ಸೋನಿಯಾ ಗಾಂಧಿ ಅವರ ಕಾಲಿಗೆ ಬಿದ್ದಿದ್ದರು ಕೆಸಿಆರ್: ಮೋದಿ
ಹೈದರಾಬಾದ್, ಡಿಸೆಂಬರ್ 04: "ಟಿಆರ್ ಎಸ್ ಕಾಂಗ್ರೆಸ್ಸಿನ ಬಿ ಟೀಂ. ಕೆ ಚಂದ್ರಶೇಖರ್ ರಾವ್ ಅವರು ಒಮ್ಮೆ ಸೋನಿಯಾ ಗಾಂಧಿ ಅವರ ಕಾಲಿಗೆ ಬಿದ್ದಿದ್ದರು" ಎಂದು ಪ್ರಧಾನಿ ನರೇಂದ್ರ ಮೋದಿ ಕೆಸಿಆರ್ ಅವರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ನಿಮಿತ್ತ ಪ್ರಚಾರ ಸಭೆಯೊಂದರಲ್ಲಿ ಮೋದಿ ಮಾತನಾಡುತ್ತಿದ್ದರು.

"ರಾಹುಲ್ ಗಾಂಧಿ ಅವರು ಟಿಆರ್ ಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದಿದ್ದಾರೆ. ನಿಮಗೆಲ್ಲ ನಾನು ಕರ್ನಾಟಕವನ್ನು ನೆನಪಿಸುತ್ತೇನೆ. ಕರ್ನಾಟಕದಲ್ಲಿ ಚುನಾವಣೆಗೂ ಮುನ್ನ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದಿದ್ದ ರಾಹುಲ್ ಗಾಂಧಿ, ನಂತರ ಏನು ಮಾಡಿದರು? ಅದೇ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸಿದರು! ಬಿಜೆಪಿ ಅತಿದೊಡ್ಡ ಪಕ್ಷವಾಗಿದ್ದರೂ ವಿರೋಧ ಪಕ್ಷದ ಸ್ಥಾನದಲ್ಲೇ ಕೂರಬೇಕಾಯ್ತು" ಎಂಡು ಅವರು ಕರ್ನಾಟಕದ ರಾಜಕೀಯವನ್ನು ನೆನಪಿಸಿಕೊಂಡರು.
ತೆಲಂಗಾಣದ 119 ಕ್ಷೇತ್ರಗಳ ವಿಧಾನಸಭೆಗೆ ಡಿ.7 ರಂದು ಮತದಾನ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ. ಹಾಲಿ ಮುಖ್ಯಮಂತ್ರಿ ಟಿಆರ್ ಎಸ್ ನ ಕೆ ಚಂದ್ರಶೇಖರ್ ರಾವ್ ಅವರು ವಿಧಾನಸಭೆಯನ್ನು ಅವಧಿಗೂ ಮುನ್ನವೇ ವಿಸರ್ಜಿಸಿದ್ದರಿಂದ ಅವಧಿಗೂ ಮುನ್ನವೇ ಚುನಾವಣೆ ನಡೆಯುತ್ತಿದೆ.












Click it and Unblock the Notifications