ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇನ್ ಬೋ ಆಸ್ಪತ್ರೆಯ ಮಿಂಚು ಈ ದಕ್ಷಿಣ ಏಷ್ಯಾದ ಅತ್ಯಂತ ಪುಟ್ಟ ಶಿಶು!

By Mahesh
|
Google Oneindia Kannada News

ಹೈದರಾಬಾದ್, ಜುಲೈ 19: ಹೈದರಾಬಾದ್‍ನಲ್ಲಿ ವೈದ್ಯಕೀಯ ಲೋಕದ ಅಚ್ಚರಿ ಬೆಳಕಿಗೆ ಬಂದಿದೆ. ದಕ್ಷಿಣ ಏಷಿಯಾದ ಅತಿ ಕಿರಿಯದಾದ ಶಿಶುವು ಹೈದರಾಬಾದ್ ನಲ್ಲಿ ಜನಿಸಿದೆ.

ಚತ್ತೀಸ್ ಘಡ್ ನ ದಂಪತಿ ನಿತಿಕಾ -ಸೌರಭ್ ಅವರಿಗೆ ಹೆಣ್ಣು ಶಿಶು "ಚೆರ್ರಿ" ಜನಿಸಿದೆ. ಹೈದರಾಬಾದ್ ನ ರೇನ್ ಬೋ ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಜನಿಸಿದೆ. ಸುಮಾರು 25 ವಾರಗಳ ಅವಧಿಗೆ ಜನಸಿದ (ನಿರೀಕ್ಷಿತ ದಿನಕ್ಕಿಂತಲೂ ನಾಲ್ಕು ತಿಂಗಳು ಮೊದಲು) ಜನಿಸಿದ ಈ ಶಿಶುವನ್ನು ಆಸ್ಪತ್ರೆಯ ವೈದ್ಯಕೀಯ ಪರಿಣಿತರಾದ ಡಾ. ದಿನೇಶ್ ಕುಮಾರ್ ಚಿರ್ಲಾ ನೇತೃತ್ವದ ವೈದ್ಯರ ತಂಡ ಸೂಸೂತ್ರವಾಗಿ ಹೆರಿಗೆ ಮಾಡಿಸಿತು. ಶಿಶುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದಾಗ ತೂಕ 1.980 ಕೆ.ಜಿ. ಇತ್ತು.

ಇದು, ನಿಖಿತಾ ಅವರಿಗೆ ಐದನೇ ಮಗು. ಈ ಹಿಂದೆ ಅವರಿಗೆ ನಾಲ್ಕು ಬಾರಿ ಗರ್ಭಸ್ರಾವವಾಗಿತ್ತು. ಇದು, ಅವರಿಗೆ ಶಿಶುವನ್ನು ಹೊಂದಲು ಇದ್ದ ಏಕೈಕ ಅವಕಾಶ. 24 ವಾರಗಳ ಅವಧಿಯ ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಶಿಶುವಿನ ಸುತ್ತ ನೀರಿನ ಅಂಶ ಕಡಿಮೆ ಇರುವುದು ಕಂಡುಬಂದಿತು.

ಶಿಶು ಕೇವಲ 350 ಗ್ರಾಂ ತೂಕವಿತ್ತು. ತಾಯಿಯಿಂದ ಶಿಶುವಿಗೆ ರಕ್ತದ ಹರಿಯುವಿಕೆಯೂ ಕ್ಷೀಣಿಸುತ್ತಿತ್ತು. ಗರ್ಭದಲ್ಲಿ ಶಿಶು ಉಳಿಯುವ ಯಾವುದೇ ಸಾಧ್ಯತೆಗಳು ಇರಲಿಲ್ಲ. ಪೋಷಕರು ಅನೇಕ ಆಸ್ಪತ್ರೆಗೆಗಳಿಗೆ ಭೇಟಿ ನೀಡಿದ್ದರು. ಯಾರೊಬ್ಬರೂ ಬದುಕಿನ ಭರವಸೆ ನೀಡಲಿಲ್ಲ.

ನಿಖಿತಾ 375 ಗ್ರಾಂ ತೂಕದ ಹೆಣ್ಣು ಶಿಶುವಿಗೆ ಜನ್ಮ

ನಿಖಿತಾ 375 ಗ್ರಾಂ ತೂಕದ ಹೆಣ್ಣು ಶಿಶುವಿಗೆ ಜನ್ಮ

ಬಳಿಕ ಅವರನ್ನು ರೇನ್ ಬೋ ಮಕ್ಕಳ ಆಸ್ಪತ್ರೆಗೆ ಶಿಫಾರಸು ಮಾಡಲಾಗಿತ್ತು. ಪೋಷಕರು ರೇನ್ ಬೋ ಮಕ್ಕಳ ಆಸ್ಪತ್ರೆಯ ವೈದ್ಯರನ್ನು ಭೇಟಿ ಮಾಡಿದ್ದರು. ಇಲ್ಲಿ ಪೋಷಕರಿಗೆ ಆಸ್ಪತ್ರೆಯು 24-25 ವಾರ ಅವಧಿಯ ಶಿಶುವನ್ನು ಆರೈಕೆ ಮಾಡಿರುವ ನಿದರ್ಶನವಿದೆ ಎಂದು ಭರವಸೆ ನೀಡಿದರು. ಈ ಮೊದಲು ಇಲ್ಲಿ ಜನಿಸಿದ ಅತಿಕಿರಿಯದಾದ ಶಿಶುವಿನ ತೂಕ 449 ಗ್ರಾಂ. ಪರಿಸ್ಥಿತಿ ಗಮನಿಸಿದ ವೈದ್ಯರ ತಂಡ ಇದನ್ನು ಗಮನಿಸಿ ಕೊಳ್ಳಲು ಸಜ್ಜಾಯಿತು.

ನಿಖಿತಾಗೆ ಆಸ್ಪತ್ರೆಯ ಪೆರಿನಟಲ್ ಕೇಂದ್ರಕ್ಕೆ ದಾಖಲಾಗಲು ಸೂಚಿಸಲಾಯಿತು. ನಿಖಿತಾ ಅವರನ್ನು ಬಳಿಕ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆತರಲಾಯಿತು. ಹಿರಿಯ ಪ್ರಸೂತಿ ತಜ್ಞರು ಇದ್ದ ಪರಿಣಿತರ ವೈದ್ಯರ ತಂಡ ಸವಿವರ ಹೆರಿಗೆ ಚಿಂತನೆಯೊಂದಿಗೆ ಬಂದಿದ್ದು, ಫೆಬ್ರುವರಿ 27ರಂದು ನಿಖಿತಾ 375 ಗ್ರಾಂ ತೂಕವಿರುವ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದು, ಮಗುವು ಕೇವಲ 20 ಸೆಂ.ಮೀ ಉದ್ದವಿದ್ದು, ಅಂಗೈಯಲ್ಲಿ ಹಿಡಿದುಕೊಳ್ಳಬಹುದಾಗಿತ್ತು.

ಹೊಸ ಮೈಲುಗಲ್ಲು ಸಾಧಿಸುತ್ತಿದೆ

ಹೊಸ ಮೈಲುಗಲ್ಲು ಸಾಧಿಸುತ್ತಿದೆ

ಶಿಶುವಿನ ಬೆಳವಣಿಗೆಯನ್ನು ಆಸ್ಪತ್ರೆ ಗಮನಿಸಲಿದೆ ಎಂದು ಪೋಷಕರಿಗೆ ಭರವಸೆ ನೀಡಲಾಯಿತು. ಚೆರ್ರಿ ಪ್ರಕರಣ ಉಲ್ಲೇಖಿಸಿದ ರೇನ್‍ಬೋ ಗ್ರೂಪ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ರಮೇಶ್ ಕಂಚರ್ಲಾ ಅವರು, 'ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯದ ಕಾರಣ ಹೆರಿಗೆಯ ನಂತರ ನಾವು 375 ಗ್ರಾಂ ತೂಕದ ಶಿಶುವನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆವು ಎಂದರು. 20 ವರ್ಷಗಳ ಸತತ ಶ್ರಮದ ಪರಿಣಾಮ ಇಂಥದೊಂದು ಪರಿಣಿತ ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಾಗಿದೆ.

ನಾವು ಪರಿಣಿತ ಪ್ರಸೂತಿ ತಜ್ಞರು, ಮಹಿಳಾ ರೋಗ ತಜ್ಞರು ಸೇರಿ ವಿವಿಧ ತಜ್ಞರನ್ನು ಒಳಗೊಂಡಿದ್ದೇವೆ. ಸೇವಾ ಬದ್ಧ ಶುಶ್ರೂಷಕರ ತಂಡವಿದೆ. ಆಸ್ಪತ್ರೆಯ ನವಜಾತ ಶಿಶುಗಳ ಆರೈಕೆ ಘಟಕವು ಅತ್ಯಾಧುನಿಕವಾಗಿದ್ದು, ಸಕಲ ಸೌಲಭ್ಯವನ್ನು ಹೊಂದಿದೆ. ರೇನ್‍ಬೋ ನವಜಾತ ಶಿಶುಗಳ ಆರೈಕೆಯಲ್ಲಿ ಪರಿಣಿತಿಯನ್ನು ಪಡೆದಿದೆ. ಪ್ರಸೂತಿ ಆರೈಕೆ ವಿಷಯದಲ್ಲಿ ಹೊಸ ಮೈಲುಗಲ್ಲು ಸಾಧಿಸುತ್ತಿದೆ ಎಂದರು.

ಚೆರ್ರಿ ಪ್ರಕರಣವು ವಿಶೇಷ ಹಾಗು ಸಂಕೀರ್ಣ

ಚೆರ್ರಿ ಪ್ರಕರಣವು ವಿಶೇಷ ಹಾಗು ಸಂಕೀರ್ಣ

ಚೆರ್ರಿ ಪ್ರಕರಣವು ವಿಶೇಷ ಹಾಗು ಸಂಕೀರ್ಣವಾಗಿತ್ತು. ಜಾಂಡೀಸ್, ಹಾಲುಣಿಸುವ ಸಮಸ್ಯೆ, ರಕ್ತ ಸಂಚಲನ, ಶ್ವಾಸಕೋಶದ ಸೋಂಕು ಇತ್ತು. ವಿಶೇಷ ಆರೈಕೆಯಿಂದಾಗಿ ಚೆರ್ರಿ ಇವುಗಳಿಂದ ಬೇಗ ಚೇತರಿಸಿಕೊಂಡಿತು. ಶಿಶುವನ್ನು ಆಸ್ಪತ್ರಯಿಂದ ಜನಿಸಿದ 128 ದಿನಗಳ ನಂತರ ಬಿಡುಗಡೆ ಮಾಡಲಾಯಿತು. ಚೆರ್ರಿ ಈಗ ಇತರೆ ಸಾಮಾನ್ಯ ಶಿಶುಗಳಂತೇ ಇದ್ದಾಳೆ. ಆಕೆಯ ತೂಕ 2.14 ಕೆ.ಜಿಗೆ ತಲುಪಿದೆ.

ಸಂತಸ ವ್ಯಕ್ತಪಡಿಸಿದ ಚೆರ್ರಿ ತಾಯಿ ನಿಖಿತಾ, ರೇನ್‍ಬೋ ಆಶ್ಪತ್ರೆಯ ವೈದ್ಯರನ್ನು ಭೇಟಿ ಮಾಡುವವರೆಗೆ ನಾನು ವಿಶ್ವಾಸವನ್ನೇ ಕಳೆದುಕೊಂಡಿದ್ದೆ. ಮಗುವನ್ನು ಜೀವಂತ ನೋಡುತ್ತೇನೆ ಎಂದು ಭಾವಿಸಿರಲಿಲ್ಲ. ಅನೇಕ ತೊಡಕುಗಳ ನಂತರ ಆಕೆ ಮನೆಗೆ ಬರುತ್ತಿದ್ದಾಳೆ.

ರೇನ್‍ಬೋ ಆಸ್ಪತ್ರೆಯ ಪರಿಣಿತ ವೈದ್ಯರಿಗೆ ನಾನು ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಆಸ್ಪತ್ರೆ ಇವಳಿಗಾಗಿ ಸಾಕಷ್ಟು ಶ್ರಮ ತೆಗೆದುಕೊಂಡಿದೆ. ನಾವು ಅವಳಿಗೆ ಚೆರ್ರಿ ಎಂದು ಹೆಸರಿಡಲು ಬಯಸುತ್ತೇವೆ' ಎಂದರು.

ಡಾ. ದಿನೇಶ್ ಕುಮಾರ್ ಚಿರ್ಲಾ ಅವರು

ಡಾ. ದಿನೇಶ್ ಕುಮಾರ್ ಚಿರ್ಲಾ ಅವರು

ಚೆರ್ರಿ ಮನೆಗೆ ಮರಳುವುದಕ್ಕೆ ಸಂತಸ ವ್ಯಕ್ತಪಡಿಸಿದ ಡಾ. ದಿನೇಶ್ ಕುಮಾರ್ ಚಿರ್ಲಾ ಅವರು, ಒಂದು ತಂಡದ ಕಾರ್ಯದ ಫಲವಾಗಿ ನಾವು ಇಂದು ಚೆರ್ರಿಯನ್ನು ಮನೆಗೆ ಕಳುಹಿಸಲು ಶಕ್ತರಾಗಿದ್ದೇವೆ. ಆಸ್ಪತ್ರೆಯಲ್ಲಿ ದಿನದ 24 ಗಂಟೆ ಗುಣಮಟ್ಟದ ಸೇವೆ ಲಭ್ಯವಿದೆ. ಪ್ರಸೂತಿ ತಜ್ಞರ ತಂಡ ಚೆರ್ರಿಯನ್ನು ಮನೆಗೆ ಕಳುಹಿಸುವಲ್ಲಿ ಶ್ರಮಿಸಿದೆ ಎಂದರು.

ಆಸ್ಪತ್ರೆಯು ಸ್ಥಾಪನೆಯಾದಂದಿನಿಂದ ಸುಮಾರು 5000 ಕ್ಕಿಂತ ಹೆಚ್ಚು ಅವಧಿಪೂರ್ವ ಶಿಶುಗಳನ್ನು ರಕ್ಷಿಸಿದೆ. ಕೆಲವೊಂದು ಶಿಶುಗಳು ಬದುಕಲಾರದಷ್ಟೂ ಸಣ್ಣದಾಗಿದ್ದವು. ವಿಶ್ವ ಅವಧಿಪೂರ್ಣ ದಿನ ಆಯೋಜನೆ ನಿಮಿತ್ತ ರೇನ್‍ಬೋ ಆಸ್ಪತ್ರೆಯು 2016ರಲ್ಲಿ ಒಂದೇ ದಿನ 445 ಅವಧಿಪೂರ್ವ ಶಿಶುಗಳನ್ನು ಒಂದೇ ಚಾವಣಿಡಿಗೆ ತಂದಿತ್ತು. ಇದು, ಇದುವರೆಗಿನ ಅತಿಹೆಚ್ಚು ಸಂಖ್ಯೆಯ ಒಂದುಗೂಡುವಿಕೆ.

ಇದು, 2012ರಲಿ ಅರ್ಜೆಂಟೀನಾದಲ್ಲಿ ಒಂದೇ ದಿನ 386 ಶಿಶುಗಳು ಒಟ್ಟುಗೂಡಿದ್ದ ದಾಖಲೆಯನ್ನು ಅಳಿಸಿಹಾಕಿತು. ಈ ದಾಖಲೆಯು ಆಸ್ಪತ್ರೆಯ ಪರಿಣಿತ ಸೇವೆಗೆ ಸಂದ ಹೆಮ್ಮೆಯಾಗಿದೆ. ರೇನ್ ಬೋ ಆಸ್ಪತ್ರೆಯು ಪ್ರತಿ ಶಿಶುವಿಗೆ ಬದುಕುವ ಹಕ್ಕು ಇದೆ ಎಂದು ಬಲವಾಗಿ ನಂಬುತ್ತಿದೆ.

English summary
Hyderabad becomes the home to South East Asia's smallest baby girl delivered at Rainbow Children's Hospital. The baby girl Cherry was born to proud parents Nitika and Saurabh hailing from Chhattisgarh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X