ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕಿಯನ್ನು ಬೆತ್ತಲೆ ಮಾಡಿ, ಬ್ಲೇಡ್ ನಿಂದ ಕತ್ತರಿಸಿ, ವಿಡಿಯೋ ಮಾಡಿದ ಯುವಕ

|
Google Oneindia Kannada News

ಹೈದರಾಬಾದ್, ಮಾರ್ಚ್ 09 : ಮಾದಕ ವ್ಯಸನಿಯೊಬ್ಬ ಹದಿನಾರು ವರ್ಷದ ಬಾಲಕಿಯನ್ನು ಬೆತ್ತಲೆ ಮಾಡಿದ್ದಲ್ಲದೆ, ಆಕೆಯ ದೇಹವನ್ನು ಬ್ಲೇಡಿನಿಂದ ಕೊಯ್ದು, ರಕ್ತಸಿಕ್ತ ದೇಹವನ್ನು ವಿಡಿಯೋ ಮಾಡಿದ ಆಘಾತಕಾರಿ ಘಟನೆ ಹೈದಬಾರಾದ್ ನಲ್ಲಿ ನಡೆದಿದೆ.

ತನ್ನ ಮೇಲೆ ಹಲ್ಲೆ ಮಾಡಬೇಕು, ಹೋಗಲು ಬಿಡು ಎಂದು ಆ ಬಾಲಕಿ ಒಂದೇ ಸವನೆ ಬೇಡಿಕೊಳ್ಳುತ್ತಿದ್ದರೂ ಬಿಡದ ಮಾದಕ ವ್ಯಸನಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ಬಾಲಕಿಯ ಕಿರುಚಾಟುವನ್ನು ಕೇಳಿ ಸಾರ್ವಜನಿಕರು ಆಕೆಯ ರಕ್ಷಣೆಗೆ ಧಾವಿಸಿದ್ದಾರೆ.

ಹನ್ನೆರಡರ ಬಾಲಕನಿಂದ ಅತ್ಯಾಚಾರ, ಗರ್ಭಿಣಿಯಾದ ಹತ್ತರ ಬಾಲಕಿ!ಹನ್ನೆರಡರ ಬಾಲಕನಿಂದ ಅತ್ಯಾಚಾರ, ಗರ್ಭಿಣಿಯಾದ ಹತ್ತರ ಬಾಲಕಿ!

ಈ ಘಟನೆ ಹೈದರಾಬಾದ್ ನ ಗಾಂಧಿ ನಗರದಲ್ಲಿ ನಡೆದಿದ್ದು, ಆ ಯುವಕನನ್ನು ಪೊಲೀಸರಿಗೆ ಒಪ್ಪಿಸುವ ಮುನ್ನ ಸಾರ್ವಜನಿಕರು ಆತನನ್ನು ಥಳಿಸಿದ್ದಾರೆ. ಗಾಂಧಿ ನಗರದಲ್ಲಿ ವಿದ್ಯಾರ್ಥಿಗಳೇ ಹೆಚ್ಚಾಗಿ ವಾಸಿಸುತ್ತಿದ್ದು, ಮಾದಕ ವಸ್ತು ಮಾರಾಟ ಇಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

Girl stripped, cut with blade and filmied by drug addict

ಗಾಂಜಾ ಮಾದಕ ಪದಾರ್ಥದ ವ್ಯಸನಿಯಾಗಿದ್ದ ಯುವಕನ ವಿರುದ್ಧ ಬಾಲಕಿಯನ್ನು ಅಪಹರಿಸಿದ ದೂರನ್ನು ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಬಾಲಕಿಯನ್ನು ಲೈಂಗಿಕವಾಗಿ ಹಿಂಸಿಸಿದ್ದಕ್ಕಾಗಿ ಪೋಕ್ಸೋ ಕಾಯ್ದೆಯಡಿ ಕೂಡ ದೂರನ್ನು ದಾಖಲಿಸಿಕೊಳ್ಳಲಾಗಿದೆ.

English summary
A 16-year-old girl has been stripped, cut with blade and filmied by drug addict youth in Gandhinagar in Hyderabad. The public beat him up before handing over to the police. Local residents of Gandhinagar allege that the area, where large number of students stay, has become hub of drug addicts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X