ಹೈದರಾಬಾದ್ : ಐಟಿ ದಾಳಿ, 17 ಲಕ್ಷ ಅಕ್ರಮ ಹಣ ವಶ

Posted By:
Subscribe to Oneindia Kannada

ಹೈದರಾಬಾದ್, ಡಿಸೆಂಬರ್ 07: ಆದಾಯ ತೆರಿಗೆ ಇಲಾಖೆ, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಜಂಟಿಯಾಗಿ ಬುಧವಾರದಂದು ದಾಳಿ ನಡೆಸಿ, ಅಪಾರ ಪ್ರಮಾಣದ ಅಕ್ರಮ ಹಣವನ್ನು ಜಪ್ತಿ ಮಾಡಿದ್ದಾರೆ.

ಹೈದರಾಬಾದಿನ ವಿವಿಧೆಡೆ ನಡೆದ ದಾಳಿಯಲ್ಲಿ 2000ರು ಮುಖಬೆಲೆಯ ನೋಟುಗಳಲ್ಲಿ 17.02 ಲಕ್ಷ ರು ನಗದು, ಲ್ಯಾಪ್ ಟಾಪ್, ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.[ಬೆಂಗಳೂರಿನ ಕೆನರಾ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಮೇಲೆ ದಾಳಿ]

Demonetisation- Income Tax and CBI raids in Hyderabad

ಇನ್ನೊಂದೆಡೆ ಹೈದರಾಬಾದಿನ ಉದ್ಯಮಿಯೊಬ್ಬರ ಮನೆ ಹಾಗೂ ಕಚೇರಿ ಮೇಲೆ ದಾಳಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ್ದಾರೆ. ಉದ್ಯಮಿ ಬಿ ಲಕ್ಷ್ಮಣ್ ರಾವ್ ಅವರು ಸ್ವಯಂ ಘೋಷಣೆ ಯೋಜನೆ ಅಡಿಯಲ್ಲಿ ಸುಮಾರು 9,800 ಕೋಟಿ ರು ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದರು.

ಇದಲ್ಲದೆ ದೇಶದ ವಿವಿಧೆಡೆ ಬ್ಯಾಂಕುಗಳ ಮೇಲೆ ಐಟಿ ದಾಳಿ ಮುಂದುವರೆದಿದೆ. ಇತ್ತೀಚೆಗೆ ಹಳೆ ನೋಟು ನೀಡಿ ಹೊಸ ನೋಟು ಅಕ್ರಮವಾಗಿ ಬದಲಿ ಮಾಡಿಕೊಡುತ್ತಿದ್ದ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ರೊಬ್ಬರನ್ನು ಬಂಧಿಸಲಾಗಿತ್ತು. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sleuths from the Income Tax department as well as Central Bureau of Investigation conducted raids in multiple locations across Hyderabad on Wednesday.
Please Wait while comments are loading...