ನಾಯಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕ!

Posted By: Prithviraj
Subscribe to Oneindia Kannada

ಹೈದರಾಬಾದ್, ಅಕ್ಟೋಬರ್, 25: ಕಾಮಕ್ಕೆ ಕಣ್ಣಿಲ್ಲ ಅಂತಾರೆ. ಆದರೆ ಕಾಮದಿಂದ ಕಣ್ಣುಮುಚ್ಚಿಕೊಂಡಿರುವ ಈ ಯುವಕ ಮಾತ್ರ ವಿಶ್ವದಲ್ಲೇ ಯಾರು ಮಾಡದಂತಹ ನೀಚ ಕೆಲಸ ಮಾಡಿ ಈಗ ಸುದ್ದಿಯಾಗಿದ್ದಾನೆ.

ಇಷ್ಟಕ್ಕೂ ಇವನು ಮಾಡಿರೋ ನೀಚ ಎಂತಹುದು ಅಂತೀರಾ? ದೆಹಲಿ ನೋಯ್ಡಾ ಮೂಲದ ಅಸ್ಲಾಂಖಾನ್ (22) ಎಂಬ ಯುವಕ ಕೆಲಸ ಅರಿಸಿಕೊಂಡು ಸೋಮವಾರ (ಅ.24) ಹೈದರಾಬಾದ್ ಗೆ ಬಂದಿದ್ದಾನೆ. ಇಲ್ಲಿಯ ರಾಜೇಂದ್ರನಗದಲ್ಲಿರುವ ಕೆಲವು ಸಂಸ್ಥೆಗಳಲ್ಲಿ ಕೆಲಸಕ್ಕಾಗಿ ಹುಡುಕಾಡಿದ್ದಾನೆ ಆದರೆ ಕೆಲಸ ಸಿಕ್ಕಿಲ್ಲ.[ಬಾಲಕನ ಮೇಲೆ ಅತ್ಯಾಚಾರ: ಮಹಿಳೆ ವಿರುದ್ಧ ಪೋಕ್ಸೋ ಕೇಸು]

Hyderabad youth on drugs kills and rapes pregnant dog

ಎರಡು ದಿನಗಳಾದರೂ ಕೆಲಸ ಸೀಗದೇ ಹೋಗಿದ್ದಕ್ಕೆ ಬೇಸತ್ತ ಯುವಕ, ಮಾದಕ ಪದಾರ್ಥಗಳನ್ನು ಸೇವಿಸಿದ್ದಾನೆ. ಅಮಲು ಹೆಚ್ಚಾಗಿ ಹೈದರಾಬಾದ್ ನ ಶಾಸ್ತ್ರಿಪುರದಲ್ಲಿದ್ದ ಒಂದು ಮನೆಗೆ ನುಗ್ಗಿದ್ದಾನೆ. ಮನೆಯ ಮುಂದೆ ಕಟ್ಟಿಹಾಕಿದ್ದ ಗರ್ಭಿಣಿ ನಾಯಿಯೊಂದು ಅಸ್ಲಾಂಖಾನ್ ನನ್ನು ನೋಡಿ ಬೊಗಳಿದೆ.[ಹಸುವಿನ ಕರು ಮೇಲೆಯೇ ಅತ್ಯಾಚಾರ ಎಸಗಿದ!]

ನಾಯಿ ಬೊಗಳಿದ್ದಕ್ಕೆ ಮತ್ತಷ್ಟು ಆಕ್ರೋಶಗೊಂಡ ಈ ನೀಚ ನಾಯಿಯನ್ನು ಅಲ್ಲೇ ಕೊಂದಿದ್ದಾನೆ. ಸಾಲದೆಂಬಂತೆ ಸತ್ತಿರುವ ನಾಯಿಯ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದಾನೆ.

ಇವನು ಮಾಡುತ್ತಿರುವ ಅಚಾತುರ್ಯವನ್ನು ಸ್ಥಳೀಯರು ನೋಡಿ ತಡೆಯಲು ಬಂದಿದ್ದಾರೆ. ಜನರನ್ನು ಕಂಡು ಹೆದರಿದ ಈತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಸ್ಥಳೀಯರು ಕೂಡಲೇ ವಿಷಯವನ್ನು ನಾಯಿಯ ಯಜಮಾನನಿಗೆ ಸುದ್ದಿ ಮುಟ್ಟಿಸಿದ್ದಾರೆ.

ನಾಯಿಯ ಯಜಮಾನ ಮತ್ತು ಆತನ ಪುತ್ರರು ಈ ನೀಚನ ಬೆನ್ನುಹತ್ತಿ ಹಿಡಿದು ದೇಹಶುದ್ಧಿ ಮಾಡಿದ್ದಾರೆ. ನಂತರ ಮೈಲಾರ್ ದೇವುಪಲ್ಲಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 22-year-old man from Noida was arrested on Monday for killing a pregnant dog and later raping it at Shastripuram in Mailardevpally at Madhapur.
Please Wait while comments are loading...