ತೆಲಂಗಾಣ ಚುನಾವಣೆ : ಟಿಡಿಪಿ ಜೊತೆ ಮೈತ್ರಿ ಮುಂದುವರೆಸಲಿದೆ ಕಾಂಗ್ರೆಸ್

ಹೈದರಾಬಾದ್, ಡಿಸೆಂಬರ್ 11 : ತೆಲಂಗಾಣ ವಿಧಾನಸಭೆ ಚುನಾವಣೆ 2018ರಲ್ಲಿ ಕಾಂಗ್ರೆಸ್‌-ಟಿಡಿಪಿ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ. ಆದರೆ, ಟಿಡಿಪಿ ಜೊತೆಗಿನ ಮೈತ್ರಿಯನ್ನು ಮುಂದುವರೆಸುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದೆ.

ತೆಲಂಗಾಣ ವಿಧಾನಸಭೆ ಚುನಾವಣೆಯ ಮತಎಣಿಕೆ ಮಂಗಳವಾರ ನಡೆಯುತ್ತಿದೆ. ಟಿಆರ್‌ಎಸ್ 93 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.ಕಾಂಗ್ರೆಸ್‌-ಟಿಡಿಪಿ ಮೈತ್ರಿಕೂಟ 'ಪ್ರಜಾಕೂಟಮಿ' 17 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಆದರೂ ಟಿಡಿಪಿ ಜೊತೆಗಿನ ಮೈತ್ರಿಯನ್ನು ಮುಂದುವರೆಸುತ್ತೇವೆ ಎಂದು ಕಾಂಗ್ರೆಸ್ ಮಂಗಳವಾರ ಘೋಷಣೆ ಮಾಡಿದೆ. ಇದರಿಂದಾಗಿ 2019ರ ಲೋಕಸಭಾ ಚುನಾವಣೆಯಲ್ಲಿಯೂ ಟಿಡಿಪಿ-ಕಾಂಗ್ರೆಸ್‌ ಮೈತ್ರಿ ಮುಂದುವರೆಯುವ ಸಾಧ್ಯತೆ ಇದೆ.

ತೆಲಂಗಾಣ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಚಂದ್ರಶೇಖರರಾವ್ ನೇತೃತ್ವದ ಟಿಆರ್‌ಎಸ್ ಸೋಲಿಸುವ ಕಾಂಗ್ರೆಸ್‌ ತಂತ್ರ ವಿಫಲವಾಗಿದೆ. ಮುಂಬರುವ ಲೋಕಸಭಾ ಚುನಾವಣೆ, ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯ ದೃಷ್ಟಿಯಲ್ಲಿ ಈ ಮೈತ್ರಿ ಮಹತ್ವ ಪಡೆದುಕೊಂಡಿದೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಿಂದ ಲಾಭವಾಗಲಿದೆಯೇ? ಕಾದು ನೋಡಬೇಕು....

ಟಿಆರ್‌ಎಸ್ ಎದುರು ಮೈತ್ರಿಕೂಟ

ಟಿಆರ್‌ಎಸ್ ಎದುರು ಮೈತ್ರಿಕೂಟ

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಟಿಆರ್‌ಎಸ್ ವಿರುದ್ಧವಾಗಿ 'ಪ್ರಜಾಕೂಟಮಿ' ಎಂಬ ಮೈತ್ರಿಕೂಟ ರಚನೆಯಾಗಿತ್ತು. ಇದರಲ್ಲಿ ಪ್ರಮುಖವಾಗಿ ಕಾಂಗ್ರೆಸ್‌ ಮತ್ತು ಚಂದ್ರಬಾಬುನಾಯ್ಡು ನೇತೃತ್ವದ ಟಿಆರ್‌ಎಸ್ ಪಕ್ಷಗಳು ಇದ್ದವು. ತೆಲಂಗಾಣ ಜನ ಸಮಿತಿ (ಟಿಜೆಎಸ್) ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಸಹ ಈ ಮೈತ್ರಿಕೂಟದಲ್ಲಿ ಇದ್ದವು.

ಚಂದ್ರಶೇಖರಾವ್ ಮೇಲುಗೈ

ಚಂದ್ರಶೇಖರಾವ್ ಮೇಲುಗೈ

ಪ್ರಜಾಕೂಟಮಿ ಮೈತ್ರಿಕೂಟಕ್ಕೆ ತೆಲಂಗಾಣ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. 119 ಸ್ಥಾನಗಳನ್ನು ಹೊಂದಿರುವ ರಾಜ್ಯದಲ್ಲಿ ಟಿಆರ್‌ಎಸ್ 92 ಸ್ಥಾನ, ಮೈತ್ರಿಕೂಟ 18, ಬಿಜೆಪಿ 3, ಇತರೆ ಪಕ್ಷದ ಅಭ್ಯರ್ಥಿಗಳು 1 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಮೈತ್ರಿ ಮುಂದುವರೆಯಲಿದೆ

ಮೈತ್ರಿ ಮುಂದುವರೆಯಲಿದೆ

ಚುನಾವಣೆಯಲ್ಲಿ ಹಿನ್ನಡೆ ಉಂಟಾದರೂ ಟಿಡಿಪಿ ಜೊತೆಗಿನ ಮೈತ್ರಿಯನ್ನು ಮುಂದುವರೆಸುತ್ತೇವೆ ಎಂದು ಕಾಂಗ್ರೆಸ್‌ ಪಕ್ಷ ಘೋಷಣೆ ಮಾಡಿದೆ. ಈ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಯಲಿದೆಯೇ? ಎಂದು ಕಾದು ನೋಡಬೇಕು.

ಬಿಜೆಪಿ ವಿರೋಧಿ ಮೈತ್ರಿಕೂಟ

ಬಿಜೆಪಿ ವಿರೋಧಿ ಮೈತ್ರಿಕೂಟ

2019ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಮೈತ್ರಿಕೂಟ ಮಹತ್ವ ಪಡೆದುಕೊಂಡಿದೆ. ಬಿಜೆಪಿಯನ್ನು ಎದುರಿಸಲು ಚಂದ್ರಬಾಬುನಾಯ್ಡು ಅವರು ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಮಹಾಘಟ್‌ಬಂಧನ್ ಕಟ್ಟುತ್ತಿದ್ದಾರೆ. ಆದ್ದರಿಂದ, ಕಾಂಗ್ರೆಸ್‌ ಡಿಡಿಪಿ ಜೊತೆ ಉಳಿಯಲು ನಿರ್ಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+