Breaking; ಹೈದರಾಬಾದ್ ಅತ್ಯಾಚಾರ ಪ್ರಕರಣ; 4ನೇ ಆರೋಪಿ ಬಂಧನ

ಹೈದರಾಬಾದ್, ಜೂನ್ 05; ಹೈದರಾಬಾದ್‌ನಲ್ಲಿ ಕಾರಿನೊಳಗೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿ ಬಂಧಿಸಲಾಗಿದೆ. ಈ ಆರೋಪಿ ಸಹ ಅಪ್ರಾಪ್ತನಾಗಿದ್ದು, 5ನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

ಕಳೆದ ಶನಿವಾರ 17 ವರ್ಷದ ಯುವತಿ ಮೇಲೆ ಕಾರಿನಲ್ಲಿ ಐವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ಪ್ರಕರಣದಲ್ಲಿ ಮೂವರು ಆರೋಪಿಗಳು ಅಪ್ರಾಪ್ತರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಇದುವರೆಗೂ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ನಾಲ್ಕನೇ ಆರೋಪಿಯನ್ನು ಭಾನುವಾರ ವಶಕ್ಕೆ ಪಡೆಯಲಾಗಿದೆ. ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.

Gang Rape In Car At Hyderabad 4th Accused Arrested

ತೆಲಂಗಾಣ ರಾಜಕೀಯದಲ್ಲಿ ಈ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳಲ್ಲಿ ಅಧಿಕಾರಿಗಳು, ಶಾಸಕರ ಪುತ್ರರು ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ರಾಜ್ಯ ಬಿಜೆಪಿ ಘಟಕ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಆಗ್ರಹ ಮಾಡುತ್ತಿದೆ.

ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತಾಗಿರುವ ಆರೋಪಿಗಳಲ್ಲಿ ಒಬ್ಬ ಟಿಆರ್‌ಎಸ್ ಮುಖಂಡರೊಬ್ಬರ ಪುತ್ರ. ಶುಕ್ರವಾರ ಒಬ್ಬ ಆರೋಪಿನ್ನು ಬಂಧಿಸಲಾಗಿತ್ತು. ಶನಿವಾರ ಮತ್ತಿಬ್ಬರನ್ನು ಬಂಧಿಸಲಾಗಿದೆ. ಭಾನುವಾರ 4ನೇ ಆರೋಪಿ ಬಂಧನವಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಂತ್ರಸ್ತ ಯುವತಿ ಒಬ್ಬ ಆರೋಪಿಯ ಹೆಸರನ್ನು ಮಾತ್ರ ಹೇಳಿದ್ದಳು. ಈ ಮಾಹಿತಿ ಮೇರೆಗೆ ಆರೋಪಿ ಬಂಧಿಸಿ ವಿಚಾರಣೆ ನಡೆಸಿದ ಬಳಿಕ ನಾಲ್ವರನ್ನು ಬಂಧಿಸಲಾಗಿದೆ. 5ನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

ಪಬ್‌ನಲ್ಲಿ ಯುವತಿ ಪರಿಚಯ ಮಾಡಿಕೊಂಡ ಆರೋಪಿಗಳು. ಆಕೆಯನ್ನು ಮನೆಗೆ ಡ್ರಾಪ್ ಮಾಡುವ ಭರವಸೆ ನೀಡಿ ಕಾರು ಹತ್ತಿಸಿಕೊಂಡಿದ್ದರು. ಬಳಿಕ ಕಾಪಿ ಶಾಪ್‌ಗೆ ಕರೆದುಕೊಂಡು ಬಂದಿದ್ದರು. ಅಲ್ಲಿಂದ ಹೊರಟು ನಿರ್ಜನ ಪ್ರದೇಶಕ್ಕೆ ಬಂದಾಗ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬುದು ಆರೋಪವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+