ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಚ್‍ಎಂಸಿ ಚುನಾವಣೆ ಪ್ರಚಾರ ಅಂತ್ಯ; ಡಿ.1ಕ್ಕೆ ಮತದಾನ

|
Google Oneindia Kannada News

ಹೈದರಾಬಾದ್, ನವೆಂಬರ್ 30 : ದೇಶಾದ್ಯಂತ ಕುತೂಹಲ ಮೂಡಿಸಿರುವ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‍ಎಂಸಿ) ಚುನಾವಣೆಯ ಪ್ರಚಾರ ಅಂತ್ಯಗೊಂಡಿದೆ. ಡಿಸೆಂಬರ್ 1ರಂದು ಮತದಾನ ನಡೆಯಲಿದೆ.

1,122 ಅಭ್ಯರ್ಥಿಗಳು ಜಿಎಚ್‍ಎಂಸಿ ಚುನಾವಣಾ ಕಣದಲ್ಲಿದ್ದಾರೆ. 150 ವಾರ್ಡ್‌ಗಳ 67 ಲಕ್ಷ ಜನರು ಅಭ್ಯರ್ಥಿಗಳ ಆಯ್ಕೆ ಮಾಡಲು ಡಿಸೆಂಬರ್ 1ರ ಮಂಗಳವಾರ ಮತದಾನ ಮಾಡಲಿದ್ದಾರೆ.

 ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಯೋಗಿ ಆದಿತ್ಯನಾಥ್ ರೋಡ್ ಶೋ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಯೋಗಿ ಆದಿತ್ಯನಾಥ್ ರೋಡ್ ಶೋ

ದೇಶಾದ್ಯಂತ ಜಿಎಚ್‍ಎಂಸಿ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿವಿಧ ಸಂಸದರು ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ನಡೆಸಿದ್ದಾರೆ.

2022ರೊಳಗೆ ಕಸ ಮುಕ್ತ ಹೈದರಾಬಾದ್, ಕಾಂಗ್ರೆಸ್ ಭರವಸೆ 2022ರೊಳಗೆ ಕಸ ಮುಕ್ತ ಹೈದರಾಬಾದ್, ಕಾಂಗ್ರೆಸ್ ಭರವಸೆ

ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಟಿಆರ್‌ಎಸ್ ಪಕ್ಷ ಸಹ ಹೈದರಾಬಾದ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಪಕ್ಷದ ಕಾರ್ಯಾಧ್ಯಕ್ಷರು ಚುನಾವಣೆಯ ಸಂಪೂರ್ಣ ಉಸ್ತುವಾರಿಯನ್ನು ಹೊತ್ತುಕೊಂಡಿದ್ದಾರೆ.

ಹೈದರಾಬಾದ್ ಪಾಲಿಕೆ ಚುನಾವಣೆಗೆ ಪವನ್ ಕಲ್ಯಾಣ್ ಪಕ್ಷ ಎಂಟ್ರಿ ಹೈದರಾಬಾದ್ ಪಾಲಿಕೆ ಚುನಾವಣೆಗೆ ಪವನ್ ಕಲ್ಯಾಣ್ ಪಕ್ಷ ಎಂಟ್ರಿ

ಕುತೂಹಲ ಕೆರಳಿಸಿರುವ ಚುನಾವಣೆ

ಕುತೂಹಲ ಕೆರಳಿಸಿರುವ ಚುನಾವಣೆ

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಮೊದಲ ಬಾರಿಗೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬಂದರೆ, ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಮತ್ತು ಪಕ್ಷದ ಹಿರಿಯ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ. ಅಸಾದುದ್ದೀನ್ ಓವೈಸಿ ಸಹ ಪಕ್ಷದ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಘಟಾನುಘಟಿ ನಾಯಕರ ಆಗಮನ

ಘಟಾನುಘಟಿ ನಾಯಕರ ಆಗಮನ

ಬಿಜೆಪಿ ಪರವಾಗಿ ಕೇಂದ್ರ ಸಚಿವರವಾದ ಅಮಿತ್ ಶಾ, ಸ್ಮೃತಿ ಇರಾನಿ, ಕೃಷ್ಣಾ ರೆಡ್ಡಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಚಾರ ಮಾಡಿದ್ದಾರೆ. ಅಸಾದುದ್ದೀನ್ ಓವೈಸಿ ಅವರ ಜೊತೆ ಟಿಆರ್‌ಎಸ್ ಗೌಪ್ಯ ಮೈತ್ರಿ ಮಾಡಿಕೊಂಡಿದೆ ಎಂದು ಪಕ್ಷದ ನಾಯಕರ ವಿರುದ್ದ ಆರೋಪ ಮಾಡಿದ್ದರು.

ಟಿಆರ್‌ಎಸ್ ಪ್ರತಿಷ್ಠೆಯ ಪ್ರಶ್ನೆ

ಟಿಆರ್‌ಎಸ್ ಪ್ರತಿಷ್ಠೆಯ ಪ್ರಶ್ನೆ

ತೆಲಂಗಾಣದ ಆಡಳಿತ ಪಕ್ಷ ಟಿಆರ್‌ಎಸ್‌ಗೆ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು. ಹೈದರಾಬಾದ್ ನಗರದ ಅಭಿವೃದ್ಧಿಗೆ ಪಕ್ಷದ ಚಿಂತನೆಯನ್ನು ಜನರ ಮುಂದೆ ನವೆಂಬರ್ 28ರಂದು ಸಮಾವೇಶ ನಡೆಸುವ ಮೂಲಕ ತೆರೆದಿಟ್ಟಿದ್ದರು.

ಡಿಸೆಂಬರ್ 4ಕ್ಕೆ ಫಲಿತಾಂಶ

ಡಿಸೆಂಬರ್ 4ಕ್ಕೆ ಫಲಿತಾಂಶ

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಡಿಸೆಂಬರ್ 1ರಂದು ಬೆಳಗ್ಗೆ 7ರಿಂದ ಸಂಜೆ 6ರ ತನಕ ನಡೆಯಲಿದೆ. ಶಾಂತಿಯುತ ಚುನಾವಣೆಗಾಗಿ 51,000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಡಿಸೆಂಬರ್ 4ರಂದು ಮತ ಎಣಿಕೆ ನಡೆಯಲಿದೆ.

English summary
Campaign for Greater Hyderabad Municipal Corporation ended on Sunday, November 29. Stage set for voting on December 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X