• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಯಾಲಿಸಿಸ್ ರೋಗಿಯ ಬಳಿಯೂ ಕಳ್ಳತನ! ಇವನೆಂಥ ಕ್ಯಾಬ್ ಡ್ರೈವರ್!

|

ಹೈದರಾಬಾದ್, ನವೆಂಬರ್ 15: ಆಗಷ್ಟೇ ಡಯಾಲಿಸಿಸ್ ಮುಗಿಸಿ ವಾಪಸ್ಸಾಗುತ್ತಿದ್ದ ಮಹಿಳೆಯ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ಕ್ಯಾಬ್ ಡ್ರೈವರ್ ವೊಬ್ಬ ದೋಚಿದ ಘಟನೆ ತೆಲಂಗಾಣದ ಮುಶೀರಾಬಾದ್ ನಲ್ಲಿ ನಡೆದಿದೆ.

ಮುಶೀರಾಬಾದ್ ನ ಕೇರ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆದು ಪಿ ಸುವರ್ಣಾ(35) ಎಂಬ ಮಹಿಳೆ ಮನೆಗೆ ಹೊರಟಿದ್ದರು. ಅವರು ವಾರಕ್ಕೊಮ್ಮೆ ಇದೇ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಂಡು ರಾತ್ರಿ ಕ್ಯಾಬಿಗೆ ಮನೆಗೆ ಹೋಗುತ್ತಿದ್ದರು.

ಚಾಲಾಕಿ ಯುವತಿ ತನ್ನ ಗೆಳತಿಯರನ್ನೇ ದರೋಡೆ ಮಾಡಿ ಸಿಕ್ಕಿಬಿದ್ಲು!

ಅಂದು ಸಹ ಡಯಾಲಿಸಿಸ್ ಮುಗಿಸಿ, ಕ್ಯಾಬಿಗಾಗಿ ಕಾಯುತ್ತಿದ್ದಾಗ ಓರ್ವ ಮಹಿಳೆಯನ್ನು ಹೊತ್ತ ಕ್ಯಾಬೊಂದು ಸುವರ್ಣಾ ಅವರ ಬಳಿ ಬಂದು ನಿಂತಿದೆ. ಮಹಿಳೆಯೊಬ್ಬರು ಇದ್ದಿದ್ದರಿಂದ ಸುವರ್ಣಾ ಆ ಕ್ಯಾಬ್ ಹತ್ತಿಕೊಂಡಿದ್ದಾರೆ. ಆದರೆ ಲಾಲ್ ಪೇಟೆ ಎಂಬಲ್ಲಿ ಆ ಮಹಿಳೆ ಕಾರಿನಿಂದ ಇಳಿದುಕೊಂಡಿದ್ದಾರೆ. ನಂತರ ನಾಚಾರಾಮ್ ಗೆ ಹೋಗಬೇಕಿದ್ದ ಡ್ರೈವರ್ ಉಪ್ಪಾಳ್ ಕಡೆ ಕಾರು ತಿರುಗಿಸಿದ್ದಾನೆ. ಅನುಮಾನ ಬಂದ ಸುವರ್ಣಾ ವಿಚಾರಿಸಿದಾಗ ಆಕೆಯನ್ನು ಹೊಡೆದು, ಆಕೆಯ ಬ್ಯಾಗನ್ನು ಕಸಿದುಕೊಂಡು, ಆಕೆಯನ್ನು ಕಾರಿನಿಂದ ನೂಕಿ ಪರಾರಿಯಾಗಿದ್ದಾನೆ.

ಆದರೆ ಸುವರ್ಣಾ ವರ ಮೊಬೈಲ್ ಫೋನ್ ಅನ್ನು ತೆಗೆದುಕೊಳ್ಳಲು ಮರೆತು ಕ್ಯಾಬ್ ಡ್ರೈವರ್ ಪರಾರಿಯಾಗಿದ್ದರಿಂದ ಸುವರ್ಣಾ ಅವರು ತಕ್ಷಣವೇ ತಮ್ಮ ಮನೆಗೆ ಫೋನಾಯಿಸಿ, ಸುರಕ್ಷಿತವಾಗಿ ಮನೆ ತಲುಪಿದ್ದೆ. ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.

ಎಟಿಎಂಗೆ ಹಣ ಭರಿಸುವ ಮೊದಲೇ 75 ಲಕ್ಷ ದೋಚಿ ಚಾಲಕ ಪರಾರಿ

ಸುವರ್ಣಾ ಅವರು ನೋಟ್ ಮಾಡಿಕೊಂಡಿದ್ದ ಕಾರ್ ನಂಬರ್ ಆಧಾರದ ಮೇಲೆ ಕ್ಯಾಬ್ ಡ್ರೈವರ್ ಫೋನ್ ನಂಬರ್ ಅನ್ನು ಪತ್ತೆ ಮಾಡಲಾಗಿತ್ತು. ನಂತರ ಹಣವನ್ನು ಇಟ್ಟುಕೊಂಡು, ಮೆಡಿಕಲ್ ಪ್ರಿಸ್ಕ್ರಿಪ್ಷನ್ ಗಳನ್ನು ಸುವರ್ಣಾ ಅವರಿಗೆ ಕೊಟ್ಟು ಹೋಗುವಂತೆ ಸುವರ್ಣಾ ಅವರೇ ಕ್ಯಾಬ್ ಡ್ರೈವರ್ ಗೆ ಫೋನ್ ಮಾಡಿದ್ದರು. ಅದಕ್ಕೆ ಒಪ್ಪಿಕೊಂಡ ಕ್ಯಾಬ್ ಡ್ರೈವರ್ ಇಲ್ಲಿನ ಮಲ್ಲಾಪುರದ ಬಾಬಾ ಕೆಫೆ ಎಂಬಲ್ಲಿಗೆ ಬಂದು ಬ್ಯಾಗನ್ನು ಪಡೆಯುವಂತೆ ಹೇಳಿದ್ದಾನೆ.

ದರೋಡೆಕೋರರ ಕನಸು ನುಚ್ಚುನೂರು ಮಾಡಿದ್ದ ಅಪನಗದೀಕರಣ!

ಈ ಸಂದರ್ಭದಲ್ಲಿ ಸುವರ್ಣಾ ಅವರೊಂದಿಗೆ ಬಂದ ಪೊಲೀಸರು ಕ್ಯಾಬ್ ಡ್ರೈವರ್ ನನ್ನು ಬಂಧಿಸಿದ್ದಾರೆ. ಆರೋಪಿಯನ್ನು 38 ವರ್ಷ ವಯಸ್ಸಿನ ದುಂಬಳಾ ಶ್ರೀನಿವಾಸ್ ರೆಡ್ಡಿ ಎಂದು ಗುರುತಿಸಲಾಗಿದೆ.

English summary
In a tragic incident a cab driver robbed a woman patient after dialysis in a hospital. Cab driver was arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X