾಲರಿಗೆ ಸ್ವಾಗತ
ಕುಟುಂಬದೊಂದಿಗೆ ತಿರುಪತಿಗೆ ಭೇಟಿ ನೀಡಿದ್ದ ರಾಜ್ಯಪಾಲರನ್ನು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ಅಧಿಕಾರಿಗಳು ಮತ್ತು ಅರ್ಚರು ಸ್ವಾಗತಿಸಿದರು.

ರಾಜ್ಯಪಾಲರಾದ ಬಳಿಕ ಮೊದ ಭೇಟಿ
ಗುಜರಾತ್ ಮೂಲದ ವಜುಭಾಯಿ ವಾಲಾ ಅವರು ಕರ್ನಾಟಕದ 18ನೇ ರಾಜ್ಯಪಾಲರಾಗಿ ಸೆ.1ರಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲರಾದ ಬಳಿಕ ಮೊದಲ ಬಾರಿಗೆ ವಜುಭಾಯಿ ವಾಲಾ ಅವರು ತಿರುಪತಿಗೆ ಭೇಟಿ ನೀಡಿದ್ದರು.

ಶ್ರೀವಾರಿ ವಸ್ತ್ರವನ್ನು ನೀಡಿ ಗೌರವ
ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ಅಧಿಕಾರಿಗಳು ಮತ್ತು ಅರ್ಚರು ರಾಜ್ಯಪಾಲರಿಗೆ ರಂಗಾನಾಯಕುಲ ಮಂಟಪದಲ್ಲಿ ಶ್ರೀವಾರಿ ವಸ್ತ್ರವನ್ನು ನೀಡಿ ಗೌರವಿಸಿದರು.

ಅರ್ಚಕರಿಂದ ಪ್ರಸಾದ ವಿತರಣೆ
ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ಅಧಿಕಾರಿಗಳು ವೆಂಕಟೇಶ್ವರ ಸ್ವಾಮಿಯ ಫೋಟೋ, ಕ್ಯಾಲೆಂಡರ್ ಮತ್ತು ಪ್ರಸಾದವನ್ನು ರಾಜ್ಯಪಾಲರಿಗೆ ನೀಡಿದರು.












Click it and Unblock the Notifications