ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಚ್‌ಎಂಸಿ ಚುನಾವಣೆ; ಹೈದರಾಬಾದ್‌ನಲ್ಲಿ ಸಂಭ್ರಮಾಚರಣೆ ಇಲ್ಲ!

|
Google Oneindia Kannada News

ಹೈದರಾಬಾದ್, ಡಿಸೆಂಬರ್ 04 : ದೇಶಾದ್ಯಂತ ಕುತೂಹಲ ಮೂಡಿಸಿರುವ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‍ಎಂಸಿ) ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. 150 ವಾರ್ಡ್‌ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಮಧ್ಯಾಹ್ನದ ವೇಳೆಗೆ ಹೊರ ಬರುವ ನಿರೀಕ್ಷೆ ಇದೆ.

ಶುಕ್ರವಾರ ಬೆಳಗ್ಗೆ 8 ಗಂಟೆಗೆ ಜಿಎಚ್‌ಎಂಸಿ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. 150 ವಾರ್ಡ್‌ಗಳಲ್ಲಿ 1,122 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂತಾದ ಘಟಾನುಘಟಿ ನಾಯಕರು ಚುನಾವಣಾ ಪ್ರಚಾರವನ್ನು ನಡೆಸಿದ್ದಾರೆ.

 ಹೈದರಾಬಾದ್ ಪಾಲಿಕೆ ಚುನಾವಣೆ: ಯೋಗಿ ಆದಿತ್ಯನಾಥ್ ರೋಡ್ ಶೋ ಹೈದರಾಬಾದ್ ಪಾಲಿಕೆ ಚುನಾವಣೆ: ಯೋಗಿ ಆದಿತ್ಯನಾಥ್ ರೋಡ್ ಶೋ

GHMC Elections No Victory Rally For 48 Hours Says Police

ಮತ ಎಣಿಕೆ ಅಂಗವಾಗಿ ಹೈದರಾಬಾದ್‌ನಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. "ನಗರದಲ್ಲಿ ಒಟ್ಟು ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ" ಎಂದು ನಗರ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಹೇಳಿದ್ದಾರೆ.

GHMC Election results: ಆರಂಭಿಕ ಮುನ್ನಡೆ ಪಡೆದ ಬಿಜೆಪಿ GHMC Election results: ಆರಂಭಿಕ ಮುನ್ನಡೆ ಪಡೆದ ಬಿಜೆಪಿ

"ಎಲ್ಲಾ ಮತ ಎಣಿಕೆ ಕೇಂದ್ರಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಸಿಆರ್‌ಪಿಎಫ್ ಮತ್ತು ಶಸ್ತ್ರ ಸಜ್ಜಿತ ಮೀಸಲು ಪೊಲೀಸರು ಎಣಿಕೆ ಕೇಂದ್ರದ ಭದ್ರತೆಗೆ ನಿಯೋಜನೆಗೊಂಡಿದ್ದಾರೆ" ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

GHMC EXIT POll: ''ಭಾಗ್ಯನಗರ'' ಬಿರ್ಯಾನಿ ಮತ್ತೆ TRS ಪಾಲು GHMC EXIT POll: ''ಭಾಗ್ಯನಗರ'' ಬಿರ್ಯಾನಿ ಮತ್ತೆ TRS ಪಾಲು

ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಹೈದರಾಬಾದ್ ನಗರದಲ್ಲಿ ಸಂಭ್ರಮಾಚರಣೆ ಮಾಡುವಂತಿಲ್ಲ. 48 ಗಂಟೆಗಳ ಕಾಲ ನಗರದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಸಂಭ್ರಮಾಚರಣೆ ಕಾರ್ಯಕ್ರಮ, ಜಾಥಾ ನಡೆಸುವಂತಿಲ್ಲ ಎಂದು ಹೈದರಾಬಾದ್ ನಗರ ಪೊಲೀಸರು ಆದೇಶ ನೀಡಿದ್ದಾರೆ.

ಪ್ರತಿ ಮತಎಣಿಕೆ ಕೇಂದ್ರದ ಭದ್ರತೆಯ ಉಸ್ತುವಾರಿಯನ್ನು ಎಸಿಪಿ ನೋಡಿಕೊಳ್ಳುತ್ತಿದ್ದಾರೆ. ಪ್ರತಿ ಮೂರು ಮತಎಣಿಕೆ ಕೇಂದ್ರಕ್ಕೆ ಒಬ್ಬ ಡಿಸಿಪಿಯನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಪ್ರತಿ ಕೇಂದ್ರದ ಬಳಿ ಪೊಲೀಸ್ ಚೆಕ್ ಪೋಸ್ಟ್, ಕಂಟ್ರೋಲ್ ರೂಂ ಮತ್ತು ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದೆ.

ಹೈದರಾಬಾದ್, ಸೈಬರಾಬಾದ್, ರಾಚಕೊಂಡ ಪೊಲೀಸ್ ಆಯುಕ್ತರು 48 ಗಂಟೆಗಳ ಕಾಲ ಸಂಭ್ರಮಾಚರಣೆ ಮಾಡದಂತೆ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿವೆ. ಮತ ಎಣಿಕೆ ಪಕ್ರಿಯೆ ಮುಂದುವರೆದಿದೆ.

English summary
Hyderabad police commissioner Anjani Kumar said that no victory rally in city for 48 hours after the election result of GHMC announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X