ಮುತ್ತಿನ ನಗರಿಗೆ ಬಂದ ಇವಾಂಕಾಗೆ ಅದ್ದೂರಿ ಸ್ವಾಗತ

Posted By:
Subscribe to Oneindia Kannada

ಹೈದರಾಬಾದ್, ನವೆಂಬರ್ 28: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪುತ್ರಿ, ಸಲಹೆಗಾರ್ತಿ ಇವಾಂಕಾ ಟ್ರಂಪ್‌ ಅವರು ಮಂಗಳವಾರ ಮುಂಜಾನೆ ಮುತ್ತಿನ ನಗರಿಗೆ ಆಗಮಿಸಿದ್ದಾರೆ.

ಗ್ಯಾಲರಿ : ಮುತ್ತಿನನಗರಿಯಲ್ಲಿ ಟ್ರಂಪ್ ಪುತ್ರಿ ಇವಾಂಕಾ

ಇಲ್ಲಿನ ಷಂಶಾಬಾದಿನಲ್ಲಿರುವ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಇವಾಂಕಾ ಟ್ರಂಪ್‌ ಹಾಗೂ ಸಂಗಡಿಗರಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಮುತ್ತಿನ ನಗರಿಯ ಮತ್ತೇರಿಸಿದ ಚೆಲುವೆ ಇವಾಂಕಾ ಟ್ರಂಪ್!

ಹೈದರಾಬಾದಿನಲ್ಲಿ ಇಂದು ಜಾಗತಿಕ ಉದ್ಯಮಶೀಲ ಶೃಂಗಸಭೆಯಲ್ಲಿ ಇವಾಂಕಾ ಪಾಲ್ಗೊಳ್ಳಲಿದ್ದಾರೆ. ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ, ತೆಲಂಗಾಣ ಸಿಎಂ ಕೆ ಚಂದ್ರಶೇಖರ್‌ ರಾವ್‌ ಹಾಗೂ ಇವಾಂಕಾ ಟ್ರಂಪ್‌ ಭಾಷಣ ಮಾಡಲಿದ್ದಾರೆ.

ನ.28ರಂದು ಹೈದರಾಬಾದ್ ಮೆಟ್ರೋಗೆ ಮೋದಿಯಿಂದ ಚಾಲನೆ

127ಕ್ಕೂ ಅಧಿಕ ದೇಶಗಳಿಂದ 1200 ಯುವ ಉದ್ಯಮಿಗಳು ಈ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಸುಗಮವಾಗಿ ನೆರವೇರಲು ಅಗತ್ಯವಾದ ಎಲ್ಲ ಕ್ರಮಗಳನ್ನು ತೆಲಂಗಾಣ ಸರ್ಕಾರ ಕೈಗೊಂಡಿದೆ.

ಯಾರು ಈ ಚೆಂದುಳ್ಳಿ ಚೆಲುವೆ ಇವಾಂಕಾ ಟ್ರಂಪ್..?

ಪ್ರಧಾನಿ ಮೋದಿ ಅವರು ಫಲಕ್ನಾಮ ಪ್ಯಾಲೇಸ್ ನಲ್ಲಿ ಅತಿದೊಡ್ಡ ಔತಣಕೂಟ ಏರ್ಪಡಿಸಿದ್ದಾರೆ. ಈ ನಡುವೆ ಮೋದಿ ಅವರು ಇಂದು ಮಧ್ಯಾಹ್ನ ಹೈದರಾಬಾದ್ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಇವಾಂಕಾ ಅವರು ಪತಿ ಜತೆಗೆ ಚಾರ್ಮಿನಾರ್ ಗೆ ಭೇಟಿ ನೀಡಲಿದ್ದಾರೆ.

ಅಮೆರಿಕದ ಪ್ರತಿನಿಧಿಯಾಗಿ ಇವಾಂಕಾ

ಅಮೆರಿಕದ ಪ್ರತಿನಿಧಿಯಾಗಿ ಇವಾಂಕಾ

ಭಾರತದಲ್ಲಿರುವ ಅಮೆರಿಕದ ರಾಯಭಾರಿ ಕೆನ್‌ಜಸ್ಟರ್‌, ತೆಲಂಗಾಣ ರಾಜ್ಯ ಕೈಗಾರಿಕಾ ಪ್ರಧಾನ ಕಾರ್ಯದರ್ಶಿ ಜಯೇಶ್ ರಂಜನ್, ಅಮೆರಿಕದಲ್ಲಿರುವ ಭಾರತದ ರಾಯಭಾರಿ ನವತೇಜ್‌ಸಿಂಗ್‌ ಸರನ್‌, ಹೈದರಾಬಾದ್‌ ನಲ್ಲಿರುವ ಅಮೆರಿಕದ ಕನ್ಸ್‌ಲೆಟ್‌ ಜನರಲ್‌ ಕ್ಯಾಥರಿನಾ ಹಡ್ಡಾ ಹಾಗೂ ತೆಲಂಗಾಣ ಸರ್ಕಾರದ ಪ್ರತಿನಿಧಿಗಳು ಸೇರಿದಂತೆ ಇವಾಂಕಾ ಟ್ರಂಪ್‌ ಅವರಿಗೆ ಸ್ವಾಗತ ಕೋರಲಾಗಿದೆ.

ಟ್ರೈಡೆಂಟ್ ಹೋಟೆಲ್‌ಗೆ ತೆರಳಿದ ಇವಾಂಕಾ

ಟ್ರೈಡೆಂಟ್ ಹೋಟೆಲ್‌ಗೆ ತೆರಳಿದ ಇವಾಂಕಾ

ಷಂಶಾಬಾದಿನ ರಾಜೀವ್ ಗಾಂಧಿ ವಿಮಾನ ನಿಲ್ದಾಣದಿಂದ ವಿಶೇಷ ಭದ್ರತೆಯಲ್ಲಿ ಇವಾಂಕಾ ಟ್ರಂಪ್‌ ಮಾದಾಪುರ್‌ನಲ್ಲಿರುವ ಟ್ರೈಡೆಂಟ್ ಹೋಟೆಲಿಗೆ ತೆರಳಿದರು. ಮಂಗಳವಾರ ಮಧ್ಯಾಹ್ನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಜೊತೆಗೆ ಇವಾಂಕಾ ಟ್ರಂಪ್‌ ಸಮಾಲೋಚನೆ ನಡೆಸಲಿದ್ದಾರೆ. ಜಿಇಎಸ್ 2017ರಲ್ಲಿ ಪ್ರಧಾನಿ ಮೋದಿ, ತೆಲಂಗಾಣ ಸಿಎಂ ಚಂದ್ರಶೇಖರರಾವ್ ಹಾಗೂ ಇವಾಂಕ ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ.

ಫಲಕ್‌ನಾಮ ಪ್ಯಾಲೇಸ್‌ನಲ್ಲಿ ಔತಣಕೂಟ

ಫಲಕ್‌ನಾಮ ಪ್ಯಾಲೇಸ್‌ನಲ್ಲಿ ಔತಣಕೂಟ

ಐತಿಹಾಸಿಕ ಫಲಕ್‌ನಾಮ ಪ್ಯಾಲೇಸ್‌ನಲ್ಲಿ ನಡೆಯುವ ಜಾಗತಿಕ ಉದ್ಯಮಶೀಲ ಶೃಂಗಸಭೆ ನಂತರ ಮೋದಿ ಅವರು ನೀಡುವ ಭರ್ಜರಿ ಔತಣಕೂಟದಲ್ಲಿ ಇವಾಂಕ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 29 ರಾತ್ರಿ ಇವಾಂಕಾ ಟ್ರಂಪ್‌ ದಂಪತಿ ಹೈದರಾಬಾದ್‌ನಿಂದ ದುಬೈಗೆ ಪ್ರಯಾಣಿಸಲಿದ್ದಾರೆ.

 ಚಾರ್ಮಿನಾರ್ ಹಾಗೂ ಗೋಲ್ಕಂಡಾ ಕೋಟೆಗೆ ಭೇಟಿ

ಚಾರ್ಮಿನಾರ್ ಹಾಗೂ ಗೋಲ್ಕಂಡಾ ಕೋಟೆಗೆ ಭೇಟಿ

ಇವಾಂಕಾ ಹಾಗೂ ಅವರ ಪರಿವಾರ ಹೈದರಾಬಾದಿನಲ್ಲಿ ಚಾರ್ಮಿನಾರ್ ಹಾಗೂ ಗೋಲ್ಕಂಡಾ ಕೋಟೆಗೆ ಭೇಟಿ ನೀಡಲಿದ್ದಾರೆ. ಇವಾಂಕಾ ಅವರು ತೆರಳುವ ಹಾದಿ, ಉಳಿಯುವ ಹೋಟೆಲ್ ಗಳಿಗೆ ಭಾರಿ ಭದ್ರತೆ ಒದಗಿಸಲಾಗಿದೆ. ನವೆಂಬರ್ 29ರ ರಾತ್ರಿ 9.20ಕ್ಕೆ ಎಮಿರೇಟ್ಸ್ ವಿಮಾನ ಇಕೆ 529 ಮೂಲಕ ದುಬೈಗೆ ಹಾರಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
President Donald Trump's daughter and advisor to the president Ivanka Trump received grand welcome at Hyderabad when she arrived at Rajiv Gandhi International Airport at Shashabad on Tuesday early hours.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ