ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GHMC Polls: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಬಿಜೆಪಿ

|
Google Oneindia Kannada News

ಹೈದರಾಬಾದ್, ಡಿಸೆಂಬರ್ 24: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‌ಎಂಸಿ) ಚುನಾವಣೆಯಲ್ಲಿ ಆರಂಭದಲ್ಲಿ ಮುನ್ನಡೆ ಸಾಧಿಸಿ ಅಚ್ಚರಿ ಮೂಡಿಸಿದ್ದ ಬಿಜೆಪಿ, ಆಡಳಿತಾರೂಢ ಟಿಆರ್‌ಎಸ್ ಎದುರು ಮತ್ತೆ ಮಂಡಿಯೂರಿಗೆ. ಮಹಾನಗರ ಪಾಲಿಕೆಯಲ್ಲಿ ಮತ್ತೆ ಅಧಿಕಾರ ಹಿಡಿಯುವತ್ತ ಟಿಆರ್ಎಸ್ ಸಾಗಿದೆ.

ಆರಂಭದಲ್ಲಿ ಗೆಲುವಿನ ಸಂಭ್ರಮಾಚರಣೆ ಮಾಡಿದ್ದ ಬಿಜೆಪಿ, ಮಧ್ಯಾಹ್ನದ ಬಳಿಕ ಫಲಿತಾಂಶದ ಚಿತ್ರಣ ಬದಲಾದ ಹಿನ್ನೆಲೆಯಲ್ಲಿ ಮಂಕಾಯಿತು. ಆದರೆ ತೆಲಂಗಾಣ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಮತ್ತು ಸಂಸದ ಬಂಡಿ ಸಂಜಯ್ ಅವರು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಜಿಎಚ್‌ಎಂಸಿ; ಬಿಜೆಪಿ ಅಬ್ಬರದ ಪ್ರಚಾರ ಮತವಾಗಲಿಲ್ಲ! ಜಿಎಚ್‌ಎಂಸಿ; ಬಿಜೆಪಿ ಅಬ್ಬರದ ಪ್ರಚಾರ ಮತವಾಗಲಿಲ್ಲ!

ಜಿಎಚ್‌ಎಂಸಿ ಚುನಾವಣೆಗೆ ಡಿ. 1ರಂದು ಮತದಾನ ನಡೆದಾಗ ಸಂಜೆ 4 ಗಂಟೆಯವರೆಗೂ ಶೇ 30ರಷ್ಟಿದ್ದ ಮತದಾನದ ಪ್ರಮಾಣ ಸಂಜೆ 6 ಗಂಟೆ ವೇಳೆಗೆ ಶೇ 46.55ರಷ್ಟಾಗಿತ್ತು. ಎರಡೇ ಗಂಟೆಯಲ್ಲಿ ಇಷ್ಟು ಹೆಚ್ಚಳವಾಗಲು ಹೇಗೆ ಸಾಧ್ಯ ಎಂದು ಬಂಡಿ ಸಂಜಯ್ ಪ್ರಶ್ನಿಸಿದ್ದಾರೆ.

GHMC Polls: Telangana BJP Demands Judicial Inquiry On Increase In Voter Turnout In The Last Hour

'ಮತದಾನದ ಕೊನೆಯ ಗಂಟೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಶೇಕಡಾವಾರು ಮತದಾನವಾಗಿರುವುದು ಹೇಗೆ ಎಂಬುದರ ಬಗ್ಗೆ ಪರಿಣಾಮಕಾರಿ ನ್ಯಾಯಾಂಗ ತನಿಖೆಯಾಗಬೇಕು. ಹಾಗೆಯೇ ಶೇ 90ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದ ಮತದಾನದ ವಿವರಗಳನ್ನು ಬಹಿರಂಗಪಡಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.

ಈ ಚುನಾವಣೆಯಲ್ಲಿ ಟಿಆರ್ಎಸ್ ಅಧಿಕಾರಕ್ಕೆ ಬಂದರೂ, ಬಿಜೆಪಿ ತನ್ನ ಗುರಿಯನ್ನು ಈಡೇರಿಸಿಕೊಂಡಂತೆ ಆಗಿದೆ. 20-30 ಸ್ಥಾನಗಳಲ್ಲಿ ಗೆಲ್ಲುವುದು ಬಿಜೆಪಿಯ ಮುಖ್ಯ ಗುರಿಯಾಗಿತ್ತು. ಇದು ಮುಂದಿನ ವಿಧಾನಸಭೆ ಚುನಾವಣೆಗೆ ತಳಹದಿಯಾಗಲಿದೆ ಎಂದು ಬಿಜೆಪಿ ನಿರೀಕ್ಷಿಸಿದೆ.

Explained: ಹೈದರಾಬಾದ್‌ನ 'ಭಾಗ್ಯನಗರ್' ಹೆಸರಿನ ಮೂಲ ಯಾವುದು? Explained: ಹೈದರಾಬಾದ್‌ನ 'ಭಾಗ್ಯನಗರ್' ಹೆಸರಿನ ಮೂಲ ಯಾವುದು?

ಇದಕ್ಕೂ ಮುನ್ನ ಮತಪತ್ರಗಳಲ್ಲಿ ಯಾವುದೇ ರೀತಿಯ ಶಾಯಿಯ ಗುರುತು ಇದ್ದರೂ ಆ ಮತವನ್ನು ಪರಿಗಣಿಸುವಂತೆ ರಾಜ್ಯ ಚುನಾವಣಾ ಆಯೋಗ ಗುರುವಾರ ತಡರಾತ್ರಿ ಸುತ್ತೋಲೆ ಹೊರಡಿಸಿತ್ತು. ಕೂಡಲೇ ಹೈಕೋರ್ಟ್ ಮೆಟ್ಟಿಲೇರಿದ್ದ ಬಿಜೆಪಿ, ಈ ಆದೇಶವನ್ನು ರದ್ದುಪಡಿಸುವಲ್ಲಿ ಯಶಸ್ವಿಯಾಗಿತ್ತು. ಪೂರ್ತಿ ಸ್ವಸ್ತಿಕ ಚಿಹ್ನೆ ಮೂಡದ ಮತಗಳನ್ನು ತಿರಸ್ಕರಿಸಬೇಕು ಎಂದು ಬಿಜೆಪಿ ಆಗ್ರಹಿಸಿತ್ತು. ಚುನಾವಣೆಯಲ್ಲಿ ಟಿಆರ್ಎಸ್ ಮತಪತ್ರಗಳನ್ನು ದುರ್ಬಳಕೆ ಮಾಡಿಕೊಂಡಿದೆ. ಹೀಗಾಗಿ ಶಾಯಿಯ ಗುರುತು ಇದ್ದ ಮಾತ್ರಕ್ಕೆ ಮತಗಳನ್ನ ಪರಿಗಣಿಸುವಂತಿಲ್ಲ ಎಂದು ಅದು ಆರೋಪಿಸಿತ್ತು.

English summary
GHMC Polls: Telangana BJP has demanded a judicial inquiry on how the voter turnout increased from 30% to 46.55% in last two hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X