ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ತಮ್ಮ ಪವನ್ ಮೀಟ್ ಮಾಡೋಕೆ ಬಂದಿದ್ದೆ ಬ್ರದರ್: ಎಚ್ಡಿಕೆ

By Mahesh
|
Google Oneindia Kannada News

ಹೈದರಾಬಾದ್, ಆಗಸ್ಟ್ 20: ಜಾತ್ಯಾತೀತ ಜನತಾ ದಳ(ಜೆಡಿಎಸ್) ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಜನಸೇನಾ ಪಕ್ಷದ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ರನ್ನು ಶನಿವಾರ ಬೆಳಗ್ಗೆ ಭೇಟಿ ಮಾಡಿದ್ದಾರೆ. 'ಪವನ್ ಕಲ್ಯಾಣ್ ನನ್ನ ಅಣ್ತಮ್ಮ ಇದ್ದಂಗೆ, ನನ್ನ ಮಗನ ಫಿಲಂ ಬಗ್ಗೆ ಮಾತಾಡೋಕೆ ಬಂದಿದ್ದೇನೆ, ಪಾಲಿಟಿಕ್ಸ್ ಅಲ್ಲ ಬ್ರದರ್ ಎಂದು ಎಚ್ಡಿಕೆ ಹೇಳಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಎಲ್ಲ ಪಕ್ಷಗಳೂ ರಣತಂತ್ರ ರೂಪಿಸುತ್ತಿವೆ. ಮತದಾರನ ಮನ ಗೆದ್ದು, ಅಧಿಕಾರದ ಗದ್ದುಗೆ ಹಿಡಿಯಲು ವಿವಿಧ ಕಸರತ್ತು ಆರಂಭಿಸಿವೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆದಿರುವ ಜೆಡಿಎಸ್ ಪಕ್ಷ ಕೂಡ ತಂತ್ರ ರೂಪಿಸುವಲ್ಲಿ ಹಿಂದೆ ಬಿದ್ದಿಲ್ಲ. [ಪವರ್ ಸ್ಟಾರ್ ಗೆ ಮೋದಿಯಿಂದ ಭಾರಿ 'ಗಿಫ್ಟ್'?]

ಟಾಲಿವುಡ್​ನ ಪವರ್ ​ಸ್ಟಾರ್ ಪವನ್​ಕಲ್ಯಾಣ್ ಅವರ ನೆರವು ಕೋರಿ, ಕರ್ನಾಟಕ-ಆಂಧ್ರದ ಗಡಿಭಾಗದಲ್ಲಿ ಜೆಡಿಎಸ್ ಹವಾ ಎಬ್ಬಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಶಾಸಕ ಸಿಆರ್ ಮನೋಹರ್ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.[ಕೋಲಾರ: ಕಾಂಗ್ರೆಸ್ ವಿರುದ್ಧ ಗುಡುಗಿದ ಪವನ್ ಕಲ್ಯಾಣ್]

ಭೇಟಿ ಸಂದರ್ಭದಲ್ಲಿ ನಡೆದಿದ್ದೇನು?: ಹೈದರಾಬಾದಿನ ಪ್ರಶಾಂತ್ ನಗರ ನಿವಾಸದಲ್ಲಿರುವ ಪವನ್​ಕಲ್ಯಾಣ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಎಂಎಲ್ಸಿ ನಿರ್ಮಾಪಕ ಸಿಆರ್ ಮನೋಹರ್ ಅವರು ಭೇಟಿ ಮಾಡಿದ್ದಾರೆ. [ಪವರ್ ಸ್ಟಾರ್ ಪಕ್ಷದ ಹೆಸರು ಜನ ಸೇನಾ]

ಈ ಸಂದರ್ಭದಲ್ಲಿ ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿದ್ದ ಪವನ್ ಅವರು ತಮ್ಮ ಸ್ಮಾರ್ಟ್ ಫೋನಿನಲ್ಲಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರ ಮುಂಬರುವ ಚಿತ್ರ 'ಜಾಗ್ವಾರ್' ದ ಟೀಸರ್ ನೋಡಿ ಶುಭ ಹಾರೈಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ್ದೇನು?

ಸುದ್ದಿಗಾರರೊಂದಿಗೆ ಮಾತನಾಡಿದ್ದೇನು?

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ಬರು ನಾಯಕರು, ಇದೊಂದು ಖಾಸಗಿ ಭೇಟಿ, ಕರ್ನಾಟಕ-ಆಂಧ್ರಪ್ರದೇಶ, ತೆಲಂಗಾಣ ಎಲ್ಲವೂ ಅಣ್ಣ -ತಮ್ಮಂದಿರಂತೆ. ನನ್ನ ಮಗನನ್ನು ಸಿನಿಮಾರಂಗದಲ್ಲಿ ತಮ್ಮನಂತೆ ಪ್ರೋತ್ಸಾಹಿಸುವಂತೆ 'ತಮ್ಮುಡು' ಪವನ್ ಕಲ್ಯಾಣ್ ಗೆ ಕೋರಿದ್ದೇನೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದರು.

ನಿರ್ಮಾಪಕ ಸಿಆರ್ ಮನೋಹರ್ ಸಾಥ್

ನಿರ್ಮಾಪಕ ಸಿಆರ್ ಮನೋಹರ್ ಸಾಥ್

ತೆಲುಗಿನಲ್ಲಿ ಪವನ್​ಕಲ್ಯಾಣ್ ಅವರ ಚಿತ್ರ ನಿರ್ವಿುಸಲು ಮುಂದಾಗುತ್ತಿರುವ ಮನೋಹರ್, ಚಿತ್ರದ ಜತೆಗೆ ಪ್ರಚಾರದ ಕುರಿತು ಈ ಮೊದಲು ಮಾತುಕತೆ ಮಾಡಿದ್ದರು. ಮಾತ್ರವಲ್ಲ ಈ ಸಂಬಂಧ ದೂರವಾಣಿ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡ ಪವನ್​ಕಲ್ಯಾಣ್ ಜತೆ ಮಾತನಾಡಿ, ಈ ಭೇಟಿ ನಿಗದಿ ಪಡಿಸಿದ್ದರು.

ಪವನ್ ಗೆ ರಾಜಕೀಯ ಹೊಸದಲ್ಲ

ಪವನ್ ಗೆ ರಾಜಕೀಯ ಹೊಸದಲ್ಲ

ಆಂಧ್ರಪ್ರದೇಶ ಮಾತ್ರವಲ್ಲ ಕರ್ನಾಟಕದ ಗಡಿ ಜಿಲ್ಲೆಗಳ ಕ್ಷೇತ್ರಗಳಲ್ಲೂ ಪ್ರಜಾರಾಜ್ಯಂ ಪಕ್ಷದ ಪರ ಪ್ರಚಾರ ಮಾಡಿದ್ದರು. ನಂತರ ಅವರೇ ಜನಸೇನಾ ಎನ್ನುವ ರಾಜಕೀಯ ಪಕ್ಷವನ್ನು ಹುಟ್ಟುಹಾಕಿ ಅದನ್ನು ಮುನ್ನಡೆಸುತ್ತಿದ್ದಾರೆ.

ಬಲಿಜ ಸಮುದಾಯದ ಓಲೈಕೆಗೆ ಒತ್ತು

ಬಲಿಜ ಸಮುದಾಯದ ಓಲೈಕೆಗೆ ಒತ್ತು

ತೆಲಂಗಾಣ ಮತ್ತು ಸೀಮಾಂಧ್ರದಲ್ಲಿ ಬಲಿಜ ಸಮುದಾಯದ ಜನರು ಅಧಿಕ ಸಂಖ್ಯೆಯಲ್ಲಿದ್ದಾರೆ. ಪ್ರಬಲ ಸಮುದಾಯವರು ಕರ್ನಾಟಕದ ಗಡಿಭಾಗದಲ್ಲೂ ಇದ್ದಾರೆ. ಹಾಗೆ ನೋಡಿದರೆ ಗಡಿಭಾಗದ ಹಿಂದೂಪುರದಲ್ಲಿ ನಟ ಬಾಲಕೃಷ್ಣ ಶಾಸಕರಾಗಿದ್ದಾರೆ. ಪವನ್ ಕಲ್ಯಾಣ್ ಅವರ ಬೆಂಬಲದಿಂದ ರಾಜ್ಯದಲ್ಲಿರುವ ಬಲಿಜ ಸಮುದಾಯವನ್ನು ತಮ್ಮತ್ತ ಸೆಳೆಯಲು ಜೆಡಿಎಸ್ ಯತ್ನಿಸುತ್ತಿರುವ ಸುದ್ದಿಯಿದೆ.

ಜಾಗ್ವಾರ್ ಟೀಸರ್ ನೋಡಿ ಖುಷಿ ಪಟ್ಟ ಪವನ್

ಜಾಗ್ವಾರ್ ಟೀಸರ್ ನೋಡಿ ಖುಷಿ ಪಟ್ಟ ಪವನ್

ಜಾಗ್ವಾರ್ ಟೀಸರ್ ನೋಡಿ ಖುಷಿ ಪಟ್ಟ ಪವನ್ ಅವರು ನನ್ನ ಮಗ ನಿಖಿಲ್ ಟಾಲಿವುಡ್ ನಲ್ಲಿ ಬೆಳೆಯಲು ಸಹಕರಿಸಲಿ ಎಂದು ಕುಮಾರಸ್ವಾಮಿ ಕೇಳಿಕೊಂಡರು.ಈ ಮೂಲಕ ಟಾಲಿವುಡ್ ಬಗ್ಗೆ ಹೆಚ್ಚಿನ ಒಲವು ಇದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಮೋದಿ ಪರ ಪ್ರಚಾರ

ಲೋಕಸಭೆ ಚುನಾವಣೆಯಲ್ಲಿ ಮೋದಿ ಪರ ಪ್ರಚಾರ

ಲೋಕಸಭೆ ಚುನಾವಣೆಯಲ್ಲಿ ಮೋದಿ ಪರ ಪ್ರಚಾರ ನಡೆಸಿದ್ದ ಪವನ್ ಕಲ್ಯಾಣ್ ಅವರು ನನಗೆ ವ್ಯಕ್ತಿ ಮುಖ್ಯ, ಪಕ್ಷ ಅಲ್ಲ ಎಂದು ಸಾರಿದ್ದರು. ಪವನ್ ಪ್ರಚಾರದ ಲಾಭ ಪಡೆದ ಚಂದ್ರಬಾಬು ನಾಯ್ಡು ಅವರು ಸಿಎಂ ಹುದ್ದೆಗೇರಿದ್ದರು. ಈಗ ಜೆಡಿಎಸ್ ಪರ ಪ್ರಚಾರ ಮಾಡುವ ಸಾಧ್ಯತೆಯಿದೆ.

English summary
Karnataka former CM Kumaraswamy meets actor, Janasena party chief Pawan Kalyan at his residence in Hyderabad today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X