ವಿಶಾಖಪಟ್ಟಣದಲ್ಲಿ ಅಗ್ನಿ ಆಕಸ್ಮಿಕ, 6 ಟ್ಯಾಂಕರ್ ಸ್ಫೋಟ

Posted By:
Subscribe to Oneindia Kannada

ಹೈದರಾಬಾದ್, ಏಪ್ರಿಲ್ 27 : ವಿಶಾಖಪಟ್ಟಣಂನಲ್ಲಿ ಬಯೋಮ್ಯಾಕ್ಸ್ ತೈಲ ಕಂಪನಿಯ ತೈಲ ಸಂಗ್ರಹಗಾರದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. 6 ತೈಲ ಟ್ಯಾಂಕರ್‌ಗಳು ಸ್ಫೋಟಗೊಂಡಿದ್ದು, 14 ಅಗ್ನಿ ಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

ವಿಶಾಖಪಟ್ಟಣಂನಲ್ಲಿನ ದುವ್ವಾಡ ಸಮೀಪದ ವಿಶೇಷ ಆರ್ಥಿಕ ವಲಯದಲ್ಲಿ ಬಯೋಮ್ಯಾಕ್ಸ್ ತೈಲ ಕಂಪನಿ ಇದೆ. ಮಂಗಳವಾರ ರಾತ್ರಿ ಇಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ನೌಕಾದಳದ ಅಗ್ನಿಶಾಮಕ ಪಡೆ ಸಹ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.

ಅಗ್ನಿ ಆಕಸ್ಮಿಕದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಬಯೋಮ್ಯಾಕ್ಸ್ ತೈಲ ಕಂಪನಿ ಅಧಿಕಾರಿಗಳು ಹೇಳಿದ್ದಾರೆ. ಸಂಗ್ರಹಗಾರದಲ್ಲಿದ್ದ 15 ತೈಲ ಟ್ಯಾಂಕರ್‌ಗಳ ಪೈಕಿ 6 ಟ್ಯಾಂಕರ್‌ಗಳು ಸ್ಫೋಟಗೊಂಡಿವೆ. ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಬೆಂಕಿಯನ್ನು ಹತೋಟಿಗೆ ತರಲಾಗಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A fire broke out at Biomax Fuels Limited (BFL), a bio-diesel manufacturing unit in the Vishakapatnam Special Economic Zone (SEZ), Duvvada area in the city.14 fire engines reached the spot, six oil tankers exploded due to the fire.
Please Wait while comments are loading...