ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬೀರ್ ಮೇಲೆ ಗಾಂಧಿ ಚಿತ್ರ' ಕನೆಕ್ಟಿಕಟ್ ಕಂಪ್ನಿನಿಂದ ಕ್ಷಮೆ

By Mahesh
|
Google Oneindia Kannada News

ಹೈದರಾಬಾದ್, ಜ.4: ಅಮೆರಿಕದ ಕನೆಕ್ಟಿಕಟ್ ಮೂಲದ ಮದ್ಯ ಉತ್ಪಾದನಾ ಸಂಸ್ಥೆಯೊಂದು ತನ್ನ ಬಿಯರ್ ಕ್ಯಾನ್ ಹಾಗೂ ಬಾಟ್ಲಿಗಳ ಮೇಲೆ ಮಹಾತ್ಮಾ ಗಾಂಧೀಜಿ ಅವರ ಚಿತ್ರ ಬಳಸಿಕೊಂಡು ಭಾರಿ ಪ್ರಮಾದ ಎಸಗಿದ ಮೇಲೆ ಎಚ್ಚೆತ್ತುಕೊಂಡಿದೆ. ಕುಡಿತದ ವಿರುದ್ಧ ಹೋರಾಟ ನಡೆಸಿದ್ದ ವಿಶ್ವಮಾನ್ಯ ಬಾಪು ಅವರ ಚಿತ್ರ ಬಳಸಿದ್ದ ಕಂಪನಿ ಈಗ ಕ್ಷಮೆಯಾಚಿಸಿದೆ.

ಮದ್ಯಪಾನ ವಿರೋಧಿಯಾಗಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಹೆಸರು ದುರ್ಬಳಕೆಯಾಗಿರುವುದನ್ನು ಖಂಡಿಸಿ ಹೈದರಾಬಾದಿನ ಕೋರ್ಟಿನಲ್ಲಿ ಪಿಟೀಷನ್ ದಾಖಲಿಸಲಾಗಿತ್ತು. ಹೈದರಾಬಾದ್ ಮೂಲದ ವಕೀಲ ಜನಾರ್ಧನ್ ಗೌಡ್(38) ಅವರು 11ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

Gandhi’s image on beer cans; U.S. company draws ire, apologises

ಇದಕ್ಕೆ ಉತ್ತರಿಸಿರುವ ಅಮೆರಿಕದ ಕನೆಕ್ಟಿಕಟ್ ಮೂಲದ 'ನ್ಯೂ ಇಂಗ್ಲೆಂಡ್ ಬ್ರ್ಯೂಯಿಂಗ್ ಕಂಪನಿ 'ಗಾಂಧಿ ಬಾಟ್' ಬ್ರ್ಯಾಂಡ್ ಬೀರ್ ಗಳ ಪ್ರಚಾರಕ್ಕೆ ಗಾಂಧೀಜಿ ಅವರ ಹೆಸರು ಬಳಸುವ ಮುನ್ನ ಅವರ ಮೊಮ್ಮಗಳು ಹಾಗೂ ಮೊಮ್ಮಗನ ಅನುಮತಿ ಕೋರಿದ್ದೆವು. ಅವರ ಒಪ್ಪಿಗೆ ಮೇರೆ ಗಾಂಧಿ ಚಿತ್ರವನ್ನು ಬಳಸಿಕೊಂಡಿದ್ದೇವೆ. ಆದರೆ, ಇದರಿಂದ ಜನರ ಭಾವನೆಗೆ ಧಕ್ಕೆ ಉಂಟಾಗಿದ್ದಾರೆ ಕ್ಷಮಿಸಿ ಎಂದು ಪ್ರತಿಕ್ರಿಯಿಸಿದೆ.

ಜನಾರ್ಧನ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ಸೋಮವಾರ ನಡೆಯುವ ಸಾಧ್ಯತೆಯಿದೆ. ಅದರೆ, ಕಾನೂನು ಬದ್ಧವಾಗಿ ಅಮೆರಿಕದ ಸಂಸ್ಥೆಗೆ ನೋಟಿಸ್ ಕೊಡಲು ಸಾಧ್ಯವಾಗುವುದೇ ಎಂಬ ಪ್ರಶ್ನೆ ಎದ್ದಿದೆ.ಇಂಥ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಿಕೊಡುವ ಹೊಸ ಕಾನೂನನ್ನು ಸೃಷ್ಟಿಸಬೇಕು ಎಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ 1971ರ Prevention of Insults to National Honour Act ಹಾಗೂ ಐಪಿಸಿ ಸೆಕ್ಷನ್ 124 ಎ ಅನ್ವಯ ಪಿಟೀಷನ್ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. (ಪಿಟಿಐ)

English summary
The use of Mahatma Gandhi’s image on beer cans and bottle by a U.S. company has raised hackles with a petition being filed in a Hyderabad court alleging it had insulted the father of the nation following which the liquor company has apologised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X