• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅತಿ ಹೆಚ್ಚು ಇವಿಎಂ ಬಳಕೆ, ಇತಿಹಾಸ ಸೃಷ್ಟಿಸಿದ ನಿಜಾಮಾಬಾದ್

|

ಹೈದರಾಬಾದ್, ಏಪ್ರಿಲ್ 11: ತೆಲಂಗಾಣ ರಾಜ್ಯದ ನಿಜಾಮಬಾದ್ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 11ರಂದು ಹೊಸ ಇತಿಹಾಸ ಸೃಷ್ಟಿಸಿದೆ. ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದ ಈ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಬಳಸಲು ಸಾಧ್ಯವಿಲ್ಲ, ಬ್ಯಾಲೆಟ್ ಪೇಪರ್ ಬಳಸಬಹುದು ಎಂಬ ನಿರೀಕ್ಷೆಯಿತ್ತು.

ಆದರೆ, ಚುನಾವಣಾ ಆಯೋಗವು ಹೊಸ ಇತಿಹಾಸ ನಿರ್ಮಿಸಿದ್ದು, ದೊಡ್ಡ ಗಾತ್ರ ಇವಿಎಂ ಬಳಸಿ ಮತದಾನಕ್ಕೆ ಅನುವು ಮಾಡಿಕೊಟ್ಟಿದೆ. ನಿಜಾಮಾಬಾದ್ ಕ್ಷೇತ್ರದ 1,778 ಮತಗಟ್ಟೆಗಳಲ್ಲಿ 'ಎಲ್' ಅಕೃತಿಯ ಬೃಹತ್ ಗಾತ್ರದ ಇವಿಎಂಗಳನ್ನು ಬಳಸಿಕೊಳ್ಳಲಾಗಿದೆ. ಪ್ರತಿ ಇವಿಎಂನಲ್ಲೂ 16 ಅಭ್ಯರ್ಥಿಗಳ ಹೆಸರು ಇರಲಿದೆ.

ಲೋಕಸಭೆ ಚುನಾವಣೆ LIVE: ಮತದಾನದ ವೇಳೆ ಇಬ್ಬರು ಕಾರ್ಯಕರ್ತರ ಬರ್ಬರ ಹತ್ಯೆ

ಅತಿ ಹೆಚ್ಚು ಅಭ್ಯರ್ಥಿಗಳು: ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ- ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಮಗಳು ಕಲ್ವಕುಂಟ್ಲ ಕವಿತಾ ಸ್ಪರ್ಧಿಸುತ್ತಿದ್ದಾರೆ. ಕವಿತಾ ಹೊರತುಪಡಿಸಿ, ಕಾಂಗ್ರೆಸ್ ನಿಂದ ಮಧು ಯಕ್ಷಿ ಗೌಡ್, ಬಿಜೆಪಿಯ ಧರ್ಮಪುರಿ ಅರವಿಂದ್ ಸ್ಪರ್ಧೆಯಲ್ಲಿದ್ದಾರೆ. ಮಿಕ್ಕಂತೆ 178 ಮಂದಿ ರೈತರು ಕಣದಲ್ಲಿದ್ದಾರೆ. ಅಗತ್ಯ ಬೆಂಬಲ ಬೆಳೆ ನೀಡದ ಕಾರಣ, ರೈತ ಸಮೂಹ ರಾಜಕೀಯಕ್ಕೆ ಕಾಲಿಟ್ಟಿದೆ.

ಆದರೆ, ಅತಿ ಹೆಚ್ಚು ಅಭ್ಯರ್ಥಿಗಳನ್ನು ಹೊಂದಿರುವ ಕ್ಷೇತ್ರ ಕರ್ನಾಟಕದ ಬೆಳಗಾವಿಗೆ ಸಲ್ಲುತ್ತದೆ. ಈ ಮುಂಚೆ 456 ಅಭ್ಯರ್ಥಿಗಳು ಕಣದಲ್ಲಿದ್ದರು.

ಮಾರ್ಚ್ 25ನೇ ತಾರೀಕು ಹೊತ್ತಿಗೆ ಇನ್ನೂರಕ್ಕೂ ಹೆಚ್ಚು ಮಂದಿ ನಾಮಪತ್ರ ಸಲ್ಲಿಸಿದ್ದರು. ಕೆಲವು ತಿರಸ್ಕೃತವಾದವು. ಕೊನೆಗೆ 189 ಮಂದಿ ಉಳಿದರು. ಅದರಲ್ಲಿ 4 ಮಂದಿ ನಾಮಪತ್ರ ಹಿಂಪಡೆದಿದ್ದರು. ಅಂತಿಮವಾಗಿ ಇಂದು ನಡೆದಿರುವ ಮತದಾನ ಪ್ರಕ್ರಿಯೆಯಲ್ಲಿ 180 ಅಭ್ಯರ್ಥಿಗಳ ಹೆಸರುಳ್ಳ ಇವಿಎಂಗಳು ಕಾಣಿಸಿಕೊಂಡಿವೆ.

ಮುತ್ತಿನ ನಗರಿ ಹೈದರಾಬಾದ್: ಲೋಕಸಭಾ ಕ್ಷೇತ್ರ ಪರಿಚಯ

ಸಾಮಾನ್ಯ ಇವಿಎಂಗಳನ್ನು 64 ಮಂದಿ ಅಭ್ಯರ್ಥಗಳಿರುವ ಕ್ಷೇತ್ರಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಭ್ಯರ್ಥಿಗಳಿದ್ದರೆ ಬ್ಯಾಲೆಟ್ ಪೇಪರ್ ಬಳಸಿ ಚುನಾವಣಾ ಪ್ರಕ್ರಿಯೆ ನಡೆಸಲಾಗುತ್ತದೆ.

ಆದರೆ, ತೆಲಂಗಾಣದ ಮುಖ್ಯ ಚುನಾವಣಾಧಿಕಾರಿ ರಜತ್ ಕುಮಾರ್ ಅವರು 26,820 ಜಂಬೋ ಇವಿಎಂಗಳನ್ನು ತರಿಸಿಕೊಂಡು ನಿಜಾಬಾಮಾದ್ ನಲ್ಲಿ ಮತದಾನ ಪ್ರಕ್ರಿಯೆ ಇವಿಎಂ ಮೂಲಕವೆ ನಡೆಯುವಂತೆ ನೋಡಿಕೊಂಡಿದ್ದಾರೆ.

ಸಾಮಾನ್ಯ ಇವಿಎಂ ಬಳಸಿದಾಗ ಚುನಾವಣಾ ಸಮಯದಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ನೋಡಿಕೊಳ್ಳಲು 15 ರಿಂದ 60 ಮಂದಿ ಇಂಜಿನಿಯರ್ ಗಳಿರುತ್ತಾರೆ. ನಿಜಾಮಾಬಾದ್ ನಲ್ಲಿ ಈ ಕಾರ್ಯಕ್ಕಾಗಿ 600 ಮಂದಿ ಇಂಜಿನಿಯರ್ ಗಳನ್ನು ಬಳಸಿಕೊಳ್ಳಲಾಗಿದೆ. 26,000 ಬ್ಯಾಲೆಟ್ ಯೂನಿಟ್, 2,200 ಕಂಟ್ರೋಲ್ ಯೂನಿಟ್, 26,000 ವಿವಿಪ್ಯಾಟ್ ಗಳನ್ನು ಬಳಸಲಾಗಿದೆ.

ಮೊದಲ ಹಂತದಲ್ಲಿ ಅಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ ಗಡ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ, ತೆಲಂಗಾಣ, ತ್ರಿಪುರ, ಉತ್ತರಪ್ರದೇಶ, ಉತ್ತರಾಖಂಡ್, ಪಶ್ಚಿಮ ಬಂಗಾಲ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶ ಸೇರಿದಂತೆ 91 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿದೆ.

ಏಪ್ರಿಲ್ 11 ರಿಂದ ಮೇ 19ರ ತನಕ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, 543 ಕ್ಷೇತ್ರಗಳ ಚುನಾವಣಾ ಫಲಿತಾಂಶ ಮೇ 23ರಂದು ಪ್ರಕಟವಾಗಲಿದೆ.

English summary
Elections 2019: The Nizamabad Lok Sabha constituency in Telangana is all set to get into the record books with more than 180 people in the fray for the 2019 Lok Sabha general elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X