ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ, ಸೆ.25ಕ್ಕೆ ವೇತನ ಪಾವತಿ

By: ವಿಕಾಸ್ ನಂಜಪ್ಪ
Subscribe to Oneindia Kannada
Hyderabad : Good News For Telangana State Government Employees | Oneindia Kananda

ಹೈದರಾಬಾದ್, ಸೆಪ್ಟೆಂಬರ್ 11 : ತೆಲಂಗಾಣ ರಾಜ್ಯದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ. ದಸರಾ ಹಿನ್ನಲೆಯಲ್ಲಿ ಒಂದು ವಾರ ಮುಂಚಿತವಾಗಿ ವೇತನವನ್ನು ಪಾವತಿ ಮಾಡಲಾಗುತ್ತದೆ. ಸೆ.25ರಂದೇ ಈ ತಿಂಗಳ ಸಂಬಳ ಕೈ ಸೇರಲಿದೆ.

ತೆಲಂಗಾಣ ಸರ್ಕಾರ ಒಂದು ವಾರ ಮುಂಚಿತವಾಗಿ ವೇತನ ಪಾವತಿ ಮಾಡಲು ಒಪ್ಪಿಗೆ ನೀಡಿದೆ. ಪ್ರತಿ ತಿಂಗಳ ಮೊದಲ ದಿನ ಸರ್ಕಾರಿ ನೌಕರರಿಗೆ ವೇತನ ಸಿಗುತ್ತಿತ್ತು. ಆದರೆ, ಈ ಬಾರಿ ದಸರಾ ಇದೆ. ಖರ್ಚು-ವೆಚ್ಚಗಳ ಹಿನ್ನಲೆಯಲ್ಲಿ ಸೆ.25ರಂದು ವೇತನ ಪಾವತಿ ಮಾಡಲಾಗುತ್ತದೆ.

Good news for Telangana govt employees: Salaries to be credited on September 25

ಸರ್ಕಾರಿ ನೌಕರರ ಸಂಘ ಅವಧಿಗೂ ಮೊದಲೇ ವೇತನ ಪಾವತಿ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ದಸರಾ ಹಿನ್ನಲೆಯಲ್ಲಿ ಈ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು, ನೌಕರರಿಗೆ ಬೇಡಿಕೆಯನ್ನು ಪುರಸ್ಕರಿಸಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ಪಿ.ಸಿಂಗ್ ಭೇಟಿಯಾಗಿದ್ದ ನೌಕರರ ಸಂಘದವರು, ದಸರಾವನ್ನು ರಾಜ್ಯದಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಕುಟುಂಬದವರ ಜೊತೆ ನಾವು ದಸರಾ ಆಚರಣೆ ಮಾಡಲು ಅವಧಿಗೂ ಮೊದಲೇ ವೇತನ ಪಾವತಿ ಮಾಡಬೇಕು ಎಂದು ಮನವಿ ಮಾಡಿದ್ದರು.

ಮುಖ್ಯ ಕಾರ್ಯದರ್ಶಿಗಳು ಈ ಮನವಿಯ ಬಗ್ಗೆ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರಿಗೆ ಮಾಹಿತಿ ನೀಡಿದ್ದರು. ನೌಕರರ ಬೇಡಿಕೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದು, ಸೆ.25ರಂದು ವೇತನ ಪಾವತಿಯಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There is good news for Telangana state government employees. They would get their salary in advance this month. The government has agreed to pay the September salary of its employees one week in advance so that they can meet their Dasara expenses. The employees would get their salaries on September 25.
Please Wait while comments are loading...