• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

GHMC Election results: ಆರಂಭಿಕ ಮುನ್ನಡೆ ಪಡೆದ ಬಿಜೆಪಿ

|

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದತ್ತ ದೇಶದ ಪ್ರಮುಖ ಪಕ್ಷಗಳ ಕಣ್ಣು ನೆಟ್ಟಿದೆ. ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಗೆ ಸವಾಲು ಹಾಕಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ಭಾರಿ ಪ್ರಚಾರಕ್ಕೆ ಬೆಲೆ ಸಿಗುವುದೇ? ಎಂಐಎಂ ಒವೈಸಿ ಸೋದರರ ವಾರ್ಡ್ ಯಾರು ಪಾಲಾಗುವುದು? ಎಂಬ ಪ್ರಶ್ನೆಗೆ ಡಿಸೆಂಬರ್ 4ರಂದು ಉತ್ತರ ಸಿಗಲಿದೆ.

ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಹೊರ ಬಂದಿದ್ದು, ಹೈದರಾಬಾದ್ ಚುನಾವಣೆಯನ್ನು ಮತ್ತೊಮ್ಮೆ ತೆಲಂಗಾಣ ರಾಷ್ಟ್ರ ಸಮಿತಿ ಗೆಲ್ಲಲಿದೆ ಎಂಬ ವರದಿ ಬಂದಿದೆ. 150 ಸ್ಥಾನಕ್ಕಾಗಿ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಡಿಸೆಂಬರ್ 1ರಂದು ಶೇ 46ರಷ್ಟು ಮತದಾನ ದಾಖಲಾಗಿತ್ತು. ಸುಮಾರು 1,122 ಅಭ್ಯರ್ಥಿಗಳ ಭವಿಷ್ಯ ಇಂದು ತಿಳಿಯಲಿದೆ.

GHMC EXIT POll: ''ಭಾಗ್ಯನಗರ'' ಬಿರ್ಯಾನಿ ಮತ್ತೆ TRS ಪಾಲು

ಆರಂಭಿಕ ಮತ ಎಣಿಕೆಯಲ್ಲಿ ಬಿಜೆಪಿ 8 ಹಾಗೂ ಟಿಆರ್ ಎಸ್ 3 ಕಡೆಗಳಲ್ಲಿ ಮುನ್ನಡೆ ಪಡೆದುಕೊಂಡಿವೆ.

ತೆಲಂಗಾಣ ರಾಷ್ಟ್ರೀಯ ಸಮಿತಿ ಕಳೆದ ಬಾರಿಯಂತೆ 99 ಸ್ಥಾನ ಗಳಿಸಲು ಸಾಧ್ಯವೇ ಇಲ್ಲ, 70ಪ್ಲಸ್ ಗಳಿಸುವ ಸಾಧ್ಯತೆ ಹೆಚ್ಚಿದೆ. ಬಿಜೆಪಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಪಡೆಯಲಿದ್ದು, 18 ರಿಂದ 20 ವಾರ್ಡ್ ತನ್ನ ವಶಕ್ಕೆ ಪಡೆದುಕೊಳ್ಳಲಿದೆ. ಎಂಐಎಂ ಕಳೆದ ಬಾರಿ ಪ್ರದರ್ಶನವನ್ನೇ ಮತ್ತೆ ತೋರಲಿದೆ. ಕಾಂಗ್ರೆಸ್ ಪ್ರದರ್ಶನದಲ್ಲಿ ಯಾವುದೇ ಏಳಿಗೆ ಇಲ್ಲ ಎಂದು ಸಮೀಕ್ಷೆಗಳು ಹೇಳಿವೆ.

2016ರಲ್ಲಿ ಟಿಆರ್ ಎಸ್ 99(43%), ಎಂಐಎಂ 44(15.85%), ಕಾಂಗ್ರೆಸ್ 1(10.40%), ಟಿಡಿಪಿ 2 (13.11%) ಹಾಗೂ ಬಿಜೆಪಿ 4 (10.34%) ಫಲಿತಾಂಶ ಬಂದಿತ್ತು.

ಟಿಆರ್ ಎಸ್ ನೂರಕ್ಕೂ ಅಧಿಕ ಸ್ಥಾನ ಗಳಿಸಲಿದೆ. ಬಿಜೆಪಿಯ ದೊಡ್ಡ ನಾಯಕರು ಬಂದು ಸುಳ್ಳು ಆಶ್ವಾಸನೆ ನೀಡಿ ಹೋಗಿದ್ದಾರೆ. ಹೈದರಾಬಾದ್ ಜನರು ಸುಳ್ಳನ್ನು ನಂಬದೆ ಕೆಸಿಆರ್ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ ಎಂಬುದು ಸಂತೋಷದ ಸಂಗತಿ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಪುತ್ರಿ ಕೆ ಕವಿತಾ ಪ್ರತಿಕ್ರಿಯಿಸಿದ್ದಾರೆ.

English summary
The counting of votes in the high-stakes Hyderabad civic poll has begun at 8 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X